ಸಿಎಂ ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

Updated on: Jun 13, 2025 | 10:02 AM

ಕುಮಾರಕೃಪಾ ವೆಸ್ಟ್‌ನಲ್ಲಿ, ಸಿಎಂ ನಿವಾಸದ ಸಮೀಪ, ಹಗಲಿನ ವೇಳೆಯಲ್ಲಿ ಸಂಪ್ ಮುಚ್ಚಳ ಕಳ್ಳತನವಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಘಟನೆ ಸೆರೆಯಾಗಿದೆ. ಆರೋಪಿ ಜನಸಂದಣಿ ಕಡಿಮೆಯಾದ ನಂತರ ಕಳ್ಳತನ ಮಾಡಿ, ಮುಚ್ಚಳವನ್ನು ತನ್ನ ಮನೆಯ ಬಳಿಟ್ಟಿದ್ದ. ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು, ಜೂನ್​ 13: ಸಿಎಂ ಸಿದ್ದರಾಮಯ್ಯ (Siddaramaiah) ಮನೆಯ ಕೂಗಳತೆ ದೂರದಲ್ಲೇ ಕಳ್ಳತನ ನಡೆದಿರುವಂತಹ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಮಾರ ಕೃಪಾ ವೆಸ್ಟ್​ನಲ್ಲಿ ಹಾಡಹಗಲೇ ಕಂಪೌಂಡ್ ಜಿಗಿದು ಸಂಪ್ ಮುಚ್ಚಳವನ್ನು ಖದೀಮ ಕಳ್ಳತನ ಮಾಡಿದ್ದಾನೆ. ಕಳ್ಳತನ ಮಾಡಿದ್ದ ಸಂಪ್ ಮುಚ್ಚಳವನ್ನ ಮನೆಯ ಮರೆಯಲ್ಲಿಟ್ಟಿದ್ದ ಆರೋಪಿ, ಜನರ ಓಡಾಟ ಕಡಿಮೆಯಾದ ನಂತರ ಕದ್ದೊಯ್ದಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.