ಶ್ರೀನಗರದ ಹರಿ ಪರ್ಬತ್ನಲ್ಲಿ ಇಂದು 100 ಅಡಿ ಎತ್ತರ ತ್ರಿವರ್ಣ ಧ್ವಜ ಅನಾವರಣ..
ಇನ್ನೇನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಇದ್ದು, ಅದರ ಹಿನ್ನೆಲೆಯಲ್ಲಿ ಇಂದು ಶ್ರೀನಗರದ ಐತಿಹಾಸಿಕ ಕೋಟೆ ಹರಿಪರ್ಬತ್ನಲ್ಲಿ ಜಮ್ಮು-ಕಾಶ್ಮೀರ ಸರ್ಕಾರ 100 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸಿದೆ.
ಶ್ರೀನಗರದ ಐತಿಹಾಸಿಕ ಕೋಟೆ ಹರಿ ಪರ್ಬತ್ನಲ್ಲಿ ಇಂದು ಜಮ್ಮು-ಕಾಶ್ಮೀರ ಸರ್ಕಾರ 100 ಅಡಿ ಎತ್ತರದ ತ್ರಿವರ್ಣ ಧ್ವಜ (ರಾಷ್ಟ್ರಧ್ವಜ)ವನ್ನು ಅನಾವರಣಗೊಳಿಸಿದೆ. ಕಾಶ್ಮೀರದಲ್ಲೇ ಅತ್ಯಂತ ಎತ್ತರದ ರಾಷ್ಟ್ರಧ್ವಜ ಇದಾಗಿದ್ದು, ಇದನ್ನು ಹಾರಿಸುವ ಸಂಬಂಧ ಫೆಬ್ರವರಿ 7ರಂದು ಅಡಿಗಲ್ಲು ಸ್ಥಾಪನೆಯಾಗಿತ್ತು. ಈ 100 ಅಡಿ ಎತ್ತರದ ರಾಷ್ಟ್ರಧ್ವಜವನ್ನು, ಭಾರತೀಯ ಸೇನೆ, ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಸ್ಥಾಪಿಸಿದೆ. ಕಾಶ್ಮೀರದ ಈ ಐತಿಹಾಸಿಕ ಕೋಟೆ ಮೇಲೆ ಅನಾವರಣಗೊಳಿಸಲು ಭಾರತದ ಪುರಾತತ್ವ ಇಲಾಖೆ ಅನುಮತಿಯನ್ನೂ ನೀಡಿದೆ.
ಈ ಧ್ವಜ 24 x36 ಅಳತೆಯಲ್ಲಿದ್ದು, ಹರಿ ಪರ್ಬತ್ನ ತುತ್ತತುದಿಯಲ್ಲಿ ಹಾರಾಡಲಿದೆ. ಈ ಕೋಟೆ ಇನ್ನೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿಯಂತ್ರಣದಲ್ಲೇ ಇದೆ. ಹಾಗಾಗಿ ಇಲ್ಲಿ ರಾಷ್ಟ್ರಧ್ವಜ ಹಾರಿಸಲು ಇಲಾಖೆಯ ಅನುಮತಿ ಕಡ್ಡಾಯವಾಗಿತ್ತು. ಪುರಾತತ್ವ ಇಲಾಖೆ ಕೂಡ ಅವಕಾಶ ಮಾಡಿಕೊಟ್ಟಿದೆ.
ಶ್ರೀನಗರದ ಕೊಹ್-ಇ-ಮಾರನ್ ಬೆಟ್ಟದ ಮೇಲೆ ಈ ಹರಿ ಪರ್ಬತ್ ಕೋಟೆಯಿದೆ. ಅಲ್ಲಿ ಭೇಟಿ ನೀಡಲು ಸ್ಥಳೀಯ ಆಡಳಿತ ಅನುಮತಿ ಬೇಕು ಹಾಗೂ ಭದ್ರತೆಗಾಗಿ ಸಿಆರ್ಪಿಎಫ್ ಯೋಧರನ್ನು ನಿಯೋಜಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಈ ಹಿಂದೆ ಇಲ್ಲಿ ಕೆಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಇದನ್ನೂ ಓದಿ: ಪ್ರಾಚೀನ ವಸ್ತುಗಳೆಂದು ನಂಬಿಸಿ ವಂಚಿಸಲು ಯತ್ನಿಸ್ತಿದ್ದ ಐವರು ಆರೋಪಿಗಳು ಅರೆಸ್ಟ್, ಮೂವರು ಪರಾರಿ
ಜೆಪಿ ನಗರದಲ್ಲಿ ಅಪಾರ ಪ್ರಮಾಣದ ಆನೆ ದಂತ, ವನ್ಯ ಜೀವಿಗಳ ಚರ್ಮ, ಮೂಳೆ ವಶ ಆರೋಪಿ ಬಂಧನ- ಚಿತ್ರಗಳಿವೆ
Published On - 9:45 am, Tue, 10 August 21