ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಬದುಕಲಿಲ್ಲ: ಕಾಂತಾರ ನಟನ ಸಾವಿಗೂ ಮುನ್ನ ಏನಾಯ್ತು?
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಲು ಬಂದಿದ್ದ ಕೇರಳ ಮೂಲದ ಕಲಾವಿದ ವಿಜು ವಿ.ಕೆ. ನಿಧನರಾಗಿದ್ದಾರೆ. ಅವರು ಸಾಯುವುದಕ್ಕೂ ಮುನ್ನ ಏನೆಲ್ಲ ಆಯ್ತು ಎಂಬ ಮಾಹಿತಿ ಸಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡಕ್ಕೆ ಸಹ-ಕಲಾವಿದರನ್ನು ಪೂರೈಕೆ ಮಾಡಿದ ಹಬೀಬ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಸಂಬಂಧಿಸಿದಂತೆ ಕಹಿ ಸುದ್ದಿ ಕೇಳಿಬಂದಿದೆ. ಈ ಚಿತ್ರದಲ್ಲಿ ಅಭಿನಯಿಸಲು ಬಂದಿದ್ದ ಕೇರಳದ ಕಲಾವಿದ ವಿಜು ವಿ.ಕೆ. ಅವರು ನಿಧನರಾಗಿದ್ದಾರೆ. ಅವರು ಸಾಯುವುದಕ್ಕೂ ಮುನ್ನ ಏನೆಲ್ಲ ನಡೆಯಿತು ಎಂಬ ಮಾಹಿತಿ ಈಗ ಲಭ್ಯವಾಗಿದೆ. ‘ಕಾಂತಾರ: ಚಾಪ್ಟರ್ 1’ (Kantara Chapter 1) ಚಿತ್ರತಂಡಕ್ಕೆ ಸಹ-ಕಲಾವಿದರನ್ನು ಪೂರೈಕೆ ಮಾಡಿದ ಹಬೀಬ್ ಅವರು ಈ ಕುರಿತು ಮಾತನಾಡಿದ್ದಾರೆ. ‘ಆಗುಂಬೆಯಲ್ಲಿ ಅವರಿಗೆ ರೂಮ್ ನೀಡಿದ್ದೆವು. ಅವರು ಬಂದು ಅರ್ಧ, ಮುಕ್ಕಾಲು ಗಂಟೆ ಆದ ಬಳಿಕ ಬೆವರುತ್ತಿದ್ದರು. ಎದೆ ಹಿಡಿದಂತೆ ಆಗುತ್ತಿದೆ ಎಂದರು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಆಸ್ಪತ್ರೆಗೆ ಬಂದಾಗ ಪ್ರಾಣ ಹೋಗಿದೆ ಎಂಬುದು ತಿಳಿಯಿತು’ ಎಂದಿದ್ದಾರೆ ಹಬೀಬ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.