Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ನೇಪಾಳಿ ಕಳ್ಳರ ಕೈಚಳಕ, ನಗರದಲ್ಲಿ ನಡೆದಿರುವ ಕಳ್ಳತನ ಒಂದೆರಡಲ್ಲ!

ರಾಜಧಾನಿ ಬೆಂಗಳೂರಿನಲ್ಲಿ ನೇಪಾಳಿ ಕಳ್ಳರ ಆತಂಕ ಕಮ್ಮಿ ಆಗುತ್ತಿಲ್ಲ. ಮುಗ್ದರಂತೆ ಮನೆಕೆಲಸದ ನೆಪದಲ್ಲಿ ಶ್ರೀಮಂತರ ಮನೆ ಸೇರುವ ನೇಪಾಳಿ ಕೆಲಸಗಾರರು,‌ ಕೊನೆಗೆ ಉಂಡ ಮನೆಗೆ ಕನ್ನ ಹಾಕುತ್ತಿದ್ದಾರೆ. ಇಂತ ಸಾಲು ಸಾಲು ಘಟನೆಗಳು ಇತ್ತೀಚೆಗೆ ವರದಿಯಾಗುತ್ತಲೇ ಇದ್ದು, ಪರಿಹಾರ ಮಾತ್ರ ಕಾಣಿಸುತ್ತಿಲ್ಲ. ವಿವರಗಳು ಇಲ್ಲಿವೆ ನೋಡಿ.

ಬೆಂಗಳೂರು: ನೇಪಾಳಿ ಕಳ್ಳರ ಕೈಚಳಕ, ನಗರದಲ್ಲಿ ನಡೆದಿರುವ ಕಳ್ಳತನ ಒಂದೆರಡಲ್ಲ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 11, 2024 | 7:00 AM

ಬೆಂಗಳೂರು, ನವೆಂಬರ್ 11: ಇಡೀ ಬೆಂಗಳೂರನ್ನೇ ಬೀಳಿಸಿದ್ದ ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕನ ಮನೆ ಕಳ್ಳತನ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವು ತಂದೊಡ್ಡಿದೆ. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ದೋಚಿದ ಖದೀಮರು ನೇಪಾಳ ತಲುಪಿದ್ದು, ಇದೀಗ ಆರೋಪಿಗಳ ಪತ್ತೆ ಹಾಗೂ ಕಳವಾದ ಆಭರಣಗಳ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಆದರೆ, ಬೆಂಗಳೂರಿನಲ್ಲಿ ಇದೇನು ಮೊದಲ ಪ್ರಕರಣವಲ್ಲ. ಅನೇಕ ವರ್ಷಗಳಿಂದ ಬೆಂಗಳೂರಿನ ಶ್ರೀಮಂತರ ಮನೆಗಳಲ್ಲಿ ನೇಪಾಳಿ ಮೂಲದವರ ಕೈಚಳಕ ಜೋರಾಗಿಯೇ ನಡೆದಿದೆ.

ನೇಪಾಳಿ ಗ್ಯಾಂಗ್ ಕರಾಮತ್ತಿನ ಇತಿಹಾಸ

  • 2021ರಲ್ಲಿ ಡಿ‌‌ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರ್ಮಿ ಆಫೀಸರ್ ಮನೆಯಲ್ಲಿ ಪಕ್ಕದ ಅಪಾರ್ಟ್ಮೆಂಟ್​ನಲ್ಲಿ ಕೆಲಸಕ್ಕಿದ್ದ ನಾಲ್ವರಿಂದ 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.
  • 2023ರಲ್ಲಿ ಮಹಾಲಕ್ಷ್ಮಿ ಠಾಣಾ ವ್ಯಾಪ್ತಿಯಲ್ಲಿ ರಾಕ್​ಲೈನ್ ಸಹೋದರನ ಮನೆಯಲ್ಲಿ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕಿದ್ದ 7 ಜನರಿಂದ 1.53 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.
  • 2024ರಲ್ಲಿ ಸಂಜಯ್ ನಗರ ಠಾಣೆ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ನಾರಾಯಣ ಸ್ವಾಮಿ ಮನೆಯಲ್ಲಿ ಸೆಕ್ಯೂರಿಟಿಯಿಂದಲೇ 1.30 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.
  • ಕಳೆದ ವಾರ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಸಂಪಿಗೆ ಥಿಯೇಟರ್ ಓನರ್ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯಿಂದಲೇ 38 ಲಕ್ಷ ರೂಮ ಮೌಲ್ಯದ ಚಿನ್ನಾಭರಣ, ನಗದು ಕಳವು.
  • ಈಗ ವಿಜಯನಗರ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯಿಂದಲೇ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.

ಇವಿಷ್ಟು ಕೆಲವು ಉದಾಹರಣೆಗಳು ಅಷ್ಟೇ. ಆದರೆ ಈ ರೀತಿಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗೆ ಕಳ್ಳತನ, ದರೋಡೆ ಮಾಡಿಕೊಂಡು ಎಸ್ಕೇಪ್ ಆಗುವ ಅನೇಕ ನೇಪಾಳಿ ಗ್ಯಾಂಗ್​ ಅನ್ನು ಪೊಲೀಸರು ನೇಪಾಳ ತಲುಪುವ ಒಳಗೆ ಹೆಡೆಮುರಿ ಕಟ್ಟಿದ್ದಾರೆ. ಆದರೆ ಸಂಜಯ್ ನಗರ ಪ್ರಕರಣದಲ್ಲಿ ಮಾತ್ರ ಆರೋಪಿಗಳು ನೇಪಾಳ ತಲುಪಿದ್ದು, ರಾಜತಾಂತ್ರಿಕ ಸಮಸ್ಯೆಯಿಂದ ಬಂಧನ ಕಷ್ಟವಾಗಿದೆ.

ಇದನ್ನೂ ಓದಿ: ಊರಿಗೆ ಹೋಗಿ ಬರುವಷ್ಟರಲ್ಲಿ ವ್ಯಾಪಾರಿಗೆ ಕಾದಿತ್ತು ಶಾಕ್​: ಮನೆಯಲ್ಲಿದ್ದ 15 ಕೋಟಿ ಮೌಲ್ಯದ ಚಿನ್ನ ಕಳವು

ಇನ್ನು ವಿಜಯನಗರ ಜ್ಯುವೆಲ್ಲರಿ ಶಾಪ್ ಮಾಲೀಕನ ಮನೆ ಕೇಸ್ ಆರೋಪಿಗಳು ಘಟನೆ ಬೆಳಕಿಗೆ ಬರುವ ಮುನ್ನವೇ ಬೆಂಗಳೂರಿನಿಂದ ಕಾಲ್ಕಿತ್ತಿದ್ದಾರೆ. ಆದರೆ, ಬಾರ್ಡರ್ ಮೂಲಕ ಕೆಜಿಗಟ್ಟಲೇ ಚಿನ್ನ ಸಾಗಿಸುವುದು ಕಷ್ಟದ ಕೆಲಸ. ಹೀಗಾಗಿ ಆರೋಪಿಗಳು ಪರ್ಯಾಯ ಮಾರ್ಗವಾಗಿ ನೇಪಾಳ ತಲುಪಿರುವ ಸಾಧ್ಯತೆ ಇದ್ದು, ಈ ಗ್ಯಾಂಗ್​ ಬಂಧನ ಪೊಲೀಸರಿಗೆ ಅತಿದೊಡ್ಡ ಸವಾಲೇ ಸರಿ.

ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ