ಪಕ್ಷದಲ್ಲಿ ಈಶ್ವರಪ್ಪ ಅವರಿಗಿಂತಲೂ ಸೀನಿಯರ್​ ನಾನು; ಸಚಿವ ಸ್ಥಾನ ಸಿಗದಿದ್ದರೆ ಆಮೇಲೆ ಯೋಚಿಸೋಣ

ಪಕ್ಷ ಕಟ್ಟುತ್ತಲ್ಲೇ ಸಾರ್ವಜನಿಕ ಜೀವನದಲ್ಲಿ ಬದುಕು ಕಟ್ಟಿಕೊಂಡವನು ನಾನು. ಪಕ್ಷಕ್ಕೆ ಸೇರಿಕೊಂಡವರ ವಿಚಾರದಲ್ಲಿ ಈಶ್ವರಪ್ಪನವರಿಗಿಂತಲೂ ನಾನು ಹಿರಿಯ. ಮೊದಲಾದರೆ ಯಡಿಯೂರಪ್ಪ, ಈಶ್ವರಪ್ಪ ಹಾಗೂ ಇನ್ನಿತರರು ಸಚಿವ ಸಂಪುಟದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ನನ್ನನ್ನು ಬಿಡಲಾಗುತ್ತಿತ್ತು: ಆರಗ ಜ್ಞಾನೇಂದ್ರ

ಸಚಿವ ಸಂಪುಟ ವಿಸ್ತರಣೆಗೆ ಕೆಲ ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಹಲವರಿಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪ್ರಮಾಣ ವಚನಕ್ಕೆ ಸಿದ್ಧರಾಗುವಂತೆ ಸೂಚನೆ ಬಂದಿದೆ. ಆದರೆ, ಇನ್ನೂ ಕೆಲವರಿಗೆ ಕರೆ ಬಂದಿಲ್ಲವಾದ್ದರಿಂದ ಅವರು ಕೊನೇ ಕ್ಷಣದಲ್ಲಾದರೂ ಕರೆ ಬರಬಹುದೆಂದು ಕಾಯುತ್ತಿದ್ದಾರೆ. ಆ ಪೈಕಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆರಗ ಜ್ಞಾನೇಂದ್ರ ಕೂಡಾ ಸರತಿಯಲ್ಲಿದ್ದು, ತಾನು ಸಚಿವನಾಗುವುದು ನೂರಕ್ಕೆ ನೂರರಷ್ಟು ಖಚಿತ. ಇನ್ನೂ ಕರೆ ಬಂದಿಲ್ಲವಷ್ಟೇ. ನನ್ನನ್ನು ಪಕ್ಷದ ಹಿರಿಯರು ಪರಿಗಣಿಸುತ್ತಾರೆ ಎನ್ನುವ ಭರವಸೆ ಇದೆ ಎಂದು ಟಿವಿ9 ಜತೆ ಮನಬಿಚ್ಚಿ ಮಾತನಾಡಿದ್ದಾರೆ.

ಪಕ್ಷ ಕಟ್ಟುತ್ತಲ್ಲೇ ಸಾರ್ವಜನಿಕ ಜೀವನದಲ್ಲಿ ಬದುಕು ಕಟ್ಟಿಕೊಂಡವನು ನಾನು. ಪಕ್ಷಕ್ಕೆ ಸೇರಿಕೊಂಡವರ ವಿಚಾರದಲ್ಲಿ ಈಶ್ವರಪ್ಪನವರಿಗಿಂತಲೂ ನಾನು ಹಿರಿಯ. ಮೊದಲಾದರೆ ಯಡಿಯೂರಪ್ಪ, ಈಶ್ವರಪ್ಪ ಹಾಗೂ ಇನ್ನಿತರರು ಸಚಿವ ಸಂಪುಟದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ನನ್ನನ್ನು ಬಿಡಲಾಗುತ್ತಿತ್ತು. ನನಗೂ ಕೂಡಾ ನಮ್ಮ ಪಕ್ಷ ಅಧಿಕಾರದಲ್ಲಿರಬೇಕು ಎಂಬ ಅಪೇಕ್ಷೆ ಇರುತ್ತಿತ್ತಾದ್ದರಿಂದ ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಆದರೆ, ಈಗ ಸಚಿವ ಸಂಪುಟದಲ್ಲಿ ಯಡಿಯೂರಪ್ಪನವರೂ ಇಲ್ಲ. ಹೀಗಾಗಿ ನಾನು ನನ್ನ ಅಪೇಕ್ಷೆಯನ್ನು ವರಿಷ್ಠರಿಗೆ ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇನೆ. ನನಗೆ ಸಚಿವ ಸ್ಥಾನ ಖಚಿತ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. ಅದರ ಸಂಪೂರ್ಣ ವಿವರ ವಿಡಿಯೋದಲ್ಲಿದೆ.

Click on your DTH Provider to Add TV9 Kannada