ಬೆಂಗಳೂರಿನಲ್ಲಿ ಬಿಎಂಟಿಸಿಗೆ ಬೈಕ್ ಸವಾರ ಬಲಿ: ಹೆಲ್ಮೆಟ್ ಹಾಕಿದ್ರೂ ಉಳಿಯಲಿಲ್ಲ ಜೀವ!
ಬೆಂಗಳೂರಿನ ಟಾಟಾ ಇನ್ಸ್ಸ್ಟಿಟ್ಯೂಟ್ ಮುಂಭಾಗ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಫುಲ್ ಹೆಲ್ಮೆಟ್ ಧರಿಸಿದ್ದರೂ ಸವಾರನ ಪ್ರಾಣ ಉಳಿದಿಲ್ಲ. ಸದ್ಯ ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು, ಸೆಪ್ಟೆಂಬರ್ 30: ಬಿಎಂಟಿಸಿ (BMMTC) ಬಸ್ ಹರಿದು ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಗರದ ಟಾಟಾ ಇನ್ಸ್ಸ್ಟಿಟ್ಯೂಟ್ ಮುಂಭಾಗ ದುರ್ಘಟನೆ ನಡೆದಿದೆ. ಫುಲ್ ಹೆಲ್ಮೆಟ್ ಧರಿಸಿದ್ದರೂ ಜೀವ ಉಳಿದಿಲ್ಲ. ಈಶ್ವರ್(43) ಮೃತ ಬೈಕ್ ಸವಾರ. ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯಕ್ಕೆ ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದು, ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಯಲಹಂಕದಿಂದ ಯಶವಂತಪುರಕ್ಕೆ ಬಿಎಂಟಿಸಿ ಬಸ್ ತೆರಳುತ್ತಿದ್ದು, ಈ ವೇಳೆ ಕಾರ್ಗೆ ಬೈಕ್ ಟಚ್ ಆಗಿ ಕೆಳಗೆಬಿದ್ದ ಈಶ್ವರ್ ತಲೆ ಮೇಲೆ ಬಸ್ನ ಹಿಂದಿನ ಚಕ್ರ ಹರಿದಿದೆ. ಹೀಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆಂಪುಬಣ್ಣದ ಹೆಲ್ಮೆಟ್ ಒಳಗೆ ಬೈಕ್ ಸವಾರ ತಲೆ ಛಿದ್ರವಾಗಿದ್ದು, ಘಟನಾ ಸ್ಥಳದಲ್ಲೇ ಈಶ್ವರ್ ಹೆಲ್ಮೆಟ್, ಶೂ ಬಿದ್ದಿದಿದೆ.
ಮೃತ ವ್ಯಕ್ತಿ ಈಶ್ವರ್ ವಿದ್ಯಾರಣ್ಯಪುರ ನಿವಾಸಿಯಾಗಿದ್ದು, ಚಿನ್ನ, ಬೆಳ್ಳಿಯ ವ್ಯಾಪಾರ ಮಾಡುತ್ತಿದ್ದರು. ಇಬ್ಬರು ಗಂಡು ಮಕ್ಕಳು ಹೆಂಡತಿಯೊಂದಿಗೆ ವಾಸವಾಗಿದ್ದರು. ಒಬ್ಬ ಮಗನಿಗೆ 13 ವರ್ಷ ಮತ್ತೊಬ್ಬನಿಗೆ 10 ವರ್ಷ. ಸದ್ಯ ಈಶ್ವರ್ ಮೃತದೇಹ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಶವಗಾರದಲ್ಲಿದೆ. ಪೋಸ್ಟ್ ಮಾರ್ಟಂ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.
ಲಾಡ್ಜ್ನಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆ
ಚಿಕ್ಕಬಳ್ಳಾಪುರ: ನಗರದ ಕಾವೇರಿ ಲಾಡ್ಜ್ನಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆಯಾಗಿರುವಂತಹ ಘಟನೆ ನಡೆದಿದೆ. ನಿನ್ನೆ ರಾತ್ರಿ ಲಾಡ್ಜ್ಗೆ ಪುರುಷ ಹಾಗೂ ಮಹಿಳೆ ಬಂದಿದ್ದರು. ರಾತ್ರಿ ಜೊತೆಗಿದ್ದ ಪುರುಷ ಬೆಳಿಗ್ಗೆ ನಾಪತ್ತೆಯಾಗಿದ್ದ. ಮಹಿಳೆ ಕೊಂದು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ: ಉದ್ಯಮಿಗಳೇ ಇವರ ಟಾರ್ಗೆಟ್
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.