ಬೆಳಗಾವಿ ಅಧಿವೇಶನ: ಸುವರ್ಣಸೌಧ ನಿರ್ಮಾಣದ ಕ್ರೆಡಿಟ್ ಕುಮಾರಸ್ವಾಮಿಗೆ ನೀಡಿದರೇ ಬಸನಗೌಡ ಯತ್ನಾಳ್?

|

Updated on: Dec 12, 2023 | 1:49 PM

ಸುವರ್ಣ ಸೌಧದಲ್ಲಿ 11ನೇ ಬಾರಿಗೆ ವಿಧಾನ ಸಭಾ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೂ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಬಸನಗೌಡ ಯತ್ನಾಳ್ ಕಳವಳ ವ್ಯಕ್ತಪಡಿಸಿದರು. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು, ಚರ್ಚೆಗಳಲ್ಲಿ ಹೆಚ್ಚಿನ ಆದ್ಯತೆ ಈ ಭಾಗದ ಸಮಸ್ಯೆಗಳಿಗೆ ನೀಡಬೇಕು ಅನ್ನೋದು ಕೇವಲ ಕಾಗದಗಳ ಮೇಲೆ ಮಾತ್ರ ಉಳಿದಿದೆ ಎಂದು ಅವರು ಹೇಳಿದರು.

ಬೆಳಗಾವಿ: ಬೆಳಗಾವಿ ವಿಧಾನಸಭಾ ಅಧಿವೇಶನದ ಎರಡನೇ ವಾರದ ಎರಡನೇ ದಿನವಾಗಿರುವ ಇಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬೆಳಗಾವಿಯಲ್ಲಿ ಸುವರ್ಣ ಸೌಧದ (Suvarna Soudha) ನಿರ್ಮಾಣ, ಉದ್ದೇಶ ಮತ್ತು ಸಾರ್ಥಕತೆಯ ಬಗ್ಗೆ ಮಾತಾಡಿದರು. 2007 ರಲ್ಲಿ ಕಟ್ಟಡಕ್ಕಾಗಿ ಭೂಮಿ ಪೂಜೆ ನಡೆಸಿದ್ದು ಆಗಿನ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು 2009ರಲ್ಲಿ ಅದರ ಲೋಕಾರ್ಪಣೆ ಮಾಡಿದ್ದು ಆಗ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ (BS Yediyurappa). ಆದರೆ, ಯತ್ನಾಳ್ ಸುವರ್ಣ ಸೌಧದ ಪ್ರಸ್ತಾಪ ಮಾಡುವಾಗ ಕೇವಲ ಕುಮಾರಸ್ವಾಮಿ ಹೆಸರನ್ನು ಮಾತ್ರ ಉಲ್ಲೇಖಿಸುತ್ತಾರೆ. ಪಕ್ಷದ ಹಿರಿಯ ನಾಯಕನಿಗಿಂತ; ಚುನಾವಣೆಗೆ ಮೊದಲು ಬಿಜೆಪಿ ಮತ್ತು ಯಡಿಯೂರಪ್ಪರನ್ನು ಕಟುವಾಗಿ ಟೀಕಿಸುತ್ತಿದ್ದ ಕುಮಾರಸ್ವಾಮಿಯವರು ಹೆಚ್ಚಾದರೇ ಅಂತ ಸದನದಲ್ಲಿದ್ದ ಬಿಜೆಪಿ ಸದಸ್ಯರು ಅಂದುಕೊಂಡಿದ್ದರೆ ಆಶ್ಚರ್ಯವಿಲ್ಲ. ಆದರೆ, ಸುವರ್ಣ ಸೌಧ ನಿರ್ಮಿಸಿದ ಉದ್ದೇಶ ಈಡೇರದ ಬಗ್ಗೆ ಯತ್ನಾಳ್ ಖೇದ ಮತ್ತು ಕಳವಳ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ