ಕಿಯಾ ಕಾರ್ನಿವಾಲ್ ಖರೀದಿಸಿದ ಒಂದು ತಿಂಗಳವರೆಗೆ ನಿಮಗೆ ತೃಪ್ತಿ ಅನಿಸದಿದ್ದರೆ ಅದನ್ನು ವಾಪಸ್ಸು ಮಾಡಬಹುದು
ದೆಹಲಿಯಲ್ಲಿ ಕಿಯಾ ಕಾರ್ನಿವಾಲ 7 ಸೀಟರ ಕಾರಿನ ಎಕ್ಸ್ ಶೋರೂಮ್ ಬೆಲೆ ರೂ 24.95 ಲಕ್ಷ ಇದೆ. ಕಾರನ್ನು ಕೊಳ್ಳಬಯಸುವವರಿಗೆ ಕಿಯಾ ಮೋಟಾರ್ಸ್ ರೂ. 2.5 ಲಕ್ಷಗಳ ನೇರ ರಿಯಾಯಿತಿ ನೀಡಲಿದೆ. ಅದರೊಂದಿಗೆ ಗ್ರಾಹಕರಿಗೆ ಎಕ್ಸಟೆಂಡೆಡ್ ವಾರಂಟಿ ಪ್ಯಾಕೇಜ್ ಸಹ ಕಂಪನಿ ಆಫರ್ ಮಾಡುತ್ತಿದೆ.
ಕಿಯಾ ಮೋಟರ್ಸ್ ಸಂಸ್ಥೆಯ ಕಿಯಾ ಕಾರ್ನಿವಾಲ್ ಭಾರತದಲ್ಲಿ ಈಗ ಅತ್ಯಂತ ಜನಪ್ರಿಯ ಮಲ್ಟಿ ಯುಟಿಲಿಟಿ ವೆಹಿಕಲ್ ಅಂದರೆ ಉತ್ಪ್ರೇಕ್ಷೆಯೆನಿಸದು. ಹಬ್ಬಗಳ ಸೀಸನ್ ಶುರುವಾಗಿರುವುದರಿಂದ ಕಂಪನಿಯು ತನ್ನ ಗ್ರಾಹಕರಿಗೆ ಹಲವಾರು ಆಫರ್ಗಳ ಘೋಷಣೆ ಮಾಡಿದೆ. ಈ ಬಾರಿಯ ದಸರಾ ಮತ್ತು ದೀಪಾವಳಿಗೆ ಮೊದಲು ನೀವು ಹೊಸ ಕಾರನ್ನು ಕೊಳ್ಳುವ ಅಥವಾ ಈಗಿರುವ ಕಾರನ್ನು ಬದಲಾಯಿಸುವ ಇಚ್ಛೆ ಹೊಂದಿದ್ದರೆ ಈ ಆಫರ್ಗಳ ಸದ್ವಿನಿಯೋಗ ಮಾಡಿಕೊಳ್ಳಬಹುದು.
ದೆಹಲಿಯಲ್ಲಿ ಕಿಯಾ ಕಾರ್ನಿವಾಲ 7 ಸೀಟರ ಕಾರಿನ ಎಕ್ಸ್ ಶೋರೂಮ್ ಬೆಲೆ ರೂ 24.95 ಲಕ್ಷ ಇದೆ. ಕಾರನ್ನು ಕೊಳ್ಳಬಯಸುವವರಿಗೆ ಕಿಯಾ ಮೋಟಾರ್ಸ್ ರೂ. 2.5 ಲಕ್ಷಗಳ ನೇರ ರಿಯಾಯಿತಿ ನೀಡಲಿದೆ. ಅದರೊಂದಿಗೆ ಗ್ರಾಹಕರಿಗೆ ಎಕ್ಸಟೆಂಡೆಡ್ ವಾರಂಟಿ ಪ್ಯಾಕೇಜ್ ಸಹ ಕಂಪನಿ ಆಫರ್ ಮಾಡುತ್ತಿದೆ. ಈ ಪ್ಯಾಕೇಜ್ನಲ್ಲಿ ಗ್ರಾಹಕರಿಗೆ ರೂ. 1.25 ಲಕ್ಷ ಹೆಚ್ಚುವರಿ ಉಳಿತಾಯವಾಗಲಿದೆ ಎಂದು ಕಂಪನಿ ಹೇಳುತ್ತಿದೆ. ಅಲ್ಲಿಗೆ ಗ್ರಾಹಕರಿಗೆ ಒಟ್ಟು ರೂ 3.75 ಲಕ್ಷ ಉಳಿತಾಯವಾದಂತಾಯಿತು.
ಇವುಗಳೊಂದಿಗೆ ಬೇರೆ ಕಂಪನಿಗಳು ಕೊಡದ ಒಂದು ಸೌಲಭ್ಯವನ್ನು ಕಿಯಾ ಮೋಟರ್ಸ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಅದೇನು ಗೊತ್ತಾ? ಕಾರು ಖರೀದಿಸಿದ ನಂತರ ಒಂದು ತಿಂಗಳ ಅವಧಿಯವರೆಗೆ ನಿಮ್ಮಲ್ಲಿ ಕಾರಿನ ಬಗ್ಗೆ ಸಂತೃಪ್ತಿಯ ಭಾವ ಮೂಡದೆ (satisfaction guarantee scheme) ಹೋದರೆ, ನೀವು ಖರೀದಿಸಿದ ಕಿಯಾ ಕಾರ್ನಿವಾಲ ಕಾರನ್ನು ವಾಪಸ್ಸು ಮಾಡಬಹುದು.
ಹೌದು ಒಂದು ತಿಂಗಳೊಳಗೆ ಕಾರು 1,500 ಕಿಲೋ ಮೀಟರ್ಕ್ಕಿಂತ ಜಾಸ್ತಿ ಓಡಿರದಿದ್ದರೆ, ನೀವು ಅದನ್ನು ಹಿಂತಿರುಗಿಸಿದರೆ, ಕಂಪನಿಯು ನೀವು ಪಾವತಿಸಿದ ಮೊತ್ತದ ಶೇಕಡಾ 95 ರಷ್ಟನ್ನು ರಿಫಂಡ್ ಮಾಡುತ್ತದೆ. ಆದರೆ ಅದಕ್ಕೆ ಮತ್ತೊಂದು ಷರತ್ತಿದೆ. ಕಾರಿಗೆ ಯಾವುದೇ ತೆರನಾದ ಭೌತಿಕ ಹಾನಿ (physical damage) ಆಗಿರಬಾರದು.