ಕೊಪ್ಪಳ ಗವಿಸಿದ್ದಪ್ಪ ಕೊಲೆಗೆ ಬಿಗ್ ಟ್ವಿಸ್ಟ್: ಆ ಹುಡುಗಿ ಕಥೆ ಬಿಚ್ಚಿಟ್ಟ ಎಸ್ಪಿ
ಕಳೆದ ಎರಡು ದಿನಗಳ ಹಿಂದೆ ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ಗವಿಸಿದ್ದಪ್ಪನನ್ನು ಭೀಕರ ಕೊಲೆಯಾಗಿತ್ತು. ಸಾದಿಕ್ ಸೇರಿದಂತೆ ನಾಲ್ವರು ಗವಿಸಿದ್ದಪ್ಪನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. .ಟ್ರೈ ಆ್ಯಂಗಲ್ ಲವ್ ಸ್ಟೋರಿ ವಿಚಾರವಾಗಿ ನಡೆದ ಕೊಲೆ ಇದೀಗ ಸದ್ದು ಮಾಡುತ್ತಿದೆ .ಕೊಲೆ ಮಾಡಿ ಅಂದೆ ಓರ್ವ ಆರೋಪಿ ಠಾಣೆಗೆ ಶರಣಾಗಿದ್ದು,ಇದೀಗ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಆದ್ರೆ ಈ ಕೊಲೆ ಇದೀಗ ಸಾಕಷ್ಟು ತಿರುವು ಪಡೆದುಕೊಂಡಿದೆ. ಹೌದು..ಕೊಲೆಗೆ ಪೊಲೀಸ್ ವರಿಷ್ಠಾಧಿಕಾರಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಕೊಪ್ಪಳ, (ಆಗಸ್ಟ್ 05): ಕಳೆದ ಎರಡು ದಿನಗಳ ಹಿಂದೆ ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ಗವಿಸಿದ್ದಪ್ಪನನ್ನು ಭೀಕರ ಕೊಲೆಯಾಗಿತ್ತು. ಸಾದಿಕ್ ಸೇರಿದಂತೆ ನಾಲ್ವರು ಗವಿಸಿದ್ದಪ್ಪನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. .ಟ್ರೈ ಆ್ಯಂಗಲ್ ಲವ್ ಸ್ಟೋರಿ ವಿಚಾರವಾಗಿ ನಡೆದ ಕೊಲೆ ಇದೀಗ ಸದ್ದು ಮಾಡುತ್ತಿದೆ .ಕೊಲೆ ಮಾಡಿ ಅಂದೆ ಓರ್ವ ಆರೋಪಿ ಠಾಣೆಗೆ ಶರಣಾಗಿದ್ದು,ಇದೀಗ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಆದ್ರೆ ಈ ಕೊಲೆ ಇದೀಗ ಸಾಕಷ್ಟು ತಿರುವು ಪಡೆದುಕೊಂಡಿದೆ. ಹೌದು..ಕೊಲೆಗೆ ಪೊಲೀಸ್ ವರಿಷ್ಠಾಧಿಕಾರಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ, ಸಾಧಿಕ್ ಪ್ರೀತಿ ಮಾಡುತ್ತಿದ್ದ ಹುಡಗಿಗೆ ಗವಿಸಿದ್ದಪ್ಪ ತೊಂದರೆ ಕೊಡತಿದ್ದ. ಇದೇ ಕಾರಣಕ್ಕೆ ಸಾದಿಕ್ ಗವಿಸಿದ್ದಪ್ಪನನ್ನು ಕೊಲೆ ಮಾಡಲು ಕಾರಣ. ಗವಿಸಿದ್ದಪ್ಪ ತೊಂದರೆ ಕೊಡುವುದನ್ನು ಹುಡುಗಿ, ಸಾಧಿಕ್ ಗೆ ತಿಳಿಸಿದ್ದಾಳೆ. ಹುಡುಗಿ ಗವಿ ಸಿದ್ದಪ್ಪನ ಜೊತೆ ಪ್ರೀತಿ ಮಾಡತಿದ್ಲೋ ಇಲ್ಲೋ ಎನ್ನುವುದು ಹುಡುಗಿ ಸಿಕ್ಕ ಮೇಲೆ ಗೊತ್ತಾಗತ್ತೆ. ಸದ್ಯ ತನಿಖೆ ಪ್ರಕಾರ ಹುಡುಗಿಗೆ ಗವಿ ಸಿದ್ದಪ್ಪ ತೊಂದರೆ ಕೊಟ್ಟಿದ್ದ. ಅದಕ್ಕೆ ಕೊಲೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಗವಿ ಸಿದ್ದಪ್ಪ ಕೊಲೆ ಕೇಸ್ ಗೆ ಸಂಭಂದಿಸಿದಂತೆ ನಾಲ್ಕು ಜನರ ಬಂಧನವಾಗಿದೆ. ಈ ನಾಲ್ಕು ಜನ ಕಾಂಟಾಕ್ಟ್ ನಲ್ಲಿದ್ರು, ಘಟನೆ ನಡೆದ ಜಾಗದಲ್ಲಿ ಇದ್ದರು.ಸಾಧಿಕ್, ಗೇಸುದರಾಜ್,ಮೆಹಬೂಬ್ ಅಲಿಯಾಸ್ ಗಿಡ್ಡ ಹಾಗೂ ನಿಜಾಮುದ್ದೀನ ಬಂಧನವಾಗಿದ್ದು, ಎರಡು ಮಚ್ಚು,ಬಟ್ಟೆ ಸೀಜ್ ಮಾಡಲಾಗಿದೆ. ಇನ್ನು ಕೊಲೆ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಸಾಧಿಕ್ ಮುಚ್ಚು ಹಿಡಿದು ರೀಲ್ಸ್ ಮಾಡಿರುವುದು ಕೊಲೆಯಾದ ದಿನವೇ ಸಿಕ್ಕದೆ. ಮಚ್ಚು ಹಿಡಿದ ವಿಚಾರವಾಗಿ ಟೆಕ್ನಿಕಲ್ ತನಿಖೆ ನಡೆಯುತ್ತಿದೆ. ಈ ಪ್ರಕರಣ ಮೊದಲೇ ಪೊಲೀಸ್ ಠಾಣೆ ಹೊರಗಡೆ ರಾಜೀ ಆಗಿತ್ತು ಎಂದು ಗವಿಸಿದ್ದಪ್ಪ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.
