Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,805 ಕೊರೊನಾ ಕೇಸ್ ಪತ್ತೆ; 36 ಮಂದಿ ಸಾವು

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,805 ಕೊರೊನಾ ಕೇಸ್ ಪತ್ತೆ; 36 ಮಂದಿ ಸಾವು
ಪ್ರಾತಿನಿಧಿಕ ಚಿತ್ರ

ಬೆಂಗಳೂರಿನಲ್ಲಿ ಇಂದು ಒಂದೇ ದಿನ 441 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,29,781 ಕ್ಕೆ ಏರಿಕೆಯಾಗಿದೆ. 12,29,781 ಸೋಂಕಿತರ ಪೈಕಿ 12,05,312 ಜನರು ಗುಣಮುಖರಾಗಿದ್ದಾರೆ.

TV9kannada Web Team

| Edited By: ganapathi bhat

Aug 06, 2021 | 9:23 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಆಗಸ್ಟ್ 6) ಹೊಸದಾಗಿ 1,805 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,15,317 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,54,222 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 36 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,741 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 24,328 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 441 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,29,781 ಕ್ಕೆ ಏರಿಕೆಯಾಗಿದೆ. 12,29,781 ಸೋಂಕಿತರ ಪೈಕಿ 12,05,312 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿಗೆ 7 ಮಂದಿ ಬಲಿಯಾಗಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 15,908 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 8,560 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 53, ಬೆಂಗಳೂರು ಗ್ರಾಮಾಂತರ 28, ಬೆಂಗಳೂರು ನಗರ 441, ಬೀದರ್ 1, ಚಾಮರಾಜನಗರ 30, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 69, ಚಿತ್ರದುರ್ಗ 12, ದಕ್ಷಿಣ ಕನ್ನಡ 411, ದಾವಣಗೆರೆ 3, ಧಾರವಾಡ 8, ಗದಗ 0, ಹಾಸನ 103, ಹಾವೇರಿ 1, ಕಲಬುರಗಿ 17, ಕೊಡಗು 79, ಕೋಲಾರ 45, ಕೊಪ್ಪಳ 2, ಮಂಡ್ಯ 45, ಮೈಸೂರು 90, ರಾಯಚೂರು 5, ರಾಮನಗರ 6, ಶಿವಮೊಗ್ಗ 70, ತುಮಕೂರು 58, ಉಡುಪಿ 153, ಉತ್ತರ ಕನ್ನಡ 59, ವಿಜಯಪುರ 5, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಜಿಲ್ಲಾವಾರು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 7 ಮಂದಿ ಬಲಿಯಾಗಿದ್ದಾರೆ. ಕೋಲಾರದಲ್ಲಿ 5 ಮಂದಿ, ದಕ್ಷಿಣ ಕನ್ನಡ, ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ 3 ಮತ್ತು ಮೈಸೂರು ಜಿಲ್ಲೆಯಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಉಡುಪಿ ಜಿಲ್ಲೆಯಲ್ಲಿ ತಲಾ 2, ಬಳ್ಳಾರಿ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಕೊವಿಡ್ ಮರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 36,741 ಜನರ ಸಾವು ಸಂಭವಿಸಿದೆ.

ಇದನ್ನೂ ಓದಿ: Covid19 Guidelines: ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

Eta Variant: ದಕ್ಷಿಣ ಕನ್ನಡದಲ್ಲಿ ಕೊರೊನಾ ರೂಪಾಂತರಿ ಇಟಾ ವೈರಾಣು ಪತ್ತೆ; ಕತಾರ್​ನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು

(Karnataka New Corona Cases Death Toll Total Covid19 Active Coronavirus Cases on August 6)

Follow us on

Related Stories

Most Read Stories

Click on your DTH Provider to Add TV9 Kannada