ಈ ದೇಶಗಳು ಗಾತ್ರದಲ್ಲಿ ಚಿಕ್ಕವಾಗಿರಬಹುದು ಆದರೆ ವಿಶ್ವದ ಅತ್ಯಂತ ದುಬಾರಿ ದೇಶಗಳೆನಿಸಿಕೊಂಡಿವೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 10, 2021 | 6:05 PM

ಹಿಂದೊಮ್ಮೆ ಬ್ರಿಟಿಷರ ವಸಾಹತುವಾಗಿದ್ದ ಬರ್ಮುಡಾ ಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ (ಸುಮಾರು 65,000 ಜನಸಂಖ್ಯೆ) ದುಬಾರಿ ರಾಷ್ಟ್ರವೆನಿಸಿಕೊಂಡಿದೆ. ಇಲ್ಲಿನ ಪಂಚತಾರಾ ಹೋಟೆಲ್ನಲ್ಲಿ ಒಂದು ದಿನ ತಂಗಬೇಕಾದರೆ, ರೂ 75,000 ಖರ್ಚು!

ಅಮೆರಿಕ ಅತ್ಯಂತ ಶ್ರೀಮಂತ ರಾಷ್ಟ್ರ, ಅಲ್ಲಿ ಬದುಕು ನಡಸೋದು ಕಷ್ಟ ಅಂತ ನಾವಂದುಕೊಳ್ಳುತ್ತೇವೆ. ಆದರೆ ನಮ್ಮ ಗ್ರಹಿಕೆ ತಪ್ಪು ಮಾರಾಯ್ರೇ. ಯಾಕೆ ಗೊತ್ತುಂಟಾ? ಜೀವನ-ನಡೆಸುವ ಸೂಚ್ಯಂಕದ ಆಧಾರದಲ್ಲಿ ನಾವು ಅತ್ಯಂತ ದುಬಾರಿ ರಾಷ್ಟ್ರಗಳ ಪಟ್ಟಿ ನೋಡಿದ್ದೇಯಾದರೆ, ಅಮೆರಿಕ 23 ನೇ ಸ್ಥಾನದಲ್ಲಿದೆ. ಹಾಗಾದರೆ ಎಲ್ಲಕ್ಕಿಂತ ದುಬಾರಿ ದೇಶ ಅಂತ ಪ್ರಶ್ನೆ ಸಹಜವಾಗೇ ಹುಟ್ಟಿಕೊಳ್ಳುತ್ತದೆ. ಪ್ರೇಮಿಗಳ ಸ್ವರ್ಗ, ಹನಿಮೂನ್​ಗೆ ಹೇಳಿ ಮಾಡಿಸಿದ ಸ್ಥಳ ಅಂತಾರಲ್ಲ, ಸ್ವಿಜರ್ಲ್ಯಾಂಡ್-ವಿಶ್ವದಲ್ಲೇ ಅತಿ ದುಬಾರಿವೆನಿಸಿಕೊಂಡಿರುವ ದೇಶ. ಈ ದೇಶದಲ್ಲಿ ಒಂದು ಲೀಟರ್ ಹಾಲಿನ ಬೆಲೆ ರೂ 136. ಅರ್ಧ ಕೆಜಿ ಚಿಕನ್ ಬೆಲೆ ಎಷ್ಟು ಗೊತ್ತಾ? ರೂ 1,120! ಅರ್ಧ ಕೆಜಿ ಸೇಬಿನ ಬೆಲೆಯೂ ಒಂದು ಸಾವಿರಕ್ಕಿಂತ ಹೆಚ್ಚು!!

ಹಿಂದೊಮ್ಮೆ ಬ್ರಿಟಿಷರ ವಸಾಹತುವಾಗಿದ್ದ ಬರ್ಮುಡಾ ಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ (ಸುಮಾರು 65,000 ಜನಸಂಖ್ಯೆ) ದುಬಾರಿ ರಾಷ್ಟ್ರವೆನಿಸಿಕೊಂಡಿದೆ. ಇಲ್ಲಿನ ಪಂಚತಾರಾ ಹೋಟೆಲ್​​ನಲ್ಲಿ ಒಂದು ದಿನ ತಂಗಬೇಕಾದರೆ, ರೂ 75,000 ಖರ್ಚು!

ಐರ್ಲೆಂಡ್ ಸಹ ಒಂದು ಪುಟ್ಟ ದೇಶ, ಅದರೆ, ಇಲ್ಲಿ ಮನೆ ಬಾಡಿಗೆ ಅಮೇರಿಕಾದ ನ್ಯೂ ಯಾರ್ಕ್ಕ್ಕಿಂತ ಜಾಸ್ತಿ. ದಿನಬಳಕೆಯ ವಸ್ತುಗಳು ಈ ದೇಶದಲ್ಲಿ ಬಹಳ ತುಟ್ಟಿ. ಆದರೆ ವಿಸ್ಮಯಕಾರಿ ಸಂಗತಿಯೆಂದರೆ ಐರ್ಲೆಂಡ್ನಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಬಿಲ್ಕುಲ್ ಉಚಿತ!

ನಮ್ಮ ಬೆಂಗಳೂರಿನ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ದೇಶ ನಾರ್ವೆಯಲ್ಲಿ ಅಲ್ಲಿನ ಸರ್ಕಾರ ಜನರಿಂದ ಶೇಕಡಾ 25 ರಷ್ಟ್ ವ್ಯಾಟ್ ಮತ್ತು ಶೇಕಡಾ 15ರಷ್ಟು ಆದಾಯ ತೆರಿಗೆ ವಸೂಲಿ ಮಾಡುತ್ತದೆ. ಲಕ್ಸೆಂಬರ್ಗ್ ದೇಶದ ಹೆಸರು ಬಹಳಷ್ಟು ಜನರು ಕೇಳಿರಲಾರರು. ಪಶ್ಚಿಮ ಯೂರೋಪಿನಲ್ಲಿರುವ ಈ ದೇಶದ ಜನಸಂಖ್ಯೆ 6 ಲಕ್ಷಕ್ಕಿಂತ ಸ್ವಲ್ಪ ಜಾಸ್ತಿ. ಯೂರೋಪಿನ ಎಲ್ಲ ಪ್ರಮುಖ ನಗರಗಳಿಗೆ ಹೋಲಿಸಿದರೆ ಈ ದೇಶದಲ್ಲಿ ಕಾಸ್ಟ್ ಆಫ್ ಲಿವಿಂಗ್ ಶೇ 85 ರಷ್ಟು ಜಾಸ್ತಿ.

ಬಹಮಾಸ್ ಕೆರೀಬಿಯನ್ ದ್ವೀಪ ಸಮೂದಲ್ಲಿರುವ ಒಂದು ಸಣ್ಣ ದೇಶ. ಪ್ರವಾಸಿ ತಾಣವೆನಿಸಿಕೊಂಡಿರುವ ಇದು ಸಹ ತುಂಬಾ ದುಬಾರಿ ರಾಷ್ಟ್ರಗಳಲ್ಲೊಂದಾಗಿದೆ.

ಇದನ್ನೂ ಓದಿ: ಮನೆಯ ಮೇಲ್ಛಾವಣಿಯ ಮೇಲೆ ಅಡಗಿದ್ದ ದೈತ್ಯಾಕಾರದ ಹಾವು ನೋಡಿ ಮನೆಯವರು ಕಂಗಾಲು! ವಿಡಿಯೋ ನೋಡಿ

Published on: Aug 10, 2021 06:03 PM