Eta Variant: ದಕ್ಷಿಣ ಕನ್ನಡದಲ್ಲಿ ಕೊರೊನಾ ರೂಪಾಂತರಿ ಇಟಾ ವೈರಾಣು ಪತ್ತೆ; ಕತಾರ್​ನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು

4 ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನು ಮಂಗಳೂರು ಏರ್‌ಪೋರ್ಟ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಸ್ಯಾಂಪಲ್ಸ್ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಜಿನೋಮಿಕ್ ಅಧ್ಯಯನ ನಡೆಸಲಾಗಿತ್ತು.

Eta Variant: ದಕ್ಷಿಣ ಕನ್ನಡದಲ್ಲಿ ಕೊರೊನಾ ರೂಪಾಂತರಿ ಇಟಾ ವೈರಾಣು ಪತ್ತೆ; ಕತಾರ್​ನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Aug 06, 2021 | 12:16 PM

ದಕ್ಷಿಣ ಕನ್ನಡ: ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಆತಂಕ ತಲೆದೋರಿದ್ದು, ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ನಿಗಾ ವಹಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ (Delta Variant) ವೈರಾಣುವಿನ ಅಬ್ಬರವೇ ಹೆಚ್ಚಾಗಿ ಕಂಡುಬಂದಿದ್ದು, ಎರಡನೇ ಅಲೆಗೆ ಕಾರಣವಾದ ಈ ತಳಿಯೇ ಮೂರನೇ ಅಲೆಗೂ (Corona 3rd Wave) ನಾಂದಿ ಹಾಡಬಹುದು ಎಂಬ ಅಂದಾಜಿದೆ. ಏತನ್ಮಧ್ಯೆ, ದಕ್ಷಿಣ ಕನ್ನಡದಲ್ಲಿ ಕತಾರ್‌ನಿಂದ ಬಂದು ವಾಪಸಾಗಿದ್ದ ವ್ಯಕ್ತಿಯೊಬ್ಬರಿಗೆ ಇಟಾ ವೈರಸ್ (ಬಿ.1.525) ಪತ್ತೆಯಾಗಿದ್ದು, ಮಾದರಿಯನ್ನು (Sample) ಪರೀಕ್ಷೆಗೆ ಒಳಪಡಿಸಿದ 4 ತಿಂಗಳ ಬಳಿಕ ವಿಚಾರ ಬಯಲಾಗಿದೆ.

ದಕ್ಷಿಣ ಕನ್ನಡದ ಮೂಡಬಿದ್ರೆ ಊರಿಗೆ ಕತಾರ್​ನಿಂದ ಬಂದಿದ್ದ ವ್ಯಕ್ತಿಯಲ್ಲಿ ಇಟಾ ವೈರಾಣು ಪತ್ತೆಯಾಗಿರುವ ಕುರಿತು ದಕ್ಷಿಣ ಕನ್ನಡ DHO ಡಾ.ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ. 4 ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನು ಮಂಗಳೂರು ಏರ್‌ಪೋರ್ಟ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಸ್ಯಾಂಪಲ್ಸ್ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಜಿನೋಮಿಕ್ ಅಧ್ಯಯನ ನಡೆಸಲಾಗಿತ್ತು.

ಇದೀಗ ಮಾದರಿ ಸಂಗ್ರಹಿಸಿದ ನಾಲ್ಕು ತಿಂಗಳ ಬಳಿಕ ಆ ವ್ಯಕ್ತಿಯಲ್ಲಿ ಇಟಾ ತಳಿಯ ವೈರಾಣು ಇರುವುದು ದೃಢವಾಗಿದೆ. ಆದರೆ, ಸೋಂಕಿತ ವ್ಯಕ್ತಿ ಕೊರೊನಾ ಪಾಸಿಟಿವ್ ಬಂದ ನಂತರ ಚಿಕಿತ್ಸೆ ಪಡೆದು ಕೆಲ ಕಾಲ ಮನೆಯಲ್ಲಿದ್ದು, ಗುಣಮುಖರಾದ ನಂತರ ಮರಳಿ ಕತಾರ್​ಗೆ ತೆರಳಿದ್ದಾರೆ. ಅಲ್ಲದೇ ನಾಲ್ಕು ತಿಂಗಳ ಹಿಂದೆಯೇ ಅವರ ಸಂಪರ್ಕದಲ್ಲಿದ್ದ 150 ಜನರ ಟೆಸ್ಟ್ ಮಾಡಿದ್ದು, ಎಲ್ಲರಿಗೂ ನೆಗೆಟಿವ್ ಬಂದಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎನ್ನಲಾಗಿದೆ.

ಈ ಹೊಸ ರೂಪಾಂತರಿ ಇಟಾ ವೈರಾಣು ಬ್ರಿಟನ್ ಮತ್ತು ನೈಜೀರಿಯಾ ಭಾಗದಲ್ಲಿ ಪತ್ತೆಯಾಗಿತ್ತು. ಬಳಿಕ ಭಾರತದಲ್ಲಿ ಮಿಜೋರಾಂ ಸೇರಿ ಕೆಲವು ಭಾಗದಲ್ಲಿ ಕಂಡುಬಂದಿತ್ತು. ಇದೀಗ ಕತಾರ್‌ನಿಂದ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಗೂ ಅದರಿಂದಲೇ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಸಿಟಿವ್ ಬಂದ ನಂತರ ಅವರ ಸ್ಯಾಂಪಲ್ ಜಿನೋಮಿಕ್ ಸ್ಟಡಿಗೆ ಹೋಗಿದ್ದರಿಂದ ನಾಲ್ಕು ತಿಂಗಳ ಬಳಿಕ ತಡವಾಗಿ ವರದಿ ಬಂದಿದೆ.

ಸದರಿ ವರದಿಯಿಂದ ಕೊವಿಡ್ ರೂಪಾಂತರಿ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಸದ್ಯ ಆ ವ್ಯಕ್ತಿ ಕತಾರ್​ಗೆ ವಾಪಾಸ್ ತೆರಳಿದ್ದು, ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಆರೋಗ್ಯವಾಗಿರುವುದರಿಂದ ಯಾವುದೇ ಆತಂಕ ಅಗತ್ಯವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

(Eta New Variant of covid 19 found in Dakshina Kannada)

ಇದನ್ನೂ ಓದಿ: ಇದು ಎಷ್ಟನೇ ಕೊರೊನಾ ಅಲೆ ಎಂಬುದು ಮುಖ್ಯವಲ್ಲ; ಚಿಂತಿಸಬೇಕಾಗಿದ್ದು ಬೇರೆಯೇ ಇದೆ: ತಜ್ಞರು 

Covid 19 Karnataka Update: ಕರ್ನಾಟಕದ 1785 ಮಂದಿಗೆ ಕೊರೊನಾ ಸೋಂಕು, 25 ಸಾವು