ತುಮಕೂರು: ಟ್ರ್ಯಾಕ್ಟರ್ ಖರೀದಿಸಿದ ಕಳ್ಳರು ಟ್ರಾಲಿ ಖರೀದಿಸಲಾಗದೆ ಕಳ್ಳತನ ಮಾಡಿದರು!
ಟ್ರಾಲಿ ಖಾಲಿ ಇಲ್ಲ ಅದರಲ್ಲಿ ಏನನ್ನೋ ಲೋಡ್ ಕೂಡ ಮಾಡಲಾಗಿದೆ. ಖದೀಮರು ಅ ಮಾಲನ್ನು ಸಹ ಎಳೆದೊಯ್ದಿದ್ದಾರೆ.
ತುಮಕೂರು: ಈ ಖದೀಮರು ಮಾಡುತ್ತಿರುವ ಕೆಲಸವನ್ನೊಮ್ಮೆ ನೋಡಿ ಮಾರಾಯ್ರೇ. ಕಳ್ಳರು ಸುಮಾರು ರೂ. 7-ಲಕ್ಷ ನೀಡಿ ಟ್ರ್ಯಾಕರನ್ನು (tractor) ಖರೀದಿಸಿದ್ದಾರೆ ಅದರೆ ಸುಮಾರು ರೂ. 1.5 ಲಕ್ಷದ ಟ್ರೇಲರ್ ಅಥವಾ ಟ್ರಾಲಿ (trolley) ಖರೀದಿಸಿಲ್ಲ. ಹಾಗಾಗೇ ಅರುಣ್ (Arun) ಹೆಸರಿನ ರೈತರು ತಮ್ಮ ತೋಟದಲ್ಲಿಟ್ಟಿದ್ದ ಟ್ರಾಲಿಯನ್ನು ರಾತ್ರೋರಾತ್ರಿ ಕದ್ದಿದ್ದಾರೆ. ಟ್ರಾಲಿ ಖಾಲಿ ಇಲ್ಲ ಅದರಲ್ಲಿ ಏನನ್ನೋ ಲೋಡ್ ಕೂಡ ಮಾಡಲಾಗಿದೆ. ಖದೀಮರು ಅ ಮಾಲನ್ನು ಸಹ ಎಳೆದೊಯ್ದಿದ್ದಾರೆ. ಅಂದಹಾಗೆ ಸದರಿ ಕಳ್ಳತನ ಅಕ್ಟೋಬರ್ 28 ರ ರಾತ್ರಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯದ ನಿವಾಸಿ ಅರುಣ್ ಅವರ ತೋಟದಲ್ಲಿ ನಡೆದಿದ್ದು ತೋಟದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.