ಪ್ರಧಾನಿ ನರೇಂದ್ರ ಮೋದಿ ಬೆಳಗಿನ ಜಾವ 3 ಗಂಟೆಗೆ ಜಕಾರ್ತಾದಲ್ಲಿ ಲ್ಯಾಂಡ್ ಆದರೂ ಸ್ವಾಗತಕ್ಕೆ ಏರ್ಪೋರ್ಟ್​ನಲ್ಲಿ ಸಹಸ್ರಾರು ಜನ!

ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2023 | 2:32 PM

ಅವರು ನಿಲ್ದಾಣದಿಂದ ಹೊರಬರುವಾಗ ನಿಲ್ಲಲು ಅವಕಾಶವಿದ್ದ ಸ್ಥಳಗಳಲೆಲ್ಲ ನೆರೆದಿದ್ದ ಜನ ‘ಮೋದಿ ಮೋದಿ’ ಅಂತ ಒಕ್ಕೊರಲಿನಿಂದ ಕೂಗಲಾರಂಭಿಸಿದರು. ಜಕಾರ್ತಾ ನಲ್ಲಿ ಲ್ಯಾಂಡ್ ಆಗಿದ್ದೇನೆ. ಏಸಿಇಎಎನ್ ಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗಿಯಾಗಿ ವಿಶ್ವವನ್ನು ಉತ್ತಮಗೊಳಿಸುವ ದಿಶೆಯಲ್ಲಿ ಬೇರೆ ಬೇರೆ ದೇಶಗಳ ನಾಯಕರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಕಾರ್ತಾ: ಏಸಿಇಎಎನ್- ಇಂಡಿಯಾ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಬೆಳಗಿನ ಜಾವ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ (Jakarta) ತಲುಪಿದರು. ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಇಂಡೋನೇಷ್ಯಾದ ಸಾಂಪ್ರದಾಯಿಕ ನೃತ್ಯದ ಮೂಲಕ ನರೇಂದ್ರ ಮೋದಿಯವರನ್ನು ಆ ದೇಶದ ಗಣ್ಯರು ಬರಮಾಡಿಕೊಂಡರು. ಅವರನ್ನು ಹೊತ್ತ ವಿಮಾನ ಜಕಾರ್ತಾದಲ್ಲಿ ಬೆಳಗಿನ ಜಾವ 3 ಗಂಟೆಗೆ ಲ್ಯಾಂಡ್ ಆದರೂ, ಸಾವಿರಾರು ಜನ ವಿಮಾನ ನಿಲ್ದಾಣದಲ್ಲಿ ಅವರಿಗಾಗಿ ಕಾಯುತ್ತಿದ್ದರು. ಅವರು ನಿಲ್ದಾಣದಿಂದ ಹೊರಬರುವಾಗ ನಿಲ್ಲಲು ಅವಕಾಶವಿದ್ದ ಸ್ಥಳಗಳಲೆಲ್ಲ ನೆರೆದಿದ್ದ ಜನ ‘ಮೋದಿ ಮೋದಿ’ ಅಂತ ಒಕ್ಕೊರಲಿನಿಂದ ಕೂಗಲಾರಂಭಿಸಿದರು. ಜಕಾರ್ತಾ ನಲ್ಲಿ ಲ್ಯಾಂಡ್ ಆಗಿದ್ದೇನೆ. ಏಸಿಇಎಎನ್ ಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗಿಯಾಗಿ ವಿಶ್ವವನ್ನು ಉತ್ತಮಗೊಳಿಸುವ ದಿಶೆಯಲ್ಲಿ ಬೇರೆ ಬೇರೆ ದೇಶಗಳ ನಾಯಕರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.