Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಷ್ಟ ಎಷ್ಟೇ ಬಂದರೂ ಕೊನೇ ಉಸಿರಿರುವವರೆಗೆ ಹೋರಾಡುವುದು ನನ್ನ ಜಾಯಮಾನ: ಹೆಚ್​ಡಿ ದೇವೇಗೌಡ

ಕಷ್ಟ ಎಷ್ಟೇ ಬಂದರೂ ಕೊನೇ ಉಸಿರಿರುವವರೆಗೆ ಹೋರಾಡುವುದು ನನ್ನ ಜಾಯಮಾನ: ಹೆಚ್​ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 05, 2024 | 11:58 AM

ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಮಾಡಿದ ಅಂಬ್ಯುಲೆನ್ಸ್ ಪ್ರಚಾರ ಕಾಮೆಂಟ್​ಗೆ ಉತ್ತರ ನೀಡಿದ ದೇವೇಗೌಡ, ತನಗೆ ಟಿವಿ9 ಪ್ರಸಾರ ಮಾಡುವ ಸುದ್ದಿಯಿಂದ ಸಿಗುವ ಪ್ರಚಾರವೇ ಸಾಕು, ಇದು ಅತ್ಯಂತ ಪ್ರಬಲವಾದ ಸುದ್ದಿಸಂಸ್ಥೆಯಾಗಿದೆ, ಚನ್ನಪಟ್ಟಣದಲ್ಲಿ ನಿಖಿಲ್ ಗೆಲ್ಲಲಿ ಅನ್ನೋದಕ್ಕಿಂತ ಮುಖ್ಯವಾಗಿ ಪಕ್ಷ ಗೆಲ್ಲಲಿ, ಪಕ್ಷ ಪುನಶ್ಚೇತನಗೊಳ್ಳಬೇಕಿದೆ ಎಂದರು.

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಇಂದು ನಿಖಿಲ್ ಪರ ಪ್ರಚಾರ ಮಾಡಲು ಚನ್ನಪಟ್ಟಣ ತೆರಳಿದರು. ಅನಾರೋಗ್ಯದ ಬಗ್ಗೆ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಾನು ಒಂದು ವರ್ಷದವರೆಗೆ ಆಸ್ಪತ್ರೆಯೊಂದರಲ್ಲಿದ್ದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಿಕ್ಕಬಳ್ಳಾಪುರ ಮತ್ತು ಮೈಸೂರಿಗೆ ಬರಬೇಕೆಂದು ಹೇಳಿದಾಗ ಬೇರೆ ಯೋಚನೆ ಮಾಡದೆ ಹೋದೆ ಎಂದರು. ಎಷ್ಟೇ ಕಷ್ಟ ಎದುರಾದರೂ ಕೊನೇ ಉಸಿರಿರುವವರೆಗೆ ಹೋರಾಡುವುದು ತನ್ನ ಜಾಯಮಾನ ಮತ್ತು ಸ್ವಭಾವ ಎಂದು ಮಾಜಿ ಪ್ರಧಾನಿ ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹಾಸನಾಂಬೆಯ ಮುಂದೆ ಹಚ್ಚಿಟ್ಟ ದೀಪ 365 ದಿನಗಳ ಕಾಲ ಅರದೆ ಉರಿಯುವುದು ಪವಾಡವೇ ಸರಿ: ಜಿಟಿ ದೇವೇಗೌಡ