ದೊಡ್ಡ ನಿರ್ಮಾಪಕರ ಮಗ ಎಂಬ ಗರ್ವ ಇರಲಿಲ್ಲ: ಸಂತೋಷ್ ನಿಧನಕ್ಕೆ ಚಂದ್ರಚೂಡ್ ಕಂಬನಿ
ಸಿನಿಮಾ ರಂಗದಲ್ಲಿ ದೊಡ್ಡ ನಟನಾಗಿ ಬೆಳೆಯುವ ಕನಸು ಕಂಡಿದ್ದ ಸಂತೋಷ್ ಬಾಲರಾಜ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ‘ಗಣಪ’, ‘ಕರಿಯ 2’ ಮುಂತಾದ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಅವರು ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಬೆಳೆಯಬೇಕು ಎಂದು ಕನಸು ಕಂಡಿದ್ದ ಸಂತೋಷ್ ಬಾಲರಾಜ್ (Santhosh Balaraj) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ‘ಗಣಪ’, ‘ಕರಿಯ 2’ ಮುಂತಾದ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಅವರು ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ಮಾತನಾಡಿದ್ದಾರೆ. ‘ತಾನು ದೊಡ್ಡ ನಿರ್ಮಾಪಕರ ಮಗ ಎಂಬ ಆಹಂ ಆತನಿಗೆ ಇರಲಿಲ್ಲ. ತಮಗಿಂತ ಚಿಕ್ಕವರು ಈ ರೀತಿ ನಿಧನರಾಗಿರುವುದು ಬಹಳ ನೋವಾಗುತ್ತದೆ’ ಎಂದು ಚಂದ್ರಚೂಡ್ ಹೇಳಿದ್ದಾರೆ. ಸಂತೋಷ್ ಬಾಲರಾಜ್ ಜೊತೆಗಿನ ಒಡನಾಟವನ್ನು ಅವರು ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

