ದೀಪಾವಳಿ ಸಂಭ್ರಮ: ಹೂವು, ಹಣ್ಣು ಖರೀದಿಗೆ ಕೆ.ಆರ್. ಮಾರ್ಕೆಟ್​ನಲ್ಲಿ ಮುಗಿಬಿದ್ದ ಜನ; ಟ್ರಾಫಿಕ್​ ಜಾಮ್​

Edited By:

Updated on: Oct 20, 2025 | 7:54 AM

ರಾಜ್ಯಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ರಾಜಧಾನಿ ಬೆಂಗಳೂರಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ಹೂವು, ಹಣ್ಣುಗಳ ಖರೀದಿಗೆ ಜನ ಮನೆಯಿಂದ ಬೆಳ್ಳಂ ಬೆಳಿಗ್ಗೆ ಹೊರ ಬಂದಿದ್ದು, ನಗರದ ಕೆ.ಆರ್.ಮಾರ್ಕೆಟ್​ನಲ್ಲಿ ಜನ ಸಾಗರವೇ ಕಂಡು ಬಂದಿದೆ. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವು ಸೇರಿ ಬಗೆ ಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿದೆ.

ಬೆಂಗಳೂರು, ಅಕ್ಟೋಬರ್​ 20: ದೀಪಾವಳಿ (Deepavali) ಹಬ್ಬ ಹಿನ್ನೆಲೆ ಹೂವು ಖರೀದಿಗೆ ಬೆಂಗಳೂರಿನ ಸಿಟಿ ಮಾರ್ಕೆಟ್​ಗೆ ಬೆಳ್ಳಂ ಬೆಳಗ್ಗೆ ಜನ ಸಾಗರವೇ ಹರಿದು ಬಂದಿದೆ. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವು ಸೇರಿ ಬಗೆ ಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿದ್ದು, ಸತತ ಮಳೆ ಹಿನ್ನೆಲೆ ಹೂವಿನ ದರದಲ್ಲಿ ಕೊಂಚ ಪ್ರಮಾಣದ ಏರಿಕೆ ಕಂಡು ಬಂದಿದೆ. ಜನದಟ್ಟಣೆ ಹಿನ್ನಲೆ ಕೆ.ಆರ್. ಮಾರ್ಕೆಟ್​, ಅವೆನ್ಯೂ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಅಪಾಯಕಾರಿಯಾಗಿ ಫ್ಲೈಓವರ್ ರಸ್ತೆ ಮೇಲೆ ಗ್ರಾಹಕರು ವಾಹನಗಳ ಪಾರ್ಕಿಂಗ್​ ಮಾಡಿ ತೆರಳಿದ ಪರಿಣಾಮ, ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.