ಕಣ್ಣಿಗೆ ಕಾಡಿಗೆ ಹಚ್ಚುವುದರ ಹಿಂದಿನ ರಹಸ್ಯ ಹಾಗೂ ಇದರ ಉಪಯೋಗ ತಿಳಿಯಿರಿ
ಕಾಡಿಗೆ ಹಚ್ಚುವುದು ಒಂದು ಹಳೆಯ ಸಂಪ್ರದಾಯ. ಇದನ್ನು ಮಕ್ಕಳಿಗೆ ಮತ್ತು ತಾಯಂದಿರಿಗೆ ದೃಷ್ಟಿದೋಷವಾಗಬಾರದು ಎಂದು ಬಳಸಲಾಗುತ್ತದೆ. ತಿರುಪತಿಯ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಕಾಡಿಗೆಯನ್ನು ಬಳಸುವುದನ್ನು ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಕಾಡಿಗೆಯ ಉಲ್ಲೇಖವಿದೆ. ಈ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ.
ಬೆಂಗಳೂರು, ಆಗಸ್ಟ್ 06: ಕಾಡಿಗೆ ಹಚ್ಚುವುದು ಒಂದು ಪ್ರಾಚೀನ ಸಂಪ್ರದಾಯ. ಇದನ್ನು ದೃಷ್ಟಿ ದೋಷ ಆಗಬಾರದಂದು ಸಹ ಬಳಸಲಾಗುತ್ತದೆ. ಹಿಂದೆ ತಾಯಂದಿರು ತಮ್ಮ ಮಕ್ಕಳಿಗೆ ಕೊಬ್ಬರಿ ಚಿಪ್ಪಿನಿಂದ ತಯಾರಿಸಿದ ಕಾಡಿಗೆಯನ್ನು ಹಚ್ಚುತ್ತಿದ್ದರು. ಇದು ಕೇವಲ ಸಂಪ್ರದಾಯವಲ್ಲದೆ, ಕೆಲವು ಜ್ಯೋತಿಷ್ಯ ಶಾಸ್ತ್ರಗಳಲ್ಲೂ ಉಲ್ಲೇಖಿಸಲ್ಪಟ್ಟಿದೆ. ಕಾಡಿಗೆಯನ್ನು ಸರ್ಪದೋಷ, ಕುಜದೋಷ ಮತ್ತು ಶನಿದೋಷಗಳನ್ನು ನಿವಾರಿಸಲು ಸಹ ಬಳಸಲಾಗುತ್ತದೆ. ಆಧುನಿಕ ಚಿಕಿತ್ಸೆಯ ಜೊತೆಗೆ, ಕಾಡಿಗೆಯ ಬಳಕೆ ಇನ್ನೂ ಕೆಲವು ಜನರ ನಂಬಿಕೆಯನ್ನು ಹೊಂದಿದೆ. ಆದರೆ, ಈ ಬಳಕೆಯ ಬಗ್ಗೆ ವೈಜ್ಞಾನಿಕ ಪುರಾವೆಗಳು ಇಲ್ಲ.
Published on: Aug 06, 2025 07:00 AM