Daily Devotional: ಕೊಬ್ಬರಿ ಎಣ್ಣೆ ದೀಪ ಹಚ್ಚುವುದರ ಹಿಂದಿನ ಉಪಯೋಗಗಳು ತಿಳಿಯಿರಿ

Updated on: Sep 18, 2025 | 6:48 AM

ಕೊಬ್ಬರಿ ಎಣ್ಣೆ ದೀಪ ಹಚ್ಚುವುದು ನಮ್ಮ ಸಂಸ್ಕೃತಿಯಲ್ಲಿ ಪ್ರಮುಖವಾದ ಪೂಜಾ ವಿಧಾನ. ಈ ದೀಪವು ಮಾನಸಿಕ ನೆಮ್ಮದಿ, ಆರೋಗ್ಯ, ಮತ್ತು ಕುಲದೇವತೆಯ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ ಎಂಬ ನಂಬಕೆ. ಮಂಗಳವಾರ ಮತ್ತು ಶುಕ್ರವಾರ ಸಂಧ್ಯಾಕಾಲದಲ್ಲಿ ಕೊಬ್ಬರಿ ಎಣ್ಣೆ ದೀಪ ಹಚ್ಚುವುದು ವಿಶೇಷ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ.

ಬೆಂಗಳೂರು, ಸೆಪ್ಟೆಂಬರ್​ 18: ದೈನಂದಿನ ಪೂಜೆಯಲ್ಲಿ ಕೊಬ್ಬರಿ ಎಣ್ಣೆ ದೀಪದ ಬಳಕೆಯು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ದೀಪಂ ಜ್ಯೋತಿ ಪರಬ್ರಹ್ಮ ಎಂಬಂತೆ, ದೀಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಕೊಬ್ಬರಿ ಎಣ್ಣೆ ದೀಪವನ್ನು ಕುಲದೇವತೆ ಅಥವಾ ಇಷ್ಟ ದೇವತೆಯ ಮುಂದೆ ಹಚ್ಚುವುದರಿಂದ ಮಾನಸಿಕ ಶಾಂತಿ, ಆರೋಗ್ಯ ಸುಧಾರಣೆ, ಮತ್ತು ರೋಗಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಕೆ ಇದೆ. ಮಂಗಳವಾರ ಮತ್ತು ಶುಕ್ರವಾರ ಸಂಜೆ, ಬ್ರಾಹ್ಮಿ ಮುಹೂರ್ತದಲ್ಲಿ ಈ ದೀಪವನ್ನು ಹಚ್ಚುವುದು ಹೆಚ್ಚು ಶುಭಕರ ಎನ್ನಲಾಗುತ್ತದೆ.