ಕೆಆರ್​ಎಸ್ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ: PSI ಸಸ್ಪೆಂಡ್

ಇಲವಾಲ ಠಾಣೆ ವ್ಯಾಪ್ತಿಯಲ್ಲಿ ಸೆ. 28ರಂದು ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ಮಾಡಿದ್ದ ಮೈಸೂರು ತಾಲೂಕಿನ ಇಲವಾಲ ಠಾಣೆ PSI ಮಂಜುನಾಥ ನಾಯಕ್​ರನ್ನು ಕರ್ತವ್ಯಲೋಪ ಆರೋಪದಡಿ ಅಮಾನತ್ತು ಮಾಡಿ ಎಸ್​ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.  

ಕೆಆರ್​ಎಸ್ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ: PSI ಸಸ್ಪೆಂಡ್
ಕೆಆರ್​ಎಸ್ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ: PSI ಸಸ್ಪೆಂಡ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 30, 2024 | 5:19 PM

ಮೈಸೂರು, ಸೆಪ್ಟೆಂಬರ್​ 30: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅದ್ಧೂರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ನಗರದ ಹೊರವಲಯದ ಕೆಆರ್​ಎಸ್​ ಬ್ಯಾಕ್​ ವಾಟರ್​ನಲ್ಲಿ ನೂರಕ್ಕೂ ಅಧಿಕ ಯುವತಿ-ಯುವತಿಯರಿಂದ ರೇವ್ ಪಾರ್ಟಿ (Reva party) ಮಾಡಲಾಗಿದೆಯಾ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಸದ್ಯ ಪಾರ್ಟಿ ವೇಳೆ ದಾಳಿ ಮಾಡಿದ್ದ ಪಿಎಸ್​ಐ ಅವರನ್ನು ಅಮಾನತ್ತು ಮಾಡಲಾಗಿದೆ.

ಕರ್ತವ್ಯಲೋಪ ಆರೋಪದಡಿ PSI ಅಮಾನತ್ತು

ಇಲವಾಲ ಠಾಣೆ ವ್ಯಾಪ್ತಿಯಲ್ಲಿ ಸೆ. 28ರಂದು ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ಮಾಡಿದ್ದ ಮೈಸೂರು ತಾಲೂಕಿನ ಇಲವಾಲ ಠಾಣೆ PSI ಮಂಜುನಾಥ ನಾಯಕ್​ರನ್ನು ಕರ್ತವ್ಯಲೋಪ ಆರೋಪದಡಿ ಅಮಾನತ್ತು ಮಾಡಿ ಎಸ್​ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ? 64 ಜನರ ವಿರುದ್ಧ ಎಫ್​ಐಆರ್​ ದಾಖಲು

ಅದ್ಧೂರಿ ಪಾರ್ಟಿಯಲ್ಲಿ ಯುವಕರು, ಯುವತಿಯರು ಭಾಗಿಯಾಗಿದ್ದರು. ದಾಳಿ ವೇಳೆ ಪಿಎಸ್​​ಐ ಮೇಲೆ ಹಲ್ಲೆ ನಡೆಸಿ ಯುವಕರು ಪರಾರಿಯಾಗಿದ್ದರು. ನಂತರ ಮಂಜುನಾಥ ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ದಿಢೀರ್ ಆಗಿ ಅಮಾನತು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಮಂಜುನಾಥ ನಾಯಕ್ ಆಸ್ಪತ್ರೆಗೆ ದಾಖಲಾದ ನಂತರ ಎಎಸ್​ಪಿ ನಾಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಯುವಕರು, ಯುವತಿಯರನ್ನು ವಶಕ್ಕೆ ಪಡೆದು 64 ಜನರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು. ಪಾರ್ಟಿ ಆಯೋಜಿಸಿದ್ದ ಐವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು. ಉಳಿದವರಿಗೆ ನೋಟಿಸ್ ನೀಡಿಲಾಗಿತ್ತು.

ಇದನ್ನೂ ಓದಿ: ದಸರಾ ಉತ್ಸದ ನಡುವೆ ಮೈಸೂರು ಹೊರವಲಯದಲ್ಲಿ ರೇವ್​ ಪಾರ್ಟಿ?

ಸದ್ಯ ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಮಾದಕ ದ್ರವ್ಯ ಸಿಕ್ಕಿಲ್ಲ. ವಿವಿಧ ಮಾದರಿಯ ಬಿಯರ್ ಬಾಟಲ್​ಗಳು, ಮದ್ಯ, ಸಿಗರೇಟ್ ಪತ್ತೆಯಾಗಿವೆ. ಕೆಲವರು ಕಾರುಗಳನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ವಶಕ್ಕೆ ಪಡೆದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಿದ್ದಾರೆ. ಎಫ್ಎಸ್ಎಲ್ ವರದಿ ಬಳಿಕ ಗಾಂಜಾ ಸೇವನೆ ಬಗ್ಗೆ ಸ್ಪಷ್ಟತೆ ಸಿಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.