Coronavirus cases in India ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ; 28204 ಹೊಸ ಪ್ರಕರಣ ಪತ್ತೆ, 373 ಸಾವು

Covid 19: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,88,508ಕ್ಕೆ ತಲುಪಿದ್ದು ಇದು ಸೋಮವಾರದಿಂದ 13,680 ಇಳಿಕೆ ಆಗಿದೆ. ಇಲ್ಲಿಯವರೆಗೆ ಚೇತರಿಸಿಕೊಂಡವರ ಸಂಖ್ಯೆ 3,11,80,968 ಕ್ಕೆ ತಲುಪಿದೆ.

Coronavirus cases in India ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ; 28204 ಹೊಸ ಪ್ರಕರಣ ಪತ್ತೆ, 373 ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 10, 2021 | 10:31 AM

ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ 28,204 ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,19,98,158 ಕ್ಕೆ ತಲುಪಿದೆ. ದೈನಂದಿನ ಸಾವಿನ ಸಂಖ್ಯೆ 373 ಆಗಿದ್ದು ಒಟ್ಟಾರೆ ಸಾವಿನ ಸಂಖ್ಯೆಯನ್ನು 428,682 ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,88,508ಕ್ಕೆ ತಲುಪಿದ್ದು ಇದು ಸೋಮವಾರದಿಂದ 13,680 ಇಳಿಕೆ ಆಗಿದೆ. ಇಲ್ಲಿಯವರೆಗೆ ಚೇತರಿಸಿಕೊಂಡವರ ಸಂಖ್ಯೆ 3,11,80,968 ಕ್ಕೆ ತಲುಪಿದೆ.  ಸೋಮವಾರದವರೆಗೆ ಒಟ್ಟು 4,83,27,8545 ಮಾದರಿಗಳನ್ನು ಕೊವಿಡ್ ರೋಗ ಪತ್ತೆಗಾಗಿ ಪರೀಕ್ಷಿಸಲಾಗಿದೆ. ಈ ಪೈಕಿ 15,11,313 ಮಾದರಿಗಳನ್ನು ಒಂದು ದಿನದಲ್ಲಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಕೇಂದ್ರವು ಸೋಮವಾರ ಬಿಡುಗಡೆ ಮಾಡಿದ ತಾತ್ಕಾಲಿಕ ವರದಿಯ ಪ್ರಕಾರ, ಭಾರತದ ಒಟ್ಟು ಕೊವಿಡ್ ವ್ಯಾಕ್ಸಿನೇಷನ್ ವ್ಯಾಪ್ತಿಯು 510 ಮಿಲಿಯನ್ (51,39,14,567) ನ ಹೆಗ್ಗುರುತನ್ನು ದಾಟಿದೆ.

ಕೊವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.45 ಕ್ಕೆ ಏರಿಕೆಯಾಗಿದ್ದು ಇದು ಇದುವರೆಗಿನ ಗರಿಷ್ಠ ಚೇತರಿಕೆಯ ದರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೈನಂದಿನ ಧನಾತ್ಮಕ ದರ – ಪ್ರತಿ 100 ಕ್ಕೆ ಗುರುತಿಸಲಾದ ಧನಾತ್ಮಕ ಪ್ರಕರಣಗಳ ಸಂಖ್ಯೆ – 1.87 ಪ್ರತಿಶತ, ಕಳೆದ 15 ದಿನಗಳಲ್ಲಿ 3 ಶೇಕಡಕ್ಕಿಂತ ಕಡಿಮೆ.

ಕೆಲವು ವಾರಗಳ ಹಿಂದೆ ಕೊವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದ್ದ ಕೇರಳ 13,049 ಪ್ರಕರಣಗಳನ್ನು ವರದಿ ಮಾಡಿದೆ. ಒಂದೇ ದಿನದಲ್ಲಿ ಒಂದು ರಾಜ್ಯದಿಂದ ವರದಿಯಾದ ಅತೀಹೆಚ್ಚು ಪ್ರಕರಣಗಳು ಇಲ್ಲಿಯದ್ದಾಗಿದ್ದು , ಇಲ್ಲಿ 105 ಸಾವು ವರದಿ ಆಗಿದೆ.

ರಾಜಸ್ಥಾನ (13 ಕೋವಿಡ್ ಪ್ರಕರಣಗಳು), ಗುಜರಾತ್ (19), ಮಧ್ಯ ಪ್ರದೇಶ (10), ಬಿಹಾರ (43) – ನಾಲ್ಕು ದೊಡ್ಡ ರಾಜ್ಯಗಳಲ್ಲಿ  ಸಾವುಗಳನ್ನು ವರದಿ  ಆಗಿಲ್ಲ. ಛತ್ತೀಸ್‌ಗಢ ಮತ್ತು ಜಾರ್ಖಂಡ್ ಕೂಡ ಕೊರೊನಾವೈರಸ್ ಸಾವುಗಳು ವರದಿ ಆಗಿಲ್ಲ.

1,120 ಹೊಸ ಕೊವಿಡ್ ಪ್ರಕರಣಗಳೊಂದಿಗೆ, ಅಸ್ಸಾಂ ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿರುವ ಈಶಾನ್ಯ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ.  ಮಿಜೋರಾಂ (937), ಮಣಿಪುರ (467), ಅರುಣಾಚಲ ಪ್ರದೇಶ (302)  ಪ್ರಕರಣಗಳನ್ನುವರದಿ ಮಾಡಿದೆ.

ಇದನ್ನೂ ಓದಿವಿದ್ಯುತ್ ತಿದ್ದುಪಡಿ ಮಸೂದೆಗೆ ರಾಜ್ಯಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು ಏಕೆ? ವಿದ್ಯುತ್ ವಿತರಣಾ ಕಂಪನಿಗಳ ಭವಿಷ್ಯಕ್ಕೇನು ಅಪಾಯ?

(India reports 28204 new coronavirus cases the lowest in 147 days 373 new fatalities)

Published On - 10:23 am, Tue, 10 August 21