ಇಕ್ಕಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಕಂದಾಯ ಇಲಾಖೆ ಕಾರ್ಯದರ್ಶಿ ಬರೆದ ಪತ್ರ ತೋರಿಸಿದ ಅಶೋಕ
ಮುಖ್ಯಮಂತ್ರಿ ಸಿದ್ದರಾಮಯ್ಯ ನೋಟೀಸ್ ಗಳನ್ನು ವಾಪಸ್ಸು ತೆಗೆದುಕೊಂಡಿದ್ದೇವೆ ಅನ್ನುತ್ತಾರೆ, ಆದರೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಕ್ಫ್ ಬೋರ್ಡ್ ನೀಡಿದ ನೋಟೀಸ್ ಗಳ ಪ್ರಗತಿ ಮತ್ತು ಸ್ಟೇಟಸ್ ವರದಿಯನ್ನು ಕೇಳಿದ್ದಾರೆ. ದ್ವಿಮುಖ ನೀತಿ ಪ್ರದರ್ಶಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಎಂದು ಅಶೋಕ ಪ್ರಶ್ನಿಸಿದರು.
ಬೆಂಗಳೂರು: ಜಮೀರ್ ಅಹ್ಮದ್ ಖಾನ್ ಚೇರ್ಮನ್ ಆಗಿರುವ ರಾಜ್ಯದ ವಕ್ಫ್ ಬೋರ್ಡ್ ತನ್ನ ಕರಾಳ ಸ್ವರೂಪವನ್ನು ಪ್ರದರ್ಶಿಸಿ ಜನರಲ್ಲಿ ಆತಂಕ ಮೂಡಿಸಿದೆ, ರೈತರ ಜಮೀನು ಮತ್ತು ಇತರ ಆಸ್ತಿಗಳನ್ನು ಕಬಳಿಸುವ ಪ್ರಯತ್ನ ಮಾಡುತ್ತಿದೆ, ನಿನ್ನೆ ತಾನು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದೆ, ಊರಲ್ಲಿ ಒಂದೇ ಒಂದು ಮುಸಲ್ಮಾನ ಕುಟುಂಬ ಇಲ್ಲದಿದ್ದಾಗ್ಯೂ ವಕ್ಫ್ ಬೋರ್ಡ್ನಿಂದ ನೋಟೀಸ್ ಗಳು ಜಾರಿಯಾಗಿವೆ, ಬಿಜೆಪಿ ರಾಜ್ಯಾದಾದ್ಯಂತ ಪ್ರತಿಭಟನೆ ಮಾಡಿದರೆ ಮುಖ್ಯಮಂತ್ರಿಯವರು, ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ, ನೋಟೀಸ್ ಗಳನ್ನು ವಾಪಸ್ಸು ಪಡೆಯಲಾಗಿದೆ ಎನ್ನುತ್ತಾರೆ ಎಂದು ಆರ್ ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಚಾರಣೆ 2 ಗಂಟೆ ಮಾತ್ರ ನಡೆಯುತ್ತದೆ ಅಂತ ಸಿದ್ದರಾಮಯ್ಯಗೆ ಮೊದಲೇ ಗೊತ್ತಾಗಿದ್ದು ಹೇಗೆ? ಆರ್ ಅಶೋಕ