AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್​​: ಕೇಂದ್ರ ಸಚಿವ ಎ1

ಗಣಿ ಹಗರಣ ಪ್ರಕರಣದ ತನಿಖೆ ವಿಚಾರವಾಗಿ ಕಳೆದ ಕೆಲವು ದಿನಗಳ ಹಿಂದೆ ಎಡಿಜಿಪಿ ಚಂದ್ರೇಶಖರ್​ ಮತ್ತು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಹೆಚ್​ಡಿ ಕುಮಾರಸ್ವಾಮಿ ಅವರು ಎಡಿಜಿಪಿ ಚಂದ್ರಶೇಖರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಚಂದ್ರಶೇಖರ್ ಅವರು ದೂರು ದಾಖಲಿಸಿದ್ದರು.

ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್​​: ಕೇಂದ್ರ ಸಚಿವ ಎ1
ಹೆಚ್​ಡಿ ಕುಮಾರಸ್ವಾಮಿ
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on:Nov 05, 2024 | 11:31 AM

ಬೆಂಗಳೂರು, ನವೆಂಬರ್​ 05: ಎಡಿಜಿಪಿ ಚಂದ್ರಶೇಖರ್​ (ADGP Chandrashekar) ಅವರು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ (FIR)​ ದಾಖಲಾಗಿದೆ. ಬಿಎನ್​ಎಸ್​ ಅಂಡರ್ ಸೆಕ್ಷನ್ 224ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಹೆಚ್​ಡಿ ಕುಮಾರಸ್ವಾಮಿ ಆರೋಪಿ ನಂಬರ್​ 1 ಆಗಿದ್ದಾರೆ. ಜೆಡಿಎಸ್​ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಆರೋಪಿ ನಂಬರ್​ 2 ಆಗಿದ್ದಾರೆ. ಮತ್ತು ಜೆಡಿಎಸ್​ ಮುಖಂಡ ಸುರೇಶ್ ಬಾಬು ಆರೋಪಿ ನಂಬರ್​ 3 ಆಗಿದ್ದಾರೆ.

ಆರೋಪಿಗಳು ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದಾರೆ. ಮತ್ತು ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ಅವರು ದೂರಿನಲ್ಲಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್​ಐಆರ್​ ದಾಖಲಾಗಿದೆ.

ಏನಿದು ಪ್ರಕರಣ

ನಿಯಮ ಉಲ್ಲಂಘನೆ ಮಾಡಿ ಸಾಯಿ ಮಿನರಲ್ಸ್​ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್​ಐಟಿ ಎಡಿಜಿಪಿ ಚಂದ್ರಶೇಖರ್​ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ಇದಕ್ಕೆ, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಹೇಗಾದರೂ ಮಾಡಿ ಒಮ್ಮೆಯಾದರೂ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಚು ಹೂಡಿದ್ದಾರೆ. ಅಧಿಕಾರಿ ಯಾವ ಹಿನ್ನೆಲೆಯಿಂದ ಬಂದವರು? ಅಕ್ರಮ ಹಣ ಸಂಪಾದನೆ ಮಾಡುವವರಿಗೆ ರಕ್ಷಣೆ ಕೊಡಿ ಎಂದು ನಿಮ್ಮನ್ನು ಐಪಿಎಸ್ ಆಫೀಸರ್ ಮಾಡಿದ್ದಾರಾ? ನಾನು ಬೇಲ್ ತಗೊಂಡೆ, ತನಿಖೆಗೆ ಮಾಡಬೇಡಿ ಎಂದು ಹೇಳಿಲ್ಲ. ನೀವು ಏನ್ ಮಾಡಿದ್ದೀರಿ? ನಿಮ್ಮ ವಿರುದ್ಧವೇ ಕೇಸ್ ಇದೆ, ಆರೋಪಿ ನಂಬರ್ 2. ಹೈಕೋರ್ಟ್​​​ನಲ್ಲಿ ಅಧಿಕಾರಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು.

ಇದನ್ನೂ ಓದಿ: ಹೆಚ್​ಡಿಕೆಗೆ ಗಂಗೇನಹಳ್ಳಿ ಜತೆ ಶ್ರೀಸಾಯಿ ಮಿನರಲ್ಸ್‌ ಕೇಸ್ ಉರುಳು: ಏನಿದು ಪ್ರಕರಣ?

ಈ ಬಳಿಕ ಎಡಿಜಿಪಿ ಚಂದ್ರಶೇಖರ್​​ ತಮ್ಮ ಸಿಬ್ಬಂದಿಗೆ ಪತ್ರ ಬರೆದು, ಹೆಚ್​ ಡಿ ಕುಮಾರಸ್ವಾಮಿ ಅವರು ನನ್ನ ಮೇಲೆ ಸಾಕಷ್ಟು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮನ್ನು ಕುಗ್ಗಿಸುವ ಪ್ರಯತ್ನ ಮತ್ತು ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಗೆ ನಾವು ನಿರಾಶೆಗೊಳ್ಳಬಾರದರು ಎಂದು ಪತ್ರದಲ್ಲಿ ಬರೆದಿದ್ದರು.

ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ. ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ ಎಂದು ಪತ್ರದಲ್ಲಿ ಜಾರ್ಜ್​​ ಬರ್ನಾಡ್​​ ಶಾ ಅವರ ಹೇಳಿಕೆ ಉಲ್ಲೇಖಿಸಿದ್ದರು. ಈ ಬಳಿಕ ಎಡಿಜಿಪಿ ಚಂದ್ರಶೇಖರ್​ ಅವರು ಸಂಜಯನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Tue, 5 November 24

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ