ಅಪಾಯಕಾರಿ ರೈಡಿಂಗ್ ಮತ್ತು ಹಿಟ್ ಅಂಡ್ ರನ್ನ ಅತ್ಯುತ್ತಮ ಉದಾಹರಣೆ ಈ ವಿಡಿಯೋದಲ್ಲಿ ನೋಡಬಹುದು!
ಶರವೇಗದಲ್ಲಿ ಮುಂದಕ್ಕೆ ಸಾಗಿ ಸ್ಕೂಟರೊಂದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಅದೇ ವೇಗದಲ್ಲಿ ಪರಾರಿಯಾಗುತ್ತಾನೆ. ಸ್ಕೂಟರ್ ಸವಾರ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಕೆಲ ಯುವಕರಿಗೆ ಕೈಗೆ ಬೈಕ್ ಅದರಲ್ಲೂ ವಿಶೇಷವಾಗಿ ಸೂಪರ್ ಬೈಕ್ (super bike) ಸಿಕ್ಕರೆ ಸಾಕು ತಮ್ಮನ್ನು ತಾವು ಸೂಪರ್ ಹಿರೋ ಅಂದುಕೊಂಡು ಬಿಡುತ್ತಾರೆ. ಇಲ್ಲೊಬ್ಬ ಯುವಕ ಯಲಹಂಕ (Yelahanka) ವೀರಸಾಗರ ಬಳಿ ಹೇಗೆ ಬೈಕ್ ಓಡಿಸುತ್ತಿದ್ದಾನೆ ಅಂತ ಗಮನಿಸಿ. ಅಸಲಿಗೆ ವಿಡಿಯೋದ ಮೊದಲ ಫ್ರೇಮಿನಲ್ಲಿ ತನ್ನ ಬೈಕ್ ಕಾರಿಗೆ ಗುದ್ದುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಳ್ಳುತ್ತಾನೆ. ಗುದ್ದಿದ್ದರೆ ನಿಸ್ಸಂದೇಹವಾಗಿ ಅವನ ಪ್ರಾಣಕ್ಕೆ ಸಂಚಕಾರವಿತ್ತು. ಆದರಿಂದ ಅವನು ಪಾಠ ಕಲಿಯುವುದಿಲ್ಲ. ಶರವೇಗದಲ್ಲಿ ಮುಂದಕ್ಕೆ ಸಾಗಿ ಸ್ಕೂಟರೊಂದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಅದೇ ವೇಗದಲ್ಲಿ ಪರಾರಿಯಾಗುತ್ತಾನೆ. ಸ್ಕೂಟರ್ ಸವಾರ ಶ್ರವಣ್ (Shravan) ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.