ಹೊರ ರಾಜ್ಯಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಹೊರ ರಾಜ್ಯಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್
ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು

ರೌಡಿಶೀಟರ್ ಅರುಣ್ ಕಂಟ್ರಿಮೇಡ್ ಪಿಸ್ತೂಲ್ ಪಡೆದಿದ್ದ. ಬಂಧಿತರಿಂದ ಕಂಟ್ರಿಮೇಡ್ ಪಿಸ್ತೂಲ್, ಕಂಟ್ರಿಮೇಡ್ ರೈಫಲ್ ಸೇರಿ 7 ಆಯುಧಗಳು ಮತ್ತು 19 ಸಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

TV9kannada Web Team

| Edited By: sandhya thejappa

Aug 07, 2021 | 8:46 AM

ಬೆಂಗಳೂರು: ಅಕ್ರಮವಾಗಿ ಶಸ್ತ್ರಾಸ್ತ್ರ (Illegal Weapon) ಪೂರೈಕೆ ಮಾಡುತ್ತಿದ್ದ ಗ್ಯಾಂಗ್​ನ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಅಯಾಜ್ ಉಲ್ಲಾ, ಸೈಯದ್ ಸಿರಾಜ್, ಮೊಹಮ್ಮದ್ ಅಲಿ ಮತ್ತು ಅರುಣ್ ಕುಮಾರ್ ಎಂಬುವವರು ಬಂಧಿತ ಆರೋಪಿಗಳು. ಆರೋಪಿ ಅಯಾಜ್ ಪಿಸ್ತೂಲ್, ಬಂದೂಕನ್ನು ಉತ್ತರ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ತರುತಿದ್ದ. ಅಯಾಜ್ ಬಳಿ ಸೈಯದ್ ಮತ್ತು ರೌಡಿಶೀಟರ್ ಮೊಹಮ್ಮದ್ ಅಲಿ ಸಹ ಪಿಸ್ತೂಲ್ ಮತ್ತು ಬಂದೂಕನ್ನು ಖರೀದಿಸಿದ್ದರು.

ಇನ್ನು ರೌಡಿಶೀಟರ್ ಅರುಣ್ ಕಂಟ್ರಿಮೇಡ್ ಪಿಸ್ತೂಲ್ ಪಡೆದಿದ್ದ. ಬಂಧಿತರಿಂದ ಕಂಟ್ರಿಮೇಡ್ ಪಿಸ್ತೂಲ್, ಕಂಟ್ರಿಮೇಡ್ ರೈಫಲ್ ಸೇರಿ 7 ಆಯುಧಗಳು ಮತ್ತು 19 ಸಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಯಾಜ್ ಈ ಹಿಂದೆ ಎರಡು ಡಕಾಯಿತಿ ಕೇಸ್​ಗಳಲ್ಲಿ ಭಾಗಿಯಾಗಿದ್ದನು. ಸೈಯದ್ ಸಿರಾಜ್ ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಅರೆಸ್ಟ್ ಅಗಿದ್ದ. ಶಿವಾಜಿನಗರ ರೌಡಿ ಶೀಟರ್ ಅಗಿದ್ದ ಮೊಹಮ್ಮದ್ ಅಲಿ ಸಹ ಪಿಸ್ತೂಲ್ ಹಾಗೂ ಬಂದೂಕನ್ನು ಖರೀದಿ ಮಾಡಿ, ತನ್ನ ಜೊತೆಯಲ್ಲೆ ಅಕ್ರಮವಾಗಿ ಇಟ್ಟುಕೊಂಡಿದ್ದ. ತುಮಕೂರು ರೌಡಿ ಶೀಟರ್ ಆರೋಪಿ ಅರುಣ್ ಕುಮಾರ್ ಕೊಲೆ ಸೇರಿ ಹಲವು ಕೇಸ್​ಗಳಲ್ಲಿ ಭಾಗಿಯಾಗಿದ್ದವನು.

ಇದನ್ನೂ ಓದಿ

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,805 ಕೊರೊನಾ ಕೇಸ್ ಪತ್ತೆ; 36 ಮಂದಿ ಸಾವು

ಕೊವಿಡ್ -19 ಲಸಿಕೆಗಳಿಗೆ ಡೆಲ್ಟಾ ಪ್ರಸರಣವನ್ನು ನಿಲ್ಲಿಸಲು ಸಾಧ್ಯವಾಗದೇ ಇರಬಹುದು: ಎಚ್ಚರಿಕೆ ನೀಡಿದ ಬ್ರಿಟನ್

(CCB Police have arrested a gang of illegal Weapon suppliers)

Follow us on

Related Stories

Most Read Stories

Click on your DTH Provider to Add TV9 Kannada