ಶಾಸಕ ಎಂವೈ ಪಾಟೀಲ್ ಕಲಬುರಗಿ ಮನೆಯಲ್ಲಿ ಉತ್ತರ ಕರ್ನಾಟಕದ ಊಟ ಸವಿದ ಸಿದ್ದರಾಮಯ್ಯ, ಶಿವಕುಮಾರ್!
ಕಾಂಗ್ರೆಸ್ ನಾಯಕರಿಗೆ ಪಾಟೀಲ್ ಮನೆಯಲ್ಲೇ ಔತಣ ಏರ್ಪಡಿಸಲಾಗಿತ್ತು. ಎಲ್ಲರೂ ಭರ್ಜರಿಯಾಗಿ ಉತ್ತರ ಕರ್ನಾಟಕ ಊಟ ಸವಿದರು ಅಂತ ಅವರ ಮುಖಗಳ ಭಾವದಿಂದ ಗೊತ್ತಾಗುತ್ತದೆ
ಕಲಬುರಗಿ: ಕಲ್ಯಾಣ ಕರ್ನಾಟಕ ಊಟದ ವೈಶಿಷ್ಟ್ಯತೆಯೇ ಹಾಗೆ ಮಾರಾಯ್ರೇ, ಬಾಯಿ ಚಪ್ಪರಿಸಿಕೊಂಡು ತಿನ್ನುವ ಹಾಗೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಡಿ ಅವರು ಕಲಬುರಗಿಯವರು, ಅವರಿಗೆ ಈ ಊಟ ಹೊಸದಲ್ಲ. ಅದರೆ ಇಂದು ಗೃಹ ಜ್ಯೋತಿ ಕಾರ್ಯಕ್ರಮಕ್ಕಾಗಿ ಕಲಬುರಗಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಜೋಳದ ರೊಟ್ಟಿ, ಪುಂಡಿಪಲ್ಯ, ಎಣ್ಣೆ ಬದನೆಕಾಯಿ, ಕಾಳು ಪಲ್ಯ, ಶೇಂಗಾ ಹೋಳಿಗೆ, ಶೇಂಗಾ ಹಿಂಡಿ, ಬೇಳೆ ಸಾರು (ಸಾಂಬಾರ್) ಗಟ್ಟಿ ಮೊಸರು, ಬಾನದಹಿಟ್ಟು ಮೊದಲಾದವುಗಳನ್ನೊಳಗೊಂಡ ಸ್ವಾದಿಷ್ಟಕರ ಊಟ ಬೆಂಗಳೂರಲ್ಲಿ ಸಿಗಲಾರದು. ಈಗ ಅಲ್ಲೂ ಉತ್ತರ ಕರ್ನಾಟಕದ ಖಾನಾವಳಿ ಆಗಿವೆ ಮತ್ತು ಕೆಲ ಸ್ಟೋರ್ ಗಳಲ್ಲಿ ಸಿಗುತ್ತಿವೆ; ಅದು ಬೇರೆ ವಿಚಾರ. ಮೇಲೆ ಉಲ್ಲೇಸಿದ ಆಹಾರ ಪದಾರ್ಥಗಳಲ್ಲಿ ಹೆಚ್ಚಿನವು ಇಂದು ಕಾಂಗ್ರೆಸ್ ಶಾಸಕ ಎಂವೈ ಪಾಟೀಲ್ ಮನೆಯಲ್ಲಿ ತಯಾರಾಗಿದ್ದವು. ಕಾಂಗ್ರೆಸ್ ನಾಯಕರಿಗೆ ಪಾಟೀಲ್ ಮನೆಯಲ್ಲೇ ಔತಣ ಏರ್ಪಡಿಸಲಾಗಿತ್ತು. ಎಲ್ಲರೂ ಭರ್ಜರಿಯಾಗಿ ಉತ್ತರ ಕರ್ನಾಟಕ ಊಟ ಸವಿದರು ಅಂತ ಅವರ ಮುಖಗಳ ಭಾವದಿಂದ ಗೊತ್ತಾಗುತ್ತದೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ