ಕಳೆದ 16 ತಿಂಗಳಲ್ಲಿ ರಾಮನಗರ ರಸ್ತೆಗಳಿಗೆ ಒಂದು ಹಿಡಿಮಣ್ಣು ಹಾಕೋದು ಶಿವಕುಮಾರ್​ಗೆ ಆಗಿಲ್ಲ: ಅಶೋಕ

ಕಳೆದ 16 ತಿಂಗಳಲ್ಲಿ ರಾಮನಗರ ರಸ್ತೆಗಳಿಗೆ ಒಂದು ಹಿಡಿಮಣ್ಣು ಹಾಕೋದು ಶಿವಕುಮಾರ್​ಗೆ ಆಗಿಲ್ಲ: ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 05, 2024 | 3:33 PM

ರಾಮನಗರ ಮತ್ತು ಚನ್ನಪಟ್ಟಣದ ಬಗ್ಗೆ ಅಷ್ಟೊಂದು ಕಾಳಜಿ ತೋರುವ ಶಿವಕುಮಾರ್ ಈ ಜಿಲ್ಲೆಯ ಉಸ್ತುವಾರಿ ಮಂತ್ರಿ ಯಾಕಾಗಲಿಲ್ಲ? ಇಲ್ಲೇನೂ ಗಿಟ್ಟದು ಅಂತ ಅವರಿಗೆ ಚೆನ್ನಾಗಿ ಗೊತ್ತಿತ್ತು, ಹಾಗಾಗೇ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ಅಶೋಕ ವ್ಯಂಗ್ಯವಾಡಿದರು. ರಾಮಲಿಂಗಾರೆಡ್ಡಿ ಅವರಿಗೆ ರಾಮನಗರದ ಬಗ್ಗೆ ಏನು ಗೊತ್ತು ಎಂದು ಅವರು ಪ್ರಶ್ನಿಸಿದರು.

ರಾಮನಗರ: ಇಂದು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೆಚ್ ಡಿ ದೇವೇಗೌಡರ ಜೊತೆ ಆಗಮಿಸಿದ ವಿರೋಧ ಪಕ್ಷದಅ ನಾಯಕ ಅರ್ ಅಶೋಕ ಇದೇ ಭಾಗದವರಾಗಿರುವ ಡಿಕೆ ಶಿವಕುಮಾರ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಭಿವೃದ್ಧಿಯ ಹರಿಕಾರ ಅಂತ ಬಿಂಬಿಸಿಕೊಳ್ಳುತ್ತಿರುವ ಶಿವಕುಮಾರ್ ಕಳೆದ 16 ತಿಂಗಳಲ್ಲಿ ರಾಮನಗರ ಜಿಲ್ಲೆಯ ರಸ್ತೆಗಳಿಗೆ ಒಂದು ಹಿಡಿ ಮಣ್ಣು ಕೂಡ ಹಾಕಿಲ್ಲ, ಚನ್ನಪಟ್ಟಣಕ್ಕೆ ನೀರಾವರಿ ಯೋಜನೆ ತಂದಿದ್ದು ದೇವೇಗೌಡರು, ನಂತರ ಹಣ ಬಿಡುಗಡೆ ಮಾಡಿದ್ದು ಸದಾನಂದ ಗೌಡ ಮತ್ತು ಬಸವರಾಜ ಬೊಮ್ಮಾಯಿ ಎಂದ ಅಶೋಕ, ಯೋಗೇಶ್ವರ್ ಕೆರೆ ತುಂಬಿಸಲು ಅವರೇನು ನೀರಾವರಿ ಸಚಿವರಾಗಿದ್ದರೆ? ಅಂತ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಹಗರಣ: ಗೋಲ್ಮಾಲ್ ಸಿಎಂ 4000 ಕೋಟಿ ಗುಳುಂ, ಆರ್ ಅಶೋಕ ವಾಗ್ದಾಳಿ