ರಕ್ಷಿತ್ ಶೆಟ್ಟಿ ಹಾಗೂ ನನ್ನ ನಡುವೆ ಕಾಂಪಿಟೇಶನ್ ಇಲ್ಲ: ರಾಜ್ ಬಿ ಶೆಟ್ಟಿ
Raj B Shetty: 'ಟೋಬಿ' ಸಿನಿಮಾ ಬಿಡುಗಡೆ ಆಗುವ ದಿನದ ಆಸು-ಪಾಸಿನಲ್ಲೇ ರಕ್ಷಿತ್ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ ಆಗಲಿದೆ. ಆದರೆ ತಮ್ಮಿಬ್ಬರ ನಡುವೆ ಕಾಂಪಿಟೇಷನ್ ಇಲ್ಲವೆಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ (Rakshit Shetty), ರಿಷಬ್ ಶೆಟ್ಟಿ (Rishab Shetty) ಹಾಗೂ ರಾಜ್ ಬಿ ಶೆಟ್ಟಿ (Raj B Shetty) ಮೂವರನ್ನು ಕನ್ನಡ ಚಿತ್ರರಂಗ RRR ಎಂದೇ ಗುರುತಿಸುತ್ತಿದೆ. ಮೂವರೂ ಸಹ ಸಮಾನ ಪ್ರತಿಭಾವಂತರು. ಒಬ್ಬರಿಗಿಂತಲೂ ಒಬ್ಬರು ಉತ್ತಮ ನಟ ಹಾಗೂ ನಿರ್ದೇಶಕರು. ಪರಸ್ಪರರ ಸಿನಿಮಾಗಳಿಗೆ ಬೆಂಬಲಿಸುತ್ತಾ ಸಾಗುತ್ತಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿಯವರ ‘ಟೋಬಿ’ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಅದರ ಬೆನ್ನಲ್ಲೆ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ನಮ್ಮಿಬ್ಬರ ನಡುವೆ ಕಾಂಪಿಟೇಷನ್ ಇಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ