ವಿಶ್ವ ವಿಖ್ಯಾತ ದಸರಾಗೆ ಮೆರುಗು ನೀಡಿದ ವಿದ್ಯುತ್ ದೀಪಾಲಂಕಾರ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2023 | 7:59 PM

ವಿಶ್ವವಿಖ್ಯಾತ ಮೈಸೂರು ದಸರಾ(Mysore Dasara)ಮಹೋತ್ಸವ ಹಿನ್ನಲೆ ಅರಮನೆ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಇಂದು(ಅ.15) ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಲನೆ ನೀಡಿದರು. ಬಗೆಬಗೆಯ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಕಂಗೊಳಿಸುತ್ತಿದ್ದು, ಸಯ್ಯಾಜಿರಾವ್ ರಸ್ತೆಯ ಹಸಿರು ಮಂಟಪದಲ್ಲಿ ದೀಪಾಲಂಕಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು.

ಮೈಸೂರು, ಅ.15: ವಿಶ್ವವಿಖ್ಯಾತ ಮೈಸೂರು ದಸರಾ(Mysore Dasara)ಮಹೋತ್ಸವ ಹಿನ್ನಲೆ ಅರಮನೆ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಇಂದು(ಅ.15) ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಲನೆ ನೀಡಿದರು. ಬಗೆಬಗೆಯ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಕಂಗೊಳಿಸುತ್ತಿದ್ದು, ಸಯ್ಯಾಜಿರಾವ್ ರಸ್ತೆಯ ಹಸಿರು ಮಂಟಪದಲ್ಲಿ ದೀಪಾಲಂಕಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು. ಒಟ್ಟು 120.54 ಕಿಲೋ ಮೀಟರ್ ರಸ್ತೆಗೆ ಬಗೆಬಗೆಯ ದೀಪಾಲಂಕಾರವನ್ನು ದಸರಾ ದೀಪಾಲಂಕಾರ ಉಪ ಸಮಿತಿಯಿಂದ ಆಯೋಜನೆ ಮಾಡಲಾಗಿದೆ. ಈ ಪೈಕಿ 98 ವೃತ್ತಗಳು, 59 ವಿದ್ಯುತ್ ಪ್ರತಿಕೃತಿಗಳು ಅಳವಡಿಸಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on