ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು ರೋಡ್ ಮ್ಯಾಪ್: ನ್ಯೂಸ್9 ಕಾರ್ಯಕ್ಕೆ ಮೋದಿ ಶ್ಲಾಘನೆ
ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್ನ ಎರಡನೇ ದಿನವಾದ ಇಂದು(ನವೆಂಬರ್ 22) ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ, ನ್ಯೂಸ್9 ಗ್ಲೋಬಲ್ ಸಮಿಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನ್ಯೂಸ್9 ಗ್ಲೋಬಲ್ ಸಮಿಟ್ ಮೂಲಕ ಜರ್ಮನಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ನವದೆಹಲಿ, (ನವೆಂಬರ್ 22): ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ಹಲವು ವಿಚಾರಗಳನ್ನು ಹಂಚಿಕೊಂಡರು. ನ್ಯೂಸ್9 ಗ್ಲೋಬಲ್ ಸಮಿಟ್ಗೆ ವ್ಯಕ್ತಪಡಿಸಿದರು. ಅಲ್ಲದೇ ಈ ಸಮಿಟ್ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ಜರ್ಮನ್ ಕಂಪನಿಗಳಿಗೆ ಕರೆ ನೀಡಿದರು.
ನ್ಯೂಸ್9 ಗ್ಲೋಬಲ್ ಸಮಿಟ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿವಿ9 ನೆಟ್ವರ್ಕ್ ಜರ್ಮನಿಯಲ್ಲಿ ಸಮಿಟ್ ಆಯೋಜಿಸಿದ್ದು, ಸಮಿಟ್ನಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ. ಭಾರತ-ಜರ್ಮನಿ ಸಂಬಂಧದ ಹೊಸ ಅಧ್ಯಾಯ. ಭಾರತ & ಜರ್ಮನಿಯ ಸಂಬಂಧ 25 ವರ್ಷ ಪೂರೈಸಿದೆ. ಭಾರತದಲ್ಲಿ 1800 ಜರ್ಮನ್ ಕಂಪನಿಗಳಿವೆ. ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು ರೋಡ್ ಮ್ಯಾಪ್. ನ್ಯೂಸ್9 ಗ್ಲೋಬಲ್ ಸಮಿಟ್ ಒಂದು ಇತಿಹಾಸ ಸೃಷ್ಟಿಸಿದೆ. ವಾಹನಗಳ ತಯಾರಿಕೆಯಲ್ಲಿ ವಿಶ್ವದಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಜರ್ಮನಿಯಲ್ಲಿ ಭಾರತದ 50 ಸಾವಿರ ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದಾರೆ. ಜಗತ್ತಿನ ಪ್ರತಿ ದೇಶವೂ ಭಾರತದ ಜತೆ ಕೈಜೋಡಿಲು ಒಲವು ಹೊಂದಿವೆ ಎಂದು ಭಾರತದಲ್ಲಿ ಹೂಡಿಕೆ ಮಾಡಲು ಜರ್ಮನ್ ಕಂಪನಿಗಳಿಗೆ ಕರೆ ನೀಡಿದರು.