ಚಾಮರಾಜನಗರದಲ್ಲಿ ಸಫಾರಿಗೆ ಹೋದವರಿಗೆ ಮೂರು ಕರಡಿಗಳ ದರ್ಶನ, ಪ್ರವಾಸಿಗರು ಫುಲ್ ಖುಷ್; ವಿಡಿಯೋ ನೋಡಿ

| Updated By: Digi Tech Desk

Updated on: Aug 10, 2021 | 10:37 AM

ವೀಕ್ ಎಂಡ್ ಮರುದಿನ ಸಫಾರಿಗೆ ಹೋದವರಿಗೆ ಕರಡಿ ದರ್ಶನ ನೀಡಿದ್ದು, ಪ್ರವಾಸಿಗರಿಗೆ ಸಕತ್ ಖುಷಿಯಾಗಿದೆ. ಸಫಾರಿ ವಾಹನ ಹೋಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಎರಡು ಮರಿಗಳು ಕಾಡು ಸೇರಿವೆ.

ಚಾಮರಾಜನಗರ: ಸಫಾರಿಗೆ ಹೋದವರಿಗೆ ಮೂರು ಕರಡಿಗಳ ದರ್ಶನವಾಗಿದೆ. ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದಲ್ಲಿ ತಾಯಿ ಕರಡಿ ತನ್ನ ಎರಡು ಮರಿಗಳೊಂದಿಗೆ ಪ್ರವಾಸಿಗರಿಗೆ ಸೆರೆ ಸಿಕ್ಕಿದೆ. ವೀಕ್ ಎಂಡ್ ಮರುದಿನ ಸಫಾರಿಗೆ ಹೋದವರಿಗೆ ಕರಡಿ ದರ್ಶನ ನೀಡಿದ್ದು, ಪ್ರವಾಸಿಗರಿಗೆ ಸಕತ್ ಖುಷಿಯಾಗಿದೆ. ಸಫಾರಿ ವಾಹನ ಹೋಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಎರಡು ಮರಿಗಳು ಕಾಡು ಸೇರಿವೆ. ಮರಿಗಳು ಕಾಡು ಸೇರುತ್ತಿದ್ದಂತೆ ತಾಯಿ ಕರಡಿ ಪ್ರವಾಸಿಗರನ್ನ ಎರಡೆರಡು ಬಾರಿ ದಿಟ್ಟಿಸಿ ನೋಡಿದೆ. ಬಳಿಕ ತಾನು ಕಾಡು ಸೇರಿ ಪ್ರವಾಸಿಗರು ಹೋದರೆ ಅಂತ ಇಣುಕಿ ನೋಡಿದೆ. ಈ ದೃಶ್ಯ ಪ್ರವಾಸಿಗರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ

ಜೆಪಿ ನಗರದಲ್ಲಿ ಅಪಾರ ಪ್ರಮಾಣದ ಆನೆ ದಂತ, ವನ್ಯ ಜೀವಿಗಳ ಚರ್ಮ, ಮೂಳೆ ವಶ ಆರೋಪಿ ಬಂಧನ- ಚಿತ್ರಗಳಿವೆ

ಶ್ರೀನಗರದ ಹರಿ ಪರ್ಬತ್​​ನಲ್ಲಿ 100 ಅಡಿ ಎತ್ತರ ತ್ರಿವರ್ಣ ಧ್ವಜ ಅನಾವರಣಗೊಳಿಸಿದ ಜಮ್ಮು-ಕಾಶ್ಮೀರ ಸರ್ಕಾರ..

(Those who went on safari saw three bears at Chamarajanagar)

Published on: Aug 10, 2021 10:27 AM