- Kannada News Photo gallery Bengaluru's Weekend Ragi Mudde Eating Contest: A Unique Culinary Competition, Kannada News
ರಾಗಿ ಮುದ್ದೆ ಸ್ಪರ್ಧೆ: ತಿಂದು ತೇಗಿದ ಬೆಂಗಳೂರು ಜನತೆ, ಫೋಟೋಸ್ ನೋಡಿ
ಬೆಂಗಳೂರಿನಲ್ಲಿ ನಡೆದ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ವಾರಾಂತ್ಯದಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಿತು. ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ ಈ ಸ್ಪರ್ಧೆಯಲ್ಲಿ, ದಾವಣಗೆರೆಯ ಯೋಗೇಶ್ 13 ಮುದ್ದೆಗಳನ್ನು ತಿಂದು ವಿಜೇತರಾದರು. ಮಹಿಳೆಯರ ವಿಭಾಗದಲ್ಲಿ ಸೌಮ್ಯ ಮೊದಲ ಸ್ಥಾನ ಪಡೆದರು. ಈ ಸ್ಪರ್ಧೆಯ ಮೂಲಕ ಬೆಂಗಳೂರಿನ ಜನರಿಗೆ ರಾಗಿ ಮುದ್ದೆಯ ಪ್ರಾಮುಖ್ಯತೆಯನ್ನು ತಿಳಿಸುವ ಪ್ರಯತ್ನ ಮಾಡಲಾಯಿತು.
Updated on: Nov 11, 2024 | 8:56 AM

ವೀಕೆಂಡ್ ಬಂತು ಅಂದರೆ ಬೆಂಗಳೂರಿನ ಜನರು, ಹೋಟೆಲ್ ಅಥವಾ ರೆಸ್ಟೋರಂಟ್‌ಗೆ ಹೋಗಿ ಪಿಜ್ಜಾ, ಬರ್ಗರ್ ತಿಂದು ಎಂಜಾಯ್ ಮಾಡುವುದು ಸಾಮಾನ್ಯ. ಆದರೆ ನಗರದಲ್ಲಿ ರವಿವಾರ ಸ್ವಲ್ಪ ಡಿಫರೆಂಟ್ ಆಗಿ ಹಳ್ಳಿ ಜನರಂತೆ ಸಿಟಿ ಜನರು ರಾಗಿಮುದ್ದೆ ಮುರಿಯುವುದರಲ್ಲಿ ಬ್ಯುಸಿಯಾಗಿದ್ದರು.

ಬಿಸಿಬಿಸಿ ಮುದ್ದೆ, ನಾಟಿಕೋಳಿ ಸಾರು, ಬಾಯಲ್ಲಿ ನೀರು ತರಿಸುವ ಚಿಕನ್ ಕಬಾಬ್, ಇದಕ್ಕಿಂತ ಊಟಕ್ಕೆ ಒಳ್ಳೆ ಕಾಂಬಿನೇಷನ್ ಬೇಕ ಹೇಳಿ. ನೋಡುತ್ತಿದ್ದರೆ ಬಾಯಲ್ಲಿ ನೀರು ತರಿಸುತ್ತೆ. ರವಿವಾರ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ರಾಗಿ ಮುದ್ದೆ-ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆ ಆಯೋಜಿಸಲಾಗಿತ್ತು.

ಬೆಂಗಳೂರಿನ ಜನರಿಗೆ ರಾಗಿಮುದ್ದೆಯ ಮಹತ್ವ ತಿಳಿಯಲಿ ಅಂತಲೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸದಾ ಕೆಲಸ ಅಂತ ಬ್ಯುಸಿ ಇರುವ ಬೆಂಗಳೂರು ಜನರಿಗೆ ನಾಟಿಕೋಳಿ ಸಾರು ಹಾಗು ಮುದ್ದೆ ತಿನ್ನುವ ಸ್ಪರ್ಧೆ ಖುಷಿ ಕೊಡ್ತು. ಸ್ಪರ್ಧೆಯಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗಿಯಾಗಿದ್ದರು. ಮುದ್ದೆ ತಿನ್ನುವ ಸ್ಪರ್ಧೆಯನ್ನು ಅನಿಲ್ ರೆಡ್ಡಿ ಎಂಬುವರು ಆಯೋಜಿಸಿದ್ದರು.

ಇನ್ನು ನಾವು ಯಾರಿಗೇನು ಕಮ್ಮಿ ಅಂತ ಮಹಿಳೆಯರು ಕೂಡ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಬಿಸಿ ನಾಟಿಕೋಳಿ ಸಾರು, ಮುದ್ದೆ ತಿಂದು ಹೆಣ್ಮಕ್ಳು ಸ್ಟ್ರಾಂಗ್ ಅಂತ ಅಂದರು.

ಸ್ಪರ್ಧೆಯಲ್ಲಿ ದಾವಣಗೆರೆಯ ಯೋಗೇಶ್ 13 ಮುದ್ದೆಯನ್ನು ತಿಂದು ವಿಜೇತರಾದರು. ಮೊದಲ ಸ್ಥಾನ ಪಡೆದ ಯೋಗೇಶ್ ಅವರಿಗೆ ನಿರ್ಮಾಪಕ ಉಮಾಪತಿ ಟಗರು ಹಾಗೂ ಟ್ರೋಫಿ ನೀಡಿ ಸನ್ಮಾನಿಸಿದರು.

ಮಹಿಳೆಯರ ವಿಭಾಗದಲ್ಲಿ 9 ಮುದ್ದೆಯನ್ನ ತಿಂದ ಸ್ಥಳೀಯ ನಿವಾಸಿ ಸೌಮ್ಯರವರು ಮೊದಲ ಸ್ಥಾನಗಳಿಸಿ ಟಿವಿ ಹಾಗೂ ಟ್ರೋಫಿ ಪಡೆದರು. ಜೊತೆಗೆ ಬೇರೆ ಸ್ಪರ್ಧಿಗಳು ಕೂಡಾ ತಮಗಾದಷ್ಟರ ಮಟ್ಟಿಗೆ ಮುದ್ದೆಯನ್ನು ತಿಂದು ನಾವು ಕೂಡಾ ಮುದ್ದೆ ತಿಂದವಿ ಅಂತ ಖಷಿ ಪಟ್ಟರು.

ಒಟ್ಟಿನಲ್ಲಿ ಮುದ್ದೆ ತಿನ್ನುವ ಸ್ಪರ್ಧೆ ಬೆಂಗಳೂರಿನ ಜನರಿಗೆ ಬಹಳ ಖುಷಿ ಕೊಟ್ಟಿದ್ದು, ಅನೇಕರು ಈ ವೀಕೆಂಡ್‌ನ್ನು ಮುದ್ದೆ ತಿನ್ನೋ ಮೂಲಕ ಎಂಜಾಯ್ ಮಾಡಿದರು.



















