ನನ್ನ ವಿರುದ್ಧ ದಾಖಲಾಗಿರುವ ಎಫ್ಐಅರ್ ಪ್ರತಿ ಹಾಸ್ಯಾಸ್ಪದವಾಗಿದೆ: ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿಯ ವಿರುದ್ಧ ಯಾಕೆ ಎಫ್​ಐಅರ್ ಅಂತ ಅರ್ಥವಾಗುತ್ತಿಲ್ಲ, ಪಕ್ಷದ ಶಾಸಕಾಂಗ ನಾಯಕನ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ನೀಡಿದ ದೂರಿನ ಆಧಾರದ ಮೇಲೆ ಇವರು ಎಫ್​ಐಆರ್ ಹಾಕುತ್ತಾರೆಂದರೆ, ಅಧಿಕಾರಿಗಳು ಪ್ರಶ್ನಾತೀತರು ಮತ್ತು ಅವರ ವಿರುದ್ಧ ದೂರು ಕೊಡುವ ಹಾಗಿಲ್ಲ ಎನ್ನುವಂತಾಯಿತು ಎಂದು ಕುಮಾರಸ್ವಾಮಿ ಹೇಳಿದರು.

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 05, 2024 | 1:34 PM

ರಾಮನಗರ: ಎಡಿಜಿಪಿ ಎಂ ಚಂದ್ರಶೇಖರ್ ಸಲ್ಲಿಸಿದ ದೂರಿನ ಆಧಾರದ ಮೇಲೆ ತಮ್ಮ ವಿರುದ್ಧ ಎಫ್​ಐಅರ್ ದಾಖಲಿಸಿರುವುದಕ್ಕೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್ ಡಿ ಕುಮಾರಸ್ವಾಮಿ, ಎಫ್​ಐಆರ್ ಪ್ರತಿಯಲ್ಲಿರುವ ವಿವರಣೆ ಹಾಸ್ಯಾಸ್ಪದವಾಗಿದೆ ಎಂದರು. ತಾನು ಯಾರನ್ನೂ ಥ್ರೆಟ್ ಮಾಡಿಲ್ಲ ಮತ್ತು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ, ಎಫ್​ಐಅರ್ ಅನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್​​: ಕೇಂದ್ರ ಸಚಿವ ಎ1