ಊರಿಗೆ ಹೋಗಿ ಬರುವಷ್ಟರಲ್ಲಿ ವ್ಯಾಪಾರಿಗೆ ಕಾದಿತ್ತು ಶಾಕ್​: ಮನೆಯಲ್ಲಿದ್ದ 15 ಕೋಟಿ ಮೌಲ್ಯದ ಚಿನ್ನ ಕಳವು

ವಿಜಯನಗರದ ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಮನೆಯಿಂದ 18.4 ಕೆಜಿ ಚಿನ್ನ ಮತ್ತು 40 ಲಕ್ಷ ರೂ. ನಗದು ಕಳವು ಆಗಿದೆ. ಅವರ ಮನೆಯ ಸೆಕ್ಯುರಿಟಿ ಗಾರ್ಡ್ ಆಗಿದ್ದ ನೇಪಾಳ ಮೂಲದ ನಮ್ರಾಜ್ ಈ ಕಳ್ಳತನದಲ್ಲಿ ಶಂಕಿತನಾಗಿದ್ದಾನೆ. ಕಳ್ಳತನವಾದ ಚಿನ್ನದ ಮೌಲ್ಯ 15 ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಊರಿಗೆ ಹೋಗಿ ಬರುವಷ್ಟರಲ್ಲಿ ವ್ಯಾಪಾರಿಗೆ ಕಾದಿತ್ತು ಶಾಕ್​: ಮನೆಯಲ್ಲಿದ್ದ 15 ಕೋಟಿ ಮೌಲ್ಯದ ಚಿನ್ನ ಕಳವು
ಊರಿಗೆ ಹೋಗಿ ಬರುವಷ್ಟರಲ್ಲಿ ವ್ಯಾಪಾರಿಗೆ ಕಾದಿತ್ತು ಶಾಕ್​: ಮನೆಯಲ್ಲಿದ್ದ 15 ಕೋಟಿ ಮೌಲ್ಯದ ಚಿನ್ನ ಕಳವು
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2024 | 4:48 PM

ಬೆಂಗಳೂರು, ನವೆಂಬರ್​ 09: ಚಿನ್ನದ ವ್ಯಾಪಾರಿ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್​​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ವ್ಯಕ್ತಿ ವ್ಯಾಪಾರಿಯ ಮನೆಯಲ್ಲಿ ಬರೋಬ್ಬರಿ 15.15 ಕೋಟಿ ರೂ. ಮೌಲ್ಯದ 18.4 ಕೆ.ಜಿಯ ಚಿನ್ನಾಭರಣ ಕದ್ದು (theft) ಪರಾರಿಯಾಗಿರುವಂತಹ ಘಟನೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನ.7ರಂದು ಊರಿನಿಂದ ವಾಪಸಾದಾಗ ಕಳ್ಳತನ ಬೆಳಕಿಗೆ ಬಂದಿದೆ. ಪೊಲೀಸ್​ ಠಾಣೆಗೆ ಸುರೇಂದ್ರ ಕುಮಾರ್‌ ದೂರು ನೀಡಿದ್ದು, ನೇಪಾಳ ಮೂಲದ ನಮ್ರಾಜ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಸದ್ಯ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ವ್ಯಾಪಾರಿ ಮನೆಯಲ್ಲಿ ಕಳುವಾಗಿದ್ದು ಬರೋಬ್ಬರಿ 18.4ಕೆಜಿ ಚಿನ್ನ. ಆ ಪೈಕಿ ಸುರೇಂದ್ರ ಕುಮಾರ್ ಜೈನ್ ಕುಟುಂಬಕ್ಕೆ 2.8 ಕೆಜಿ ಚಿನ್ನ ಸೇದಿದ್ದು, ಅವರ 5 ಸಹೋದರಿಯರ ಒಟ್ಟು 2.7 ಕೆಜಿ ಚಿನ್ನ ಹಾಗೂ ವ್ಯಾಪಾರದ 12.8 ಕೆಜಿ ಚಿನ್ನ ಕಳುವು ಮಾಡಲಾಗಿದೆ. ಜೊತೆಗೆ ಮನೆಯಲ್ಲಿದ್ದ ವ್ಯಾಪಾರದ 37.8 ಲಕ್ಷ, ವೈಯಕ್ತಿಕ 3 ಲಕ್ಷ ರೂ. ಹಣ ಸಹ ಕಳುವಾಗಿದ್ದು, ಒಟ್ಟಾರೆ 18 ಕೆಜಿ 437 ಗ್ರಾಂ ಚಿನ್ನ, 40.80 ಲಕ್ಷ ನಗದು ಸೇರಿ ಅಂದಾಜು ಮೌಲ್ಯ 15.15 ಕೋಟಿ ರೂ.

ಯಾರು ಈ ನಮ್ರಾಜ್?

ಪೊಲೀಸರಿಗೆ ಉದ್ಯಮಿಯಿಂದ ಆರೋಪಿ ನಮ್ರಾಜ್ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಜ್ಯುವೆಲರಿ ಶಾಪ್ ನಲ್ಲಿ ಏಳು ಜನ ಕೆಲಸ ಮಾಡುತಿದ್ದಾರೆ. 6 ಜನ ಕೆಲಸಗಾರರು ಸ್ವಂತವಾಗಿ ಮನೆಗಳಲ್ಲಿ ವಾಸವಿದ್ದಾರೆ. ನಮ್ರಾಜ್​​ ನೇಪಾಳ ಮೂಲದವನಾಗಿದ್ದಾನೆ. ಜ್ಯುವೆಲರಿ ಶಾಪ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ.

ಈತನಿಗೆ ಮನೆಯಿಲ್ಲದ ಕಾರಣ ಮಾಲೀಕ ತಮ್ಮ ನಿವಾಸದ ಬಳಿ ಪಾರ್ಕಿಂಗ್​ನ ಸೆಕ್ಯೂರಿಟಿ ಮನೆ ನೀಡಿದ್ದರು. ಕಳೆದ ಆರು ತಿಂಗಳಿಂದ ಪತ್ನಿ ಜೊತೆ ಮಾಲೀಕರ ನಿವಾಸದ ಸೆಕ್ಯೂರಿಟಿ ರೂಂನಲ್ಲಿ ನಮ್ರಾಜ್ ವಾಸವಿದ್ದ. ಈ ನಡುವೆ ಜ್ಯುವೆಲರಿ ಶಾಪ್​ನ ಸೆಕ್ಯೂರಿಟಿ ಕೆಲಸದ ಜೊತೆ ಮಾಲೀಕನ ಮನೆಯಲ್ಲೂ ಕೆಲಸ ಮಾಡುತ್ತಿದ್ದ. ಗಿಡಿಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.

ಮನೆ ಹಾಗೂ ಜ್ಯುವೆಲರಿ ಶಾಪ್​ನ ಸಂಪೂರ್ಣ ಆಗುಹೊಗುಗಳನ್ನು ನಮ್ರಾಜ್ ತಿಳಿದಿದ್ದ. ಗುಜರಾತ್​ನ ದೇವರ ಜಾತ್ರೆ ನಿಮಿತ ಊರಿಗೆ ತೆರಳಲು ಸುರೇಂದ್ರ ಕುಮಾರ್ ಜೈನ್ ತಯಾರಿ ನಡೆಸಿದ್ದರು. ಅದರಂತೆ ನವೆಂಬರ್ 1ರಂದು ಸಂಜೆ 5 ಗಂಟೆಗೆ ಗುಜರಾತ್​ಗೆ ಕುಟುಂಬ ಸಮೇತ ಪ್ರಯಾಣ ಬೆಳಿಸಿದ್ದಾರೆ. ಈ ನಡುವೆ ಭದ್ರತೆಯ ಆತಂಕದಲ್ಲಿ ಹಲವು ಕಡೆಗಳಿಂದ ಚಿನ್ನ ತಂದು ಮನೆಯಲ್ಲಿಟ್ಟಿದ್ದರು.

ವ್ಯಾಪಾರದ ವಜ್ರ ಕಚಿತ ಚಿನ್ನಾಭರಣ, ನಗದು, ಐದು ಸಹೋದರಿಯರಿಗೆ ಸೇರಿದ ಚಿನ್ನಾಭರಣ ಎಲ್ಲವೂ ಸೇರಿ 18 ಕೆಜಿ ಚಿನ್ನ ಹಾಗೂ 40 ಲಕ್ಷ ರೂ. ಮನೆಯಲ್ಲಿಟ್ಟು ತೆರಳಿದ್ದಾರೆ. ಒಂದು ವಾರದ ಬಳಿಕ ಸುರೇಂದ್ರ ಮನೆಗೆ ವಾಪಾಸ್ ಆಗಿದ್ದು, ಈ ವೇಳೆ ಮನೆ ಕಳ್ಳತವಾಗಿರುವುದು ಕಂಡುಬಂದಿದೆ. ನಮ್ರಾಜ್​ಗೆ ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಬಂದಿದೆ. ಹೀಗಾಗಿ ಆತನೇ ಕಳ್ಳತನ ಮಾಡಿರುವ ಬಗ್ಗೆ ಉದ್ಯಮಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ವಿಜಯನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಡಿಸಿಪಿ ಗಿರೀಶ್ ಹೇಳಿದ್ದಿಷ್ಟು 

ಘಟನೆ ಸಂಬಂಧ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಪ್ರತಿಕ್ರಿಯಿಸಿದ್ದು, ವಿಜಯನಗರ ಠಾಣೆಗೆ ಸುರೇಂದ್ರ ಕುಮಾರ್‌ ದೂರು ಕೊಟ್ಟಿದ್ದರು. ಅವರು ಊರಿಗೆ ಹೋಗಿದ್ದರು. ಗಿಡಗಳಿಗೆ ನೀರು ಹಾಕಲು ಕೆಲಸಕ್ಕಿದ್ದ ನೇಪಾಳಿಗೆ ಕೀ ಕೊಟ್ಟಿದ್ದರು. ನೇಪಾಳಿ ಮತ್ತು ಹೆಂಡತಿ, ಇಬ್ಬರು ಸ್ನೇಹಿತರು ಸೇರಿ ನ.3ರಂದು ರಾತ್ರಿ ಕಳ್ಳತನ ಮಾಡಿದ್ದಾರೆ.

ನಾಲ್ವರೂ ನೇಪಾಳ ಮೂಲದವರು, 2 ವರ್ಷದಿಂದ ಕೆಲಸ ಮಾಡ್ತಿದ್ದರು. ನಾಲ್ವರೂ ನೇಪಾಳ ಸೇರಿದ್ದಾರೆ, ಪೊಲೀಸರ ತಂಡ ನೇಪಾಳಕ್ಕೆ ಹೋಗಿದೆ. 15 ಕೋಟಿ ರೂ. ಮೌಲ್ಯದ ಚಿನ್ನ, ನಗದು ಕಳವಾಗಿದೆ ಎಂದು ದೂರು ನೀಡಿದ್ದಾರೆ ಎಂದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ