Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆಯ ಮುಂದೆ ಹಚ್ಚಿಟ್ಟ ದೀಪ 365 ದಿನಗಳ ಕಾಲ ಅರದೆ ಉರಿಯುವುದು ಪವಾಡವೇ ಸರಿ: ಜಿಟಿ ದೇವೇಗೌಡ

ಹಾಸನಾಂಬೆಯ ಮುಂದೆ ಹಚ್ಚಿಟ್ಟ ದೀಪ 365 ದಿನಗಳ ಕಾಲ ಅರದೆ ಉರಿಯುವುದು ಪವಾಡವೇ ಸರಿ: ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 29, 2024 | 1:34 PM

ಚನ್ನಪಟ್ಟಣ ಉಪ ಚುನಾವಣೆಯ ಬಗ್ಗೆ ದೇವೇಗೌಡ ಅನ್ಯಮನಸ್ಕತೆಯಿಂದ ಮಾತಾಡಿದ್ದು ಆಶ್ಚರ್ಯ ಮೂಡಿಸುತ್ತದೆ, ಅಲ್ಲಿಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿಲ್ಲ, ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಅಂತ ಗೊತ್ತಿಲ್ಲ, ಚುನಾವಣಾ ಪ್ರಚಾರಕ್ಕೆ ಹೋಗುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳುತ್ತಾರೆ.

ಹಾಸನ: ಹಾಸನಂಬೆಯ ದರ್ಶನವನ್ನು ತಮ್ಮ ಬದುಕಿನಲ್ಲಿ ಎರಡನೇ ಸಲ ಮಾಡಿಕೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ದೇಗುಲದ ಬಾಗಿಲು ತೆರೆಯುವ ದೃಶ್ಯವನ್ನು ಸಹ ತಾನು ಟಿವಿಯಲ್ಲಿ ನೋಡಿ ಕಣ್ತುಂಬಿಕೊಂಡೆ ಎಂದರು. ದೇವಿಯ ಮುಂದೆ ಹಚ್ಚಿದ ದೀಪ 365ದಿನಗಳ ಕಾಲ ಆರದೆ ಉರಿಯುವುದು ಮತ್ತು ದೇವಿಗೆ ಹಾಕಿದ ಹಾರ ಬಾಡದಿರುವುದು ಪವಾಡವೇ ಸರಿ, ಮಲೆನಾಡಲ್ಲಿ ನೆಲೆಸಿರುವ ಈ ತಾಯಿ ನಾಡಿನ ಎಲ್ಲ ಜನತೆಗೆ ಸುಖ, ಶಾಂತಿ, ಸಮೃಧ್ಧಿ ಮತ್ತು ಅರೋಗ್ಯವನ್ನು ದಯಪಾಲಿಸಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಾಸನಾಂಬೆ ಸನ್ನಿಧಿಯಲ್ಲಿ ಆಕರ್ಷಕ ಬೆಳಕಿನ ಚಿತ್ತಾರ: ಕಣ್ತುಂಬಿಕೊಂಡ ಭಕ್ತಸಾಗರ