ವಿಚಾರಣೆ 2 ಗಂಟೆ ಮಾತ್ರ ನಡೆಯುತ್ತದೆ ಅಂತ ಸಿದ್ದರಾಮಯ್ಯಗೆ ಮೊದಲೇ ಗೊತ್ತಾಗಿದ್ದು ಹೇಗೆ? ಆರ್ ಅಶೋಕ
ಲೋಕಾಯುಕ್ತ ಕಚೇರಿಗೆ ಮುಖ್ಯಮಂತ್ರಿಯಾದವರು ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುತ್ತಾರೆ, ತಾವೇ ನೇಮಕ ಮಾಡಿದ ಅಧಿಕಾರಿಗಳ ಎದುರು ಸಿದ್ದರಾಮಯ್ಯ ಕೈಕಟ್ಟಿ ಕೂರುವುದು ನಾಚಿಕೆಗೇಡಿನ ಸಂಗತಿ, ಸಿದ್ದರಾಮಯ್ಯ ಬದುಕಿನ ತೆರೆದ ಪುಸ್ತಕದಲ್ಲಿ ಕೇವಲ ಕಪ್ಪು ಚುಕ್ಕೆಗಳು ಮಾತ್ರ ಕಾಣುತ್ತಿವೆ ಎಂದು ಅಶೋಕ ಹೇಳಿದರು.
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ ವಾಪಸ್ಸಾದ ನಂತರ ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಆರ್ ಅಶೋಕ, ಮುಖ್ಯಮಂತ್ರಿಯವರು ಲೋಕಾಯುಕ್ತ ಅಧಿಕಾರಿಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಂತಿದೆ, ಸಿಎಂ ಅವರ ಇವತ್ತಿನ ವೇಳಾಪಟ್ಟಿಯಲ್ಲಿ 10 ಗಂಟೆಗೆ ಲೋಕಾಯುಕ್ತ ಕಚೇರಿ 12 ಗಂಟೆಗೆ ಚನ್ನಪಟ್ಟಣ ಅಂತ ಉಲ್ಲೇಖವಾಗಿದೆ. ಲೋಕಾಯುಕ್ತ ವಿಚಾರಣೆ ಎರಡು ಗಂಟೆ ಮಾತ್ರ ನಡೆಯುತ್ತದೆ ಅಂತ ಸಿಎಂಗೆ ಮೊದಲೇ ಹೇಗೆ ಗೊತ್ತಾಯಿತು? ಎಂದು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಳೆದ 16 ತಿಂಗಳಲ್ಲಿ ರಾಮನಗರ ರಸ್ತೆಗಳಿಗೆ ಒಂದು ಹಿಡಿಮಣ್ಣು ಹಾಕೋದು ಶಿವಕುಮಾರ್ಗೆ ಆಗಿಲ್ಲ: ಅಶೋಕ