ಹಾಸನಾಂಬೆ ಸನ್ನಿಧಿಯಲ್ಲಿ ಆಕರ್ಷಕ ಬೆಳಕಿನ ಚಿತ್ತಾರ: ಕಣ್ತುಂಬಿಕೊಂಡ ಭಕ್ತಸಾಗರ
ಈ ಬಾರಿಯ ಹಾಸನಾಂಬೆ ದರ್ಶನ ಸಂಭ್ರಮ ಸಡಗರ ಕೇವಲ ಹಾಸನಕ್ಕೆ ಮಾತ್ರವಲ್ಲ. ನಾಡಿನ ಲಕ್ಷ ಲಕ್ಷ ಜನರು ಹಾಸನಾಂಬೆಯನ್ನ ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಹಾಸನದತ್ತ ಜನ ಸಾಗರವೇ ಹರಿದು ಬರುತ್ತಿದ್ದು ಅದ್ದೂರಿ ಆಚರಣೆಗೆ ಮನಸೋಲುತ್ತಿದ್ದಾರೆ. ಅದ್ರಲ್ಲೂ ಹಾಸನ ನಗರದ ತುಂಬೆಲ್ಲಾ ಮೈಸೂರು ದಸರಾ ಮಾದರಿಯಲ್ಲಿ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ.
ಹಾಸನ, ಅಕ್ಟೋಬರ್ 29: ಜಗಮಗಿಸುತ್ತಿರುವ ಬಣ್ಣ ಬಣ್ಣದ ಲೈಟಿಂಗ್ ಅಲಂಕಾರ ಕಣ್ತುಂಬಿಕೊಳ್ಳುತ್ತಾ ಹಾಸನಾಂಬೆಯ ಆಶೀರ್ವಾದ ಪಡೆದು ಧನ್ಯರಾಗುತ್ತಿರುವ ಭಕ್ತರು, ಈ ಬಾರಿಯ ಉತ್ಸವವನ್ನು ಅವಿಸ್ಮರಣೀಯಗೊಳಿಸುತ್ತಿದ್ದಾರೆ. ಅದರಲ್ಲೂ ಲೈಟಿಂಗ್ ವೀಕ್ಷಣೆಗೆ ಬಂದಿರುವ ಅಂಬಾರಿ ಬಸ್ ಏರಿ ಭಕ್ತರು ಸಂಭ್ರಮಿಸಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಅಂಬಾರಿ ಸವಾರಿ ಮಾಡಿದ್ದಾರೆ.
ಈ ಬಾರಿಯ ಹಾಸನಾಂಬೆ ಉತ್ಸವ ಹಲವು ಕಾರಣಗಳಿಗೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಬರುತ್ತಿರುವ ಭಕ್ತರ ದಂಡು, ಕೋಟಿ ಕೋಟಿ ಲೆಕ್ಕದಲ್ಲಿ ಖಜಾನೆ ತುಂಬುತ್ತಿರುವ ಆದಾಯದ ಜೊತೆಗೆ ಸಾಗರೋಪಾದಿಯಲ್ಲಿ ಹಾಸನದತ್ತ ಬರುತ್ತಿರುವ ಭಕ್ತರಿಗೆ ಮುದ ನೀಡುತ್ತಿದೆ ಹಾಸನ ನಗರದ ತುಂಬೆಲ್ಲಾ ಮಾಡಲಾಗಿರುವ ಜಗಮಗಿಸುವ ದೀಪಾಲಂಕಾರ. ಹಗಲಿನಲ್ಲಿ ಹಾಸನಾಂಬೆ ಕಣ್ತುಂಬಿಕೊಳ್ಳುವ ಭಕ್ತರು ರಾತ್ರಿಯಾಗುತ್ತಲೇ ಹೊಸ ಜಗತ್ತೇ ತೆರೆದುಕೊಂಡಂತೆ ಭಾಸವಾಗುವ ಹಾಸನದಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ನಗರದ ಬಿಎಂ ರಸ್ತೆ ಹಳೆ ಬಸ್ ನಿಲ್ದಾಣ ರಸ್ತೆ, ಸಂತೆಪೇಟೆ ರಸ್ತೆ, ಸಾಲಗಾಮೆ ರಸ್ತೆ, ಕಾಲೇಜು ರಸ್ತೆ ಹೀಗೆ ಹತ್ತಾರು ಕಿಲೋಮೀಟರ್ ಮಾರ್ಗದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ