AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಉತ್ಸದ ನಡುವೆ ಮೈಸೂರು ಹೊರವಲಯದಲ್ಲಿ ರೇವ್​ ಪಾರ್ಟಿ?

ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವದ ತಯಾರಿ ಭರ್ಜರಿಯಾಗಿ ನಡೆದಿದೆ. ಮೈಸೂರು ನಗರ ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿದೆ. ಈ ನಡುವೆ ಮೈಸೂರು ಹೊರವಲಯದ ಕೆಆರ್​ಎಸ್​ ಬ್ಯಾಕ್​ ವಾಟರ್​ನಲ್ಲಿ ರೇವಾ ಪಾರ್ಟಿ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ದಸರಾ ಉತ್ಸದ ನಡುವೆ ಮೈಸೂರು ಹೊರವಲಯದಲ್ಲಿ ರೇವ್​ ಪಾರ್ಟಿ?
ತಡರಾತ್ರಿವರೆಗೂ ಪಾರ್ಟಿ ಮಾಡುತ್ತಿರುವುದು
Follow us
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on:Sep 29, 2024 | 11:07 AM

ಮೈಸೂರು, ಸೆಪ್ಟೆಂಬರ್​ 29: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ (Mysore Dasara) ತಯಾರಿ ಜೋರಾಗಿ ನಡೆದಿದೆ. ಅಕ್ಟೋಬರ್​ 3 ರಂದು ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಆದರೆ, ಇದರ ನಡುವೆ ಮೈಸೂರು ಹೊರವಲಯದಲ್ಲಿ ರೇವ್​ ಪಾರ್ಟಿ (Reva Party) ನಡೆದಿದೆಯಾ ಅನುಮಾನ ವ್ಯಕ್ತವಾಗಿದೆ. ಕೆಆರ್​ಎಸ್ ಬ್ಯಾಕ್ ವಾಟರ್​ನಲ್ಲಿ ತಡರಾತ್ರಿವರೆಗೂ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಮೈಸೂರು ಪೊಲೀಸರಿಗೆ ಮಾಹಿತಿ ದೊರೆತಿದೆ.

ಕೂಡಲೆ ಕಾರ್ಯ ಪ್ರವೃತ್ತರಾದ ಹೆಚ್ಚುವರಿ ಎಸ್​ಪಿ ನಾಗೇಶ್ ಹಾಗೂ ಡಿವೈಎಸ್​ಪಿ ಕರೀಂ ತಮ್ಮ ತಂಡದ ಸಮೇತ ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕೆಲವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಾರ್ಟಿಯಲ್ಲಿದ್ದ 50ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದೆ.

ಪಾರ್ಟಿಯಲ್ಲಿ 150ಕ್ಕೂ ಹೆಚ್ಚು ಯುವಕ, ಯುವತಿಯರು ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ. ಅಲ್ಲದೇ, ಪಾರ್ಟಿಗೆ ಇಸ್ರೇಲ್​ನಿಂದ ರ್ಯಾಪರ್​ ಗ್ರೇನ್ ರಿಪ್ಪರ್ ಬಂದಿದ್ದನು ಎನ್ನಲಾಗಿದೆ. ಆಯೋಜಕರು ಪಾರ್ಟಿಗೆ ಒಬ್ಬರಿಗೆ 2 ಸಾವಿರ ರೂ. ನಿಗದಿ ಮಾಡಿದ್ದರು.

ಇದನ್ನೂ ಓದಿ: ರೇವ್​​ಪಾರ್ಟಿ ಮೇಲೆ ಸಿಸಿಬಿ ದಾಳಿ, ಐವರ ಬಂಧನ

ಪ್ರಕರಣ ಸಂಬಂಧ ಎಸ್​ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಮದ್ಯ ಮತ್ತು ಸಿಗರೇಟ್ ಸ್ಥಳದಲ್ಲಿ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತೇವೆ. ಎಫ್ಎಸ್​ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ಎರಡೂ ವರದಿ ಬಂದ ನಂತರ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ರೇವ್​ ಪಾರ್ಟಿ

ಇತ್ತೀಚಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಸಿಂಗೇನಾ ಅಗ್ರಹಾರದ ಫಾರ್ಮ್​ ಹೌಸ್​​ವೊಂದರಲ್ಲಿ ರೇವ್​ ಪಾರ್ಟಿ ನಡೆದಿತ್ತು. ಪಾರ್ಟಿ ನಡೆಯುತ್ತಿದ್ದ ವೇಳೆಯೇ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್​, ಮಾದಕ ವಸ್ತುಗಳು ಪತ್ತೆಯಾಗಿದ್ದವು. ಈ ಪಾರ್ಟಿಯಲ್ಲಿ ತೆಲಗು ನಟಿಯರು, ಮಾಡಲ್​ಗಳು ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ತೆಲಗು ನಟಿ ಹೇಮಾ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:02 am, Sun, 29 September 24

‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ