ಹೆಚ್​ಡಿಕೆಗೆ ಗಂಗೇನಹಳ್ಳಿ ಜತೆ ಶ್ರೀಸಾಯಿ ಮಿನರಲ್ಸ್‌ ಕೇಸ್ ಉರುಳು: ಏನಿದು ಪ್ರಕರಣ?

ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ನಡುವಿನ ಸಮರ ತಾರಕಕ್ಕೇರಿದೆ. ಚಂದ್ರಶೇಖರ್ ತಮ್ಮ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಜಾರ್ಜ್ ಬರ್ನಾಡ್ ಶಾ ವಾಕ್ಯ ಉಲ್ಲೇಖಿಸಿ ಹಂದಿ ಪದ ಬಳಕೆ ಮಾಡಿ ಪರೋಕ್ಷವಾಗಿ ಹೆಚ್​ಡಿಕೆಗೆ ಟಾಂಗ್ ಕೊಟ್ಟಿದ್ದಾರೆ. ಇದು ದಳಪತಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಮಧ್ಯ ಇದೀಗ ಲೋಕಾಯುಕ್ತ ಹೆಚ್​ಡಿಕೆ ವಿರುದ್ಧ ನಿವೃತ್ತ ನ್ಯಾ.ಸಂತೋಷ್ ಹೆಗಡೆ ವರದಿ ಆಧರಿಸಿ ಶ್ರೀಸಾಯಿ ಮಿನರಲ್ಸ್ ಪ್ರಕರಣದ ತನಿಖಗೆ ಅಖಾಡಕ್ಕಿಳಿದಿದೆ. ಹಾಗಾದ್ರೆ, ಹಾಗಾದ್ರೆ ಏನಿದು ಶ್ರೀಸಾಯಿ ಮಿನರಲ್ಸ್ ಪ್ರಕರಣ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹೆಚ್​ಡಿಕೆಗೆ ಗಂಗೇನಹಳ್ಳಿ ಜತೆ ಶ್ರೀಸಾಯಿ ಮಿನರಲ್ಸ್‌ ಕೇಸ್ ಉರುಳು: ಏನಿದು ಪ್ರಕರಣ?
ಹೆಚ್​ಡಿ ಕುಮಾರಸ್ವಾಮಿ
Follow us
ರಮೇಶ್ ಬಿ. ಜವಳಗೇರಾ
|

Updated on:Sep 30, 2024 | 4:44 PM

ಬೆಂಗಳೂರು, (ಸೆಪ್ಟೆಂಬರ್ 30): ನಿಯಮ ಉಲ್ಲಂಘನೆ ಮಾಡಿ ಸಾಯಿ ಮಿನರಲ್ಸ್​ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಆರೋಪ ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಲೋಕಾಯುಕ್ತ ಎಡಿಜಿಪಿ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದು, 2011ರಲ್ಲಿ ಗಣಿ ಗುತ್ತಿಗೆಯಲ್ಲಿ ಅಕ್ರಮ ಆಗಿದೆ ಅಂತ ಸಂತೋಷ್​ ಹೆಗಡೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಕಚೇರಿಯಿಂದ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಇದೀಗ ತನಿಖೆಗೆ ಆದೇಶ ನೀಡುವಂತೆ ಪತ್ರ ಬರೆದಿದ್ದಾರೆ. ಈ ಪತ್ರದ ಬೆನ್ನಲ್ಲೇ ಲೋಕಾಯುಕ್ತ ಎಸ್​ಐಟಿ ಅಧಿಕಾರಿಗಳು, ನ್ಯಾ.ಸಂತೋಷ್ ಹೆಗಡೆ ವರದಿ ಆಧರಿಸಿಯೇ ತನಿಖೆ ಶುರು ಮಾಡಿದ್ದಾರೆ. ಲೋಕಾಯುಕ್ತ ಎಸ್​​ಐಟಿಯಿಂದ ಕುಮಾರಸ್ವಾಮಿ‌ ಜಾಮೀನು ರದ್ದುಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಶ್ರೀಸಾಯಿ ಮಿನರಲ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿದ್ದರು. ಆದ್ರೆ, ಇದೀಗ ತನಿಖೆಯ ಅಖಾಡಕ್ಕೆ ಲೋಕಾಯುಕ್ತ ಎಸ್​​ಐಟಿ ಎಂಟ್ರಿ ಕೊಟ್ಟಿದ್ದು, ಹೆಚ್​ಡಿಕೆ ಜಾಮೀನು ರದ್ದುಕೋರಿ ಎಸ್​ಐಟಿ, ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಹೀಗಾಗಿ ಗಂಗೇನಹಳ್ಳಿ ಜತೆ, ಶ್ರೀಸಾಯಿ ಮಿನರಲ್ಸ್‌ ಕೇಸ್ ಕುಮಾರಸ್ವಾಮಿಗೆ ಉರುಳಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ: ಎಡಿಜಿಪಿ ಚಂದ್ರಶೇಖರ್

ಏನಿದು ಶ್ರೀಸಾಯಿ ಗಣಿ ಕೇಸ್?

ಬಳ್ಳಾರಿಯ ಸಂಡೂರು ತಾಲೂಕಿನ NEBರೇಂಜ್ ಪ್ರದೇಶದಲ್ಲಿನ ಸರ್ಕಾರದ 550 ಎಕರೆ ಪ್ರದೇಶಕ್ಕೆ ಗಣಿ ಗುತ್ತಿಗೆ ಮಂಜೂರಾತಿ ಮಾಡುವಂತೆ 2006 ಏಪ್ರಿಲ್​ನಲ್ಲೇ ಅರ್ಜಿ ಸಲ್ಲಿಸಲಾಗಿತ್ತು. ಶ್ರೀಸಾಯಿ ವೆಂಕಟೇಶ್ವರ್​ ಮಿನರಲ್ಸ್ ಕಂಪನಿಗೆ ಮಂಜೂರಾತಿ ಮಾಡಲಾಗಿತ್ತಂತೆ. ಸೋಮನಾಥ ವಿ.ಸಾಕ್ರೆ ರಾಜಕುಮಾರ್ ಅಗರವಾಲ್ ಅವರ ಕಂಪನಿ ಇದ್ದಾಗಿದ್ದು, ಗಣಿ ಗುತ್ತಿಗೆಗೆ ಕೋರಿ ಅರ್ಜಿಯೊಂದಿಗೆ ಎರಡು ಡಿಡಿ, ಚೆಕ್​ ಸಲ್ಲಿಸಿದ್ರಂತೆ. 2006ಏ. 17ರಂದು ಗಣಿ & ಭೂ ವಿಜ್ಞಾನ ಇಲಾಖೆಗೆ ಅರ್ಜಿ ಕೂಡ ಸಲ್ಲಿಸಿದ್ರಂತೆ. ಸಾಕ್ರೆ ಹೆಸರಿನ ಬದಲು ವಿನೋದ್ ಗೋಯೆಲ್ ಹೆಸರಿಗೆ ಗುತ್ತಿಗೆ ಮಾಡಲಾಗಿತ್ತಂತೆ. ಲಾಭ ಪಡೆಯುವ ಉದ್ದೇಶ ವಿನೋದ್ ಗೋಯಲ್ ಪ್ಲ್ಯಾನ್​ ಮಾಡಿದ್ರು ಅನ್ನೋ ಬಗ್ಗೆ ಮಾಹಿತಿ ಇದೆ. ಇದೇ ವಿನೋದ್ ಗೋಯಲ್​ ಇಲಾಖೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡಿದ್ರಂತೆ. ಜಯಚಂದ್ರ, ಜವರೇಗೌಡ ಅನ್ನೋರ ಜತೆ ಶಾಮೀಲಾಗಿ ಅಕ್ರಮವೆಸಗಿರುವ ಆರೋಪ ಇದೆ. ಸುಳ್ಳು ದಾಖಲೆ ಸೃಷ್ಟಿಸಿ, ಆ ದಾಖಲೆಗಳ ಆಧರಿಸಿ ಅಕ್ರಮಕ್ಕೆ ಅನುಮತಿ ನೀಡಲಾಗಿತ್ತಂತೆ. ಸಾಕ್ರೆ ಹೆಸರಿನ ಬದಲು ವಿನೋದ್ ಗೋಯೆಲ್ ಹೆಸರಿಗೆ ಗುತ್ತಿಗೆ ಪಡೆದುಕೊಂಡು, ಅಕ್ರಮವಾಗಿ ಗಣಿ ಗುತ್ತಿಗೆ ಪಡೆಯಲು ಯತ್ನಿಸಿದ್ದಾರೆಂಬ ಆರೋಪ ಇದೆ. ವಿನೋದ್​ ಗೋಯಲ್ ಯಾವುದೇ ಗಣಿ ಗುತ್ತಿಗೆಗೆ ಅರ್ಜಿ ಹಾಕಿರಲಿಲ್ವಂತೆ. ಆಗ ಸಿಎಂ ಆಗಿದ್ದ ಹೆಚ್​.ಡಿ ಕುಮಾರಸ್ವಾಮಿ ಒಳಸಂಚಿನಿಂದ ಸಂಡೂರು ಬಳಿಯ 550 ಎಕರೆ ಭೂಮಿ ಮಂಜೂರು ಆರೋಪ ಇದೆ. ಅಕ್ಟೋಬರ್​ 5, 2007 ರಂದು ಇಲಾಖೆಗೆ ಕಡತ ಸಲ್ಲಿಸಲು ಖುದ್ದು ಕುಮಾರಸ್ವಾಮಿಯೇ ನಿರ್ದೇಶನ ಕೊಟ್ಟಿರುವ ಬಗ್ಗೆ ಆರೋಪ ಇದೆ.

ಕೇವಲ ಇದಿಷ್ಟೇ ಆರೋಪಗಳು ಮಾತ್ರವಲ್ಲ,, ಕುಮಾರಸ್ವಾಮಿ ಖನಿಜ ರಿಯಾಯಿತಿ ನಿಯಾಮವಳಿ 1960ಕ್ಕೆ ವಿರುದ್ಧವಾಗಿ ಆದೇಶ ನೀಡಿದ್ದು, ಯಾವುದೇ ಸ್ಪಷ್ಟ ಕಾರಣ ನೀಡದಿರುವ ಆರೋಪವೂ ಇದೆ. ನಾನು ದಾಖಲೆಗಳನ್ನ ಪರಿಶೀಲನೆ ಮಾಡಿದ್ದೇನೆ.. ಎಲ್ಲವನ್ನೂ ಪರಿಶೀಲನೆ ಮಾಡಿಯೇ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಗೆ ಭೂಮಿ ಮಂಜೂರು ಮಾಡಲಾಗಿದೆ ಅಂತ ಅಕ್ಟೋಬರ್​ 6, 2007 ರ ಕಡತದಲ್ಲಿ ಕುಮಾರಸ್ವಾಮಿ ಬರೆದಿರುವ ಬಗ್ಗೆ ಆರೋಪ ಇದೆ..

ಶ್ರೀಸಾಯಿ ಮಿನರಲ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿದ್ದರು. ಆದ್ರೀಗ ತನಿಖೆಯ ಅಖಾಡಕ್ಕೆ ಲೋಕಾಯುಕ್ತ ಎಸ್​​ಐಟಿ ಎಂಟ್ರಿ ಕೊಟ್ಟಿದ್ದು, ಹೆಚ್​ಡಿಕೆಗೆ ಸಂಕಷ್ಟದ ಸುಳಿ ಸುತ್ತಿಕೊಂಡಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:40 pm, Mon, 30 September 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ