ಮದ್ದೂರು ಬಳಿ ಹೊಸದಾಗಿ ಕಟ್ಟಿಸಿರುವ ದೇವಸ್ಥಾನದ ಹುಂಡಿ ಮತ್ತು ದೇವರ ಮೇಲಿನ ಆಭರಣಗಳ ಕಳುವು

ಅರುಣ್​ ಕುಮಾರ್​ ಬೆಳ್ಳಿ

Updated on: Nov 12, 2024 | 12:29 PM

ಕಳ್ಳರು ದೇವಸ್ಥಾನಗಳನ್ನೂ ಬಿಡುತ್ತಿಲ್ಲ ಅನ್ನೋದು ಖೇದಕರ ಸಂಗತಿ. ಅವ್ವೇರಹಳ್ಳಿಯ ಗಣೇಶನ ದೇಗುಲವನ್ನು ಇತ್ತೀಚಿಗೆ ಕಟ್ಟಿಸಿರುವುದರಿಂದ ಪ್ರಾಯಶಃ ಸಿಸಿಟಿವಿ ಇನ್ನೂ ಅಳವಡಿಸಿಲ್ಲ. ಗ್ರಾಮಸ್ಥರೆಲ್ಲ ಸೇರಿ ಚಂದಾ ಒಂದುಗೂಡಿಸಿ ಕಟ್ಟಿಸಿರುವ ಗುಡಿ ಇದು. ಕಳ್ಳತನದ ಪ್ರಸಂಗ ಸಹಜವಾಗೇ ಅವರಲ್ಲಿ ನೋವನ್ನುಂಟು ಮಾಡಿದೆ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಕಟ್ಟಿಸಿರುವ ನೂತನ ಗಣೇಶನ ದೇವಾಲಯದಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ರಾತ್ರಿ ಸಮಯದಲ್ಲಿ ದೇವಸ್ಥಾನದ ಬಾಗಿಲನ್ನು ಸಲಾಕೆ, ಹಾರೆ ಬಳಸಿ ಓಪನ್ ಮಾಡಿರುವ ಕಳ್ಳರು ಹುಂಡಿಯ ಬೀಗವನ್ನೂ ಮುರಿದು ಅದರಲ್ಲಿದ್ದ ಕಾಣಿಕೆಯ ಹಣವನ್ನು ದೋಚುವುದರ ಜೊತೆಗೆ ದೇವರ ಮೇಲಿದ್ದ ಆಭರಣಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಕೊಪ್ಪದ ಪೊಲೀಸರು ಸ್ಥಳಕ್ಕೆ ಬಂದು ಸ್ಥಳೀಯರ ಜೊತೆ ಮಾತಾಡಿ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು: ನೇಪಾಳಿ ಕಳ್ಳರ ಕೈಚಳಕ, ನಗರದಲ್ಲಿ ನಡೆದಿರುವ ಕಳ್ಳತನ ಒಂದೆರಡಲ್ಲ!  

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.