ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ: ಉದ್ಯಮಿಗಳೇ ಇವರ ಟಾರ್ಗೆಟ್
ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲೂ ಈ ಪ್ರಕರಣದಲ್ಲೂ ಪ್ರಭು ಹಿರೇಮಠ, ರಾಜು ಲೇಂಗಟಿ ಪ್ರಮುಖ ಆರೋಪಿಗಳಲಾಗಿದ್ದಾರೆ. ಆರೋಪಿಗಳು ಉದ್ಯಮಿಯೋರ್ವನನ್ನು ತಮ್ಮ ಖೆಡ್ಡಾಗೆ ಬೀಳಿಸಿಕೊಂಡಿದ್ದಾರೆ.
ಕಲಬುರಗಿ, ಸೆಪ್ಟೆಂಬರ್ 30: ಕಲಬುರಗಿಯಲ್ಲಿ (Kalaburgi) ಮತ್ತೊಂದು ಹನಿಟ್ರ್ಯಾಪ್ (Honeytrap) ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲೂ ಪ್ರಭು ಹಿರೇಮಠ, ರಾಜು ಲೇಂಗಟಿ ಪ್ರಮುಖ ಆರೋಪಿಗಳಲಾಗಿದ್ದಾರೆ. ಆರೋಪಿಗಳು ಹನಿಟ್ರ್ಯಾಪ್ ಮೂಲಕ ಉದ್ಯಮಿ ವಿನೋದಕುಮಾರ ಖೇಣಿ ಅವರಿಂದ 34 ಲಕ್ಷ ರೂ. ದೋಚಿರುವ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರಾಜು ಲೇಂಗಟಿ, ಪ್ರಭು ಹಿರೇಮಠ ಸೇರಿಂದತೆ ಏಳು ಜನರ ವಿರುದ್ಧ ದೂರು ದಾಖಲಾಗಿದೆ.
ಉದ್ಯಮಿ ವಿನೋದಕುಮಾರ ಖೇಣಿ ವ್ಯಾಪಾರಿಯಾಗಿದ್ದು, ಇವರ ಅಂಗಡಿಗೆ ಆರೋಪಿ ಪ್ರಭು ಹಿರೇಮಠ ಖಾಯಂ ಬರುತ್ತಿದ್ದನು. ಆರೋಪಿ ಪ್ರಭು ಹಿರೇಮಠ ಖಾಯಂ ಗ್ರಾಹಕನಾಗಿದ್ದರಿಂದ ಉದ್ಯಮಿ ವಿನೋದಕಮಾರ್ ಆತನ ಜೊತೆ ಗೆಳತನ ಬೆಳಸಿದ್ದರು. ಈ ನಡುವೆ, ಇದೇ ವರ್ಷ ಮೇನಲ್ಲಿ ಮಹಾರಾಷ್ಟ್ರ ಮೂಲದ ಪೂಜಾ ಎಂಬುವ ಯುವತಿಯಿಂದ ವಿನೋದಕುಮಾರ್ ಅವರಿಗೆ ಮೆಸೆಜ್ ಬಂದಿದೆ. ಆದರೆ, ಈ ಮೆಸೆಜ್ಗಳಿಗೆ ವಿನೋದಕುಮಾರ್ ರಿಪ್ಲೈ ಮಾಡಿಲ್ಲ.
ಒಂದು ಮಧ್ಯರಾತ್ರಿ ಪೂಜಾ, ವಿನೋದಕುಮಾರ್ ಅವರಿಗೆ ವಾಟ್ಸ್ಆ್ಯಪ್ ಕಾಲ್ ಮಾಡಿದ್ದಾಳೆ. ಆಗ, ವಿನೋದಕುಮಾರ್ ಕಾಲ್ ರಿಸಿವ್ ಮಾಡಿ ಮಾತನಾಡಿದ್ದಾರೆ. ನಂತರ, ಇಬ್ಬರು ಪರಿಚಯಸ್ತರಾಗಿದ್ದು, ಸಾಮಾನ್ಯ ಕರೆಗಳನ್ನು ಮಾಡಿ ಮಾತನಾಡಲು ಆರಂಭಿಸಿದ್ದಾರೆ.
ಮೇ 05 ರಂದು ವಿನೋದಕುಮಾರ್ ವ್ಯಾಪಾರದ ನಿಮಿತ್ಯ ಹೈದ್ರಾಬಾದಗೆ ಹೋಗಿದ್ದಾರೆ. ಹೈದರಾಬಾದ್ಗೆ ಹೋಗುವ ವಿಚಾರವನ್ನು ಹಿಂದಿನ ದಿನವೇ ಪೂಜಾಗೆ ವಿನೋದಕುಮಾರ್ ತಿಳಿಸಿದ್ದಾರೆ. ಇದನ್ನು ತಿಳಿದ ಪೂಜಾ ಕೂಡ ಹೈದರಾಬಾದ್ಗೆ ಹೋಗಿದ್ದಾಳೆ. ಅಲ್ಲಿ ವಿನೋದಕುಮಾರ್ ಅವರಿಗೆ ಪೂಜಾ ಕರೆ ಮಾಡಿ “ನಾನು ಕೆಲಸದ ನಿಮಿತ್ತ ಹೈದ್ರಾಬಾದ್ಗೆ ಬಂದಿದ್ದೇ, ರಾಣಿಗುಂಜನಲ್ಲಿ ಇದ್ದೇನೆ. ಭೇಟಿಯಾಗುತ್ತೇನೆ” ಎಂದು ಹೇಳಿದ್ದಾಳೆ.
ಇದನ್ನೂ ಓದಿ: ಕಲಬುರಗಿ ಹನಿಟ್ರ್ಯಾಪ್ ಪ್ರಕರಣ; ದಲಿತ ಸೇನೆ ಅಧ್ಯಕ್ಷ ಸೇರಿ 6 ಜನರ ಬಂಧನ
ವಿನೋದಕುಮಾರ್ ರಾಣಿಗುಂಜನಲ್ಲಿ ಪೂಜಾಳನ್ನು ಭೇಟಿಯಾಗಿದ್ದಾರೆ. ಬಳಿಕ ಇಬ್ಬರು ಒಟ್ಟಿಗೆ ರಾಣಿಗಂಜನಿಂದ ಹೈದ್ರಾಬಾದನಲ್ಲಿನ ಟೌನ ಹೌಸ್ ಲಾಡ್ಲಿಗೆ ಹೋಗಿದ್ದಾರೆ. ಈ ವೇಳೆ ವಿನೋದಕುಮಾರ್ ನನ್ನ ನಂಬರ್ ನಿನಗೆ ಹೇಗೆ ಸಿಕ್ತು ಎಂದು ಪೂಜಾಗೆ ಕೇಳಿದ್ದಾರೆ. ಆಗ, ಪೂಜಾ ಪ್ರಭು ಹಿರೇಮಠ ನನ್ನ ಸಂಬಂಧಿ, ಅವರು ನಿಮ್ಮ ನಂಬರ್ ಕೊಟ್ಟರು ಎಂದು ಹೇಳಿದ್ದಾಳೆ. ಬಳಿಕ, ಪೂಜಾ ರೂಮಿನಲ್ಲಿ ಮತ್ತು ಕಾರಿಡಾರನಲ್ಲಿ ವಿನೋದಕುಮಾರ್ ಅವರನ್ನು ತಬ್ಬಿಕೊಂಡು, ಮುತ್ತು ಕೊಟ್ಟು, ತನ್ನ ಮೊಬೈಲನಲ್ಲಿ ಫೋಟೋ ತೆಗೆದುಕೊಂಡಿದ್ದಾಳೆ.
ಪೂಜಾ ಮತ್ತು ವಿನೋದಕುಮಾರ್ ಮತ್ತೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಓರಿಯನ್ ಮಾಲ್ ಎದರುಗಡೆ ಕಟ್ಟಿ ಮೇಲೆ ಮಾತಾಡುತ್ತಾ ಕುಳಿತಾಗ, ಅಲ್ಲಿಯೂ ಕೂಡ ಪೂಜಾ ವಿನೋದಕುಮಾರ್ ಪಕ್ಕದಲ್ಲಿ ಕುಳಿತುಕೊಂಡು ತನ್ನ ಮೊಬೈಲನಲ್ಲಿ ಫೋಟೊಗಳನ್ನು ತೆಗೆದುಕೊಂಡಿದ್ದಾಳೆ. ನಂತರ ಈ ಫೋಟೊಗಳನ್ನು ಪೂಜಾ ಆರೋಪಿಗಳಾದ ಪ್ರಭು ಹಿರೇಮಠ ಮತ್ತು ರಾಜು ಲೇಂಗಟಿಗೆ ಕಳುಹಿಸಿದ್ದಾಳೆ.
ಬಳಿಕ, ವಿನೋದಕುಮಾರ್ ಮರಳಿ ಊರಿಗೆ ಬಂದಾಗ ಆರೋಪಿ ಪ್ರಭು ಹಿರೇಮಠ ಈ ಫೋಟೋಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿ, ಬೆದರಿಕೆ ಹಾಕಿ ನಗದು, ಚೆಕ್ ಮತ್ತು ಫೋನ್ ಪೇ ಮೂಲಕ 34 ಲಕ್ಷ ರೂ. ದೂಚಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ. ಉದ್ಯಮಿ ವಿನೋದಕುಮಾರ್ ಖೇಣಿ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ