ಪ್ರಾಚೀನ ವಸ್ತುಗಳೆಂದು ನಂಬಿಸಿ ವಂಚಿಸಲು ಯತ್ನಿಸ್ತಿದ್ದ ಐವರು ಆರೋಪಿಗಳು ಅರೆಸ್ಟ್, ಮೂವರು ಪರಾರಿ
ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪಿಯ ಎಂಇಐ ಬಡಾವಣೆಯಲ್ಲಿ ಆರ್‌ಎಂಕೆ ಎಂಟರ್ಪ್ರೈಸಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಯಲ್ಲಿ ಅಂಬರ್‌ಗ್ರೀಸ್ ಗಟ್ಟಿ ಮತ್ತು ಹಲವು ಪ್ರಾಚೀನ ವಸ್ತುಗಳನ್ನು ಸಾರ್ವಜನಿಕರಿಗೆ ನಂಬಿಸಿ ಕೋಟ್ಯಾಂತರ ರೂಗಳಿಗೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿರುವ ಮಾಹಿತಿ ಸಿಕ್ಕಿದೆ
ನೆಲಮಂಗಲ: ಅಂಬರ್‌ಗ್ರೀಸ್ ಮೆಟಲ್, ರೆಡ್ ಮರ್ಕ್ಯುರಿ, ಪ್ರಾಚೀನ ವಸ್ತುಗಳೆಂದು ಕೋಟ್ಯಾಂತರ ರೂಪಾಯಿಗೆ ಕೆಲ ವಸ್ತುಗಳನ್ನ ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಐದು ಜನ ಆರೋಪಿಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದಿದ್ದು ಮೂರು ಜನ ಪರಾರಿಯಾಗಿದ್ದಾರೆ.
ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪಿಯ ಎಂಇಐ ಬಡಾವಣೆಯಲ್ಲಿ ಆರ್‌ಎಂಕೆ ಎಂಟರ್ಪ್ರೈಸಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಯಲ್ಲಿ ಅಂಬರ್‌ಗ್ರೀಸ್ ಗಟ್ಟಿ ಮತ್ತು ಹಲವು ಪ್ರಾಚೀನ ವಸ್ತುಗಳನ್ನು ಸಾರ್ವಜನಿಕರಿಗೆ ನಂಬಿಸಿ ಕೋಟ್ಯಾಂತರ ರೂಗಳಿಗೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿರುವ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ, ಐದು ಜನ ಆರೋಪಿಗಳನ್ನ ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ. ಮುಜೀಬ್, ಮುನ್ನಾ, ಗುಕಾಬ್ ಚಾಂದ್, ಸಂತೋಷ, ಜಗನ್ನಾಥ ಶರ್ಮ ಬಂಧಿತ ಆರೋಪಿಗಳು. ಇನ್ನೂ ದಾಳಿ ವೇಳೆ ಮಂಜಪ್ಪ, ರಾಜು ಹಾಗೂ ನರಸಿಂಹಮೂರ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸಿಸಿಬಿ ಇನ್ಸ್ಪೆಕ್ಟರ್ ರಹೀಮ್ ತಂಡ ಖಚಿತ ಮಾಹಿತಿ ಮೇರೆಗೆ ದಾಳಿಗೆ ಮುಂದಾಗಿದ್ದು, ಸ್ಥಳದ ಮೇಲೆ ದಾಳಿ ಮಾಡಲು ಐವರನ್ನು ನೇಮಕ ಮಾಡಿಕೊಂಡು ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಸಂಜೆ 05-30 ಗಂಟೆಯಲ್ಲಿ ಸ್ಥಳಕ್ಕೆ ಸರ್ಕಾರಿ ವಾಹನದಲ್ಲಿ ತೆರಳಿ ಸ್ವಲ್ಪ ದೂರದಲ್ಲೆ ಅಧಿಕಾರಿಗಳು ಉಳಿದುಕೊಂಡು ಗ್ರಾಹಕರ ಸೋಗಿನಲ್ಲಿ ಸಿಬ್ಬಂದಿಯಾದ ಹೆಡ್ ಕಾನ್ಸಟಬಲ್ ನಾಗರಾಜರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಸ್ಥಳದಲ್ಲೆ ಅಪರಾಧ ಕೃತ್ಯ ಬೆಳಕಿಗೆ ಬಂದ ಕೂಡಲೆ ಮಿಸ್ ಕಾಲ್ಡ್ ಕೊಡಲು ಸೂಚಿಸಿದಂತೆ ನಾಗರಾಜು ಸ್ಥಳಕ್ಕೆ ಹೋದ ಮುಕ್ಕಾಲು ಗಂಟೆ ನಂತರ ಮಿಸ್ ಕಾಲ್ಡ್ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಟೀಂ ಸ್ಥಳದಲ್ಲಿ ದಾಳಿಗೆ ಮುಂದಾಗಿದೆ.
ಮೂರು ಜನ ಎಸ್ಕೇಪ್ ಸಿಬ್ಬಂದಿಯ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿಗೆ ಮುಂದಾದಾಗ ಇವರನ್ನ ಕಂಡ ಕೂಡಲೆ ಮೂರು ಜನ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಪರಿಶೀಲನೆ ಮುಂದುವರೆಸಿದಾಗ ಅದೇ ಕಟ್ಟಡದ ಮತ್ತೊಂದು ಬದಿಯಲ್ಲಿದ್ದ ಮನೆಯಲ್ಲಿ ಕುಳಿತಿದ್ದ ಐದು ಜನ ಆರೋಪಿಗಳು ಸಿಲುಕಿಕೊಂಡಿದ್ದು ಪ್ರಕರಣದ ಸತ್ಯಾಂಶಗಳನ್ನ ಬಾಯ್ಬಿಟ್ಟಿದ್ದಾರೆ.
ಸಿಕ್ಕಿದ್ದೇನು? ಐದು ಜನರನ್ನ ವಶಕ್ಕೆ ಪಡೆದ ಸಿಸಿಬಿ ತಂಡ ಅವರನ್ನ ಸ್ಥಳದಲ್ಲಿದ್ದ ವಸ್ತುಗಳ ಬಗ್ಗೆ ವಿಚಾರಣೆ ನಡೆಸಿದಾಗ ಇದು ಅಂಬರ್‌ಗ್ರೀಸ್ ಗಟ್ಟಿ ಇದರ ಬೆಲೆ 1 ಕೋಟಿ ಆಗುತ್ತದೆ ಎಂದು ಸಾರ್ವಜನಿಕರಿಗೆ ವ್ಯಾಪಾರ ಕುದುರಿಸುತ್ತಿದೆವು ಎಂದು ಬಾಯ್ಬಿಟ್ಟಿದ್ದಾರೆ. ನಂತರ ಮನೆಯನ್ನು ಪರಿಶೀಲಿಸಲಾಗಿ 10 ಎಂ.ಎಲ್‌ನ ಇಕಾಮ್ ಮುರೈ ಹೆದರಿನ 2 ಸೆಂಟ್ ಬಾಟಲ್, ಒಂದು ಪುರಾತನ ಕಾಲದ ಸ್ಟೀಮ್ ಫ್ಯಾನ್ ಮೇಲೆ ಈಸ್ಟ್ ಇಂಡಿಯಾ ಕಂಪನಿ 1818 ಎಂದು ನಮೂದಾಗಿರುವುದು ಕಂಡು ಬಂದಿದೆ. ಇದರೊಟ್ಟಿಗೆ ತಾಮ್ರದ ಬಾಟಲಿ ಸಹ ದೊರೆತಿದ್ದು ಅದರ ಮೇಲೆ ಕೆಂಪು ಮರ್ಕ್ಯುರಿ ಲೇಪನಗಳು ದೊರೆತಿವೆ. ಈ ಬಗ್ಗೆ ವಿಚಾರಿಸಿದಾದ ಆರೋಪಿಗಳಾದ ಮುಜೇಶ್, ಮತ್ತು ಮಂಜಪ್ಪ ಎಂಬುವವರು ಇವುಗಳನ್ನು ತಂದಿರುತ್ತಾರೆ, ನಾವು ಗಿರಾಕಿಗಳಿಗೆ ಇವುಗಳನ್ನ ಮಾರಾಟಮಾಡುತ್ತೇವೆಂದು ಬಂದಿತರು ತಿಳಿಸಿದ್ದಾರೆ. ಒಟ್ಟು ಸುಮಾರು 90 ಕೆಜಿ ತೂಕದ ಅಂಬರ್‌ಗ್ರೀಸ್ ಲೋಹ, ಈಸ್ಟ್ ಇಂಡಿಯಾ ಕಂಪನಿಗೆ ಸೇರಿದ ರಾಣಿ ಬಳಸುತ್ತಿದ್ದರು ಎಂದು ನಮೂದಿಸಿರುವ ಕೆಲ ಪರಿಕರಗಳು, ಒಂದು ತಕ್ಕಡಿ, ಹಾಗೂ ಆರೋಪಿಗಳ ಬಳಿ ಇದ್ದ ಮೊಬೈಕ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
ಪರವಾನಿಗೆ ಇಲ್ಲದೆ ಮಾರಾಟಕ್ಕೆ ಯತ್ನ ಪ್ರಾಚೀನ ಹಾವೂ ಮಾರಟಕ್ಕೆ ನಿಷೇದಿತ ವಸ್ತುಗಳನ್ನ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಾಚ್ಯ ವಸ್ತುಗಳ ಕಾಯ್ದೆಯಡಿ ಬಂದಿಸಿದ್ದು ವಶಕ್ಕೆ ಪಡೆದ ವಸ್ತುಗಳ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಸಿಲುಕಿರುವ ಐದು ಜನರ ವಿಚಾರಣೆ ನಡೆಯುತ್ತಿದ್ದು ಪರಾರಿಯಾಗಿರುವವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಷ್ಟೆ ಅಲ್ಲದೆ ಇಂತಹ ದೊಡ್ಡ ಜಾಲದಲ್ಲಿ ಅಡಿಗಿರುವವರನ್ನ ಬಂಧಿಸಿ ಇದಕ್ಕೆ ಬ್ರೇಕ್ ಹಾಕಬೇಕು ಎಂದು ತನಿಖೆ ನಡೆಯುತ್ತಿದೆ.
ಕೋಟಿ ಕುಳಗಳೆ ಟಾರ್ಗೆಟ್ ಕೋಟಿ ಕೋಟಿ ಹಣ ಸಂಪಾದನೆ ಮಾಡಿಕೊಂಡು ಐಶಾರಾಮಿ ಜೀವನ ನಡೆಸುವ ಕೋಟಿ ಕುಳಗಳನ್ನ ಟಾರ್ಗೆಟ್ ಮಾಡುವ ಈ ಗ್ಯಾಂಗ್ ಇವರ ಬಳಿ ಇರುವ ವಸ್ತುಗಳ ಮೇಲೆ ಅವರಿಗೆ ನಂಬಿಕೆ ಹಾಗೂ ಆಸೆ ಬರುವಂತೆ ಮಾಡುತ್ತಾರೆ. ಇವೆಲ್ಲ ಪ್ರಾಚೀನ ವಸ್ತುಗಳು ಇವು ರಾಜ ಮಹಾರಾಜರು ಹಾಗೂ ವಿದೇಶಿ ರಾಜ ರಾಣಿಯರು ಬಳಸಿರುವ ವಸ್ತುಗಳು, ಇವನ್ನೆಲ್ಲ ನಿಮ್ಮ ಮನೆಗಳಲ್ಲಿ ಇಟ್ಟುಕೊಂಡರೆ ಶೋಭೆ ಹಾಗೂ ಅದೃಷ್ಟ ಕುಲಾಯಿಸುತ್ತೆ ಎಂದು ನಂಬಿಸಿ ಕೋಟ್ಯಾಂತರ ರುಪಾಯಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಹೊರ ರಾಜ್ಯಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್