ಕಮಲ್ ಹಾಸನ್ ಸಿನಿಮಾವೇನಾದರೂ ಬಿಡುಗಡೆ ಮಾಡಿದರೆ ಥೇಟರ್​ಗಳಿಗೆ ಬೆಂಕಿ ಹಾಕ್ತೀವಿ: ಟಿಎ ನಾರಾಯಣಗೌಡ, ಕರವೇ

ಅರುಣ್​ ಕುಮಾರ್​ ಬೆಳ್ಳಿ

Updated on: May 30, 2025 | 9:31 PM

ಯಾರೆಷ್ಟೇ ವಿರೋಧ ಮಾಡಿದರೂ ತನ್ನ ಅಭಿಮಾನಿಗಳು ಸಿನಿಮಾ ನೋಡುತ್ತಾರೆ ಎಂದು ಕಮಲ್ ಹಾಸನ್ ಹೇಳಿದ್ದಾರೆ, ಅದರೆ ಈ ನಟನ ಬಗ್ಗೆ ಯಾರಿಗೆ ಎಷ್ಟೇ ಅಭಿಮಾನವಿರಲಿ, ಅವರ ಸಿನಿಮಾ ನೋಡಬಾರದು, ಸಿನಿಮಾವನ್ನೇದರೂ ವೀಕ್ಷಿಸಲು ಹೋದರೆ ಕಮಲ್ ಹಾಸನ್​ನಂತೆ ಅವರು ಸಹ ಕನ್ನಡಕ್ಕೆ ಘೋರ ಅಪಮಾನವೆಗಿದಂತೆ ಎಂದು ಹೇಳಿದ ನಾರಾಯಣಗೌಡ ಕರ್ನಾಟಕ ತಮಿಳು ಸಂಘವೂ ಕನ್ನಡಿಗರ ಜತೆ ನಿಂತಿದೆ ಎಂದರು.

ಬೆಂಗಳೂರು, ಮೇ 30: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗೋದು ಸಾಧ್ಯವಿಲ್ಲ, ಕನ್ನಡ ಪರ ಹೋರಾಟ ಬೇರೆ, ವ್ಯಾಪಾರವೇ ಬೇರೆ ಅಂತ ಭಾವಿಸಿ ಯಾರಾದರೂ ಸಿನಮಾ ಬಿಡುಗಡೆ (film release) ಮಾಡಿದರೆ ಥೇಟರ್​ಗಳಿಗೆ ಬೆಂಕಿ ಇಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಎಚ್ಚರಿಸಿದರು. ಸಿನಿಮಾ ಹಂಚಿಕೆದಾರರು ತಮಗೆ ನಷ್ಟವಾಗುತ್ತದೆ ಅಂದುಕೊಳ್ಳುತ್ತಿದ್ದರೆ ನಷ್ಟದ ಹಣವನ್ನು ನಿರ್ಮಾಪಕರಿಂದ ಇಲ್ಲವೇ ಕಮಲ್ ಹಾಸನ್​ರಿಂದ ವಸೂಲಿ ಮಾಡಲಿ, ಹಂಚಿಕೆದಾರರಿಗೆ ಕನ್ನಡ ಮುಖ್ಯವಾದಾಗ ಮಾತ್ರ ವ್ಯಾಪಾರ ಮುಖ್ಯ ಆಗೋದು, ಹಾಗಲ್ಲ ಅಂತ ಅವರಿಗೆ ಅನ್ನಿಸುವುದಾದರೆ ತಮಿಳು ನಾಡಿಗೆ ಹೋಗಿ ವ್ಯಾಪಾರ ಮಾಡಿಕೊಳ್ಳಲಿ ಎಂದು ನಾರಾಯಣಗೌಡ ಹೇಳಿದರು.

ಇದನ್ನೂ ಓದಿ:  ಜನ ನೀಡುವ ಕಾಸಿನಿಂದಲೇ ಕಮಲ್ ಹಾಸನ್ ಒಬ್ಬ ನಟನಾಗಿ ಬೆಳೆದಿದ್ದು: ವಿ ಸೋಮಣ್ಣ, ಕೇಂದ್ರ ಸಚಿವ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.