Harish Roy: ಕ್ಯಾನ್ಸರ್ ಬಗ್ಗೆ ಯಾರಿಗೂ ಗೊತ್ತಾಗದಂತೆ ಹರೀಶ್ ರಾಯ್ ಮುಚ್ಚಿಟ್ಟಿದ್ದೇಕೆ? ವಿವರ ನೀಡಿದ ‘ಕೆಜಿಎಫ್’ ನಟ
Harish Roy Cancer: ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಚಿತ್ರರಂಗದವರಿಗೇ ತಿಳಿದಿರಲಿಲ್ಲ. ಈ ವಿಷಯದಲ್ಲಿ ಅವರು ಗುಟ್ಟು ಮಾಡಿದ್ದಕ್ಕೂ ಒಂದು ಕಾರಣ ಇದೆ.
ನಟ ಹರೀಶ್ ರಾಯ್ (Harish Roy) ಅವರು ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಚಿತ್ರರಂಗದವರಿಗೆ ಈ ವಿಷಯ ಗೊತ್ತಾಗಬಾರದು ಎಂದು ಅವರು ಗೌಪ್ಯತೆ ಕಾಯ್ದುಕೊಂಡಿದ್ದರು. ಈಗ ಪರಿಸ್ಥಿತಿ ಕೈಮೀರಿ ಹೋಗಿದ್ದು, ಮಾಧ್ಯಮಗಳ ಎದುರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕ್ಯಾನ್ಸರ್ (Cancer) ಇರುವ ವಿಚಾರವನ್ನು ಅವರು ಮುಚ್ಚಿಟ್ಟಿದ್ದು ಯಾಕೆ? ಸಿನಿಮಾ ಆಫರ್ಗಳು ತಪ್ಪಿಹೋಗಬಹುದು ಎಂಬ ಭಯ. ಹೌದು, ಅನಾರೋಗ್ಯ ಇದೆ ಎಂಬುದು ಗೊತ್ತಾದರೆ ಬರುವ ಆಫರ್ಗಳು ನಿಂತು ಹೋಗುತ್ತವೆ ಎಂಬ ಭಯದಲ್ಲಿ ಅವರು ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಈ ಬಗ್ಗೆ ಸ್ವತಃ ಹರೀಶ್ ರಾಯ್ ಅವರು ವಿವರ ನೀಡಿದ್ದಾರೆ.