AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ನಾಳೆ ಉದ್ಘಾಟಿಸಲಿರುವ ಕರ್ತವ್ಯ ಭವನ ಹೇಗಿದೆ? ಏನಿದರ ವಿಶೇಷತೆ?

ಪ್ರಧಾನಿ ಮೋದಿ ನಾಳೆ ಉದ್ಘಾಟಿಸಲಿರುವ ಕರ್ತವ್ಯ ಭವನ ಹೇಗಿದೆ? ಏನಿದರ ವಿಶೇಷತೆ?

ಸುಷ್ಮಾ ಚಕ್ರೆ
|

Updated on: Aug 05, 2025 | 8:43 PM

Share

ದೆಹಲಿಯ ವಿವಿಧ ಭಾಗಗಳಲ್ಲಿ ಹರಡಿರುವ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಟ್ಟುಗೂಡಿಸುವ ಮೂಲಕ ದಕ್ಷತೆ, ನಾವೀನ್ಯತೆ ಮತ್ತು ಸಹಯೋಗವನ್ನು ಬೆಳೆಸಲು ಕರ್ತವ್ಯ ಭವನವನ್ನು ವಿನ್ಯಾಸಗೊಳಿಸಲಾಗಿದೆ. ಇದು ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ, MSME, DoPT, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳು, ಇಲಾಖೆಗಳು ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ (PSA) ಕಚೇರಿಗಳನ್ನು ಹೊಂದಿರಲಿದೆ. ಈ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟಿಸಲಿದ್ದಾರೆ.

ನವದೆಹಲಿ, ಆಗಸ್ಟ್ 5: ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ಆಗಸ್ಟ್ 6) ದೆಹಲಿಯ ಕರ್ತವ್ಯ ಪಥದಲ್ಲಿರುವ ಕರ್ತವ್ಯ ಭವನವನ್ನು (Kartavya Bhavan) ಉದ್ಘಾಟಿಸಲಿದ್ದಾರೆ. ಗೃಹ ಸಚಿವಾಲಯ ಸೇರಿದಂತೆ ದೆಹಲಿಯ ಹಲವು ಇಲಾಖೆಗಳು ಈ ಕಟ್ಟಡದಲ್ಲಿ ಒಂದೇ ಸೂರಿನಡಿ ಇರಲಿವೆ. ಈ ಹೊಸ ಕಟ್ಟಡವು ಈಗ ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ, ಎಂಎಸ್‌ಎಂಇ, ಪೆಟ್ರೋಲಿಯಂ ಸಚಿವಾಲಯ ಮತ್ತು ಇತರ ಹಲವು ಪ್ರಮುಖ ಸಚಿವಾಲಯಗಳ ಕಚೇರಿಗಳನ್ನು ಹೊಂದಿದೆ. ನಾಳೆ ಉದ್ಘಾಟನೆಯ ನಂತರ, ಪ್ರಧಾನಿ ಮೋದಿ (PM Modi) ಇದೇ ಕಟ್ಟಡದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ತವ್ಯ ಭವನದ ಕಟ್ಟಡವು 2 ನೆಲಮಾಳಿಗೆಗಳು, 1 ನೆಲ ಮಹಡಿ ಮತ್ತು 6 ಮಹಡಿಗಳನ್ನು ಹೊಂದಿದೆ. ಒಟ್ಟು 850 ಕಚೇರಿ ಕೊಠಡಿಗಳಿದ್ದು, 600 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಇರಲಿದೆ.

ಕರ್ತವ್ಯ ಭವನದ 1ನೇ ಮಹಡಿಯಲ್ಲಿ ಪೆಟ್ರೋಲಿಯಂ ಸಚಿವಾಲಯ, 2ನೇ ಮಹಡಿಯಲ್ಲಿ MSME ಮತ್ತು DOPT, 3ನೇ ಮಹಡಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, 4ನೇ, 5ನೇ ಮತ್ತು 6ನೇ ಮಹಡಿಗಳಲ್ಲಿ ಗೃಹ ಸಚಿವಾಲಯದ ಕಚೇರಿ ಇರಲಿದೆ. ಗೃಹ ಸಚಿವರ ಕಚೇರಿ ಐದನೇ ಮಹಡಿಯಲ್ಲಿದೆ. 6ನೇ ಮಹಡಿಯಲ್ಲಿ ಗುಪ್ತಚರ ಬ್ಯೂರೋ (IB) ಕಚೇರಿಯಿದೆ. ಇಡೀ ಕಟ್ಟಡದ ಒಳಗೆ ಮತ್ತು ಹೊರಗೆ 700 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವುಗಳನ್ನು ನಿಯಂತ್ರಣ ಕೊಠಡಿಯಿಂದ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ. ಗುರುತಿನ ಚೀಟಿ ಇದ್ದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ