ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿ ಪತ್ತೆ, ಮೂರರಲ್ಲಿ ಒಂದು ಕಪ್ಪು!

|

Updated on: Dec 07, 2023 | 11:49 AM

ಈ ಮರಿಗಳ ಸೃಷ್ಟಿಗೆ ಕಾರಣವಾಗಿರುವ ಗಂಡು ಚಿರತೆ ಕಪ್ಪು ಬಣ್ಣದ್ದಾಗಿರಬಹುದು. ಮೂರು ಮರಿಗಳಲ್ಲಿ ಒಂದು ಕಪ್ಪು ಬಣ್ಣದ್ದು. ತಂದೆ ಕಪ್ಪಾಗಿರದೆ ಹೋದರೆ ತಾಯಿ ಕಪ್ಪಾಗಿರಬಹುದು. ವನ್ಯಜೀವಿ ತಜ್ಞರ ಪ್ರಕಾರ ಕಪ್ಪು ಚಿರತೆಗಳ ಬಹಳ ಕಡಿಮೆ ಸಂಖ್ಯೆಯಲ್ಲಿ ಕಾಣಸಿಗುತ್ತವೆ ಅಥವಾ ಅವುಗಳನ್ನು ಅಪರೂಪವೆಂದೇ ಹೇಳಬಹುದು.

ಮೈಸೂರು: ಮರಿಗಳು, ಪುಟ್ಟ ಪುಟ್ಟ ಜೀವಿಗಳು ಸಾಧು ಪ್ರಾಣಿಗಳ ಸಂತಾನಗಿರಲಿ ಅಥವಾ ಹಿಂಸ್ರ ಪಶುಗಳು- ನೋಡಲು ಮುದ್ದಾಗಿಯೇ ಕಾಣುತ್ತವೆ. ಮನೆಗಳಲ್ಲಿ ನಾವು ಸಾಕುವ ನಾಯಿ ಬೆಕ್ಕುಗಳ ಮರಿಗಳು ಬಹಲ ಮುದ್ದಾಗಿರುತ್ತವೆ. ವಿಡಿಯೋದಲ್ಲಿ ಕಾಣುವ ಕಾರ್ಟನ್ ಬಾಕ್ಸ್ ನಲ್ಲಿನ ಮೂರು ಚಿರತೆ ಮರಿಗಳನ್ನು (leopard cubs) ನೋಡಿ. ಬೆಕ್ಕು ಮರಿಗಳಂತೆ (kitten) ಕಾಣುವ ಅವು ಸಹ ಮುದ್ದಾಗಿವೆ. ಅಂದಹಾಗೆ, ಮರಿಗಳು ಮೈಸೂರ ತಾಲ್ಲೂಕಿನ ಆಯರಹಳ್ಳಿ ಗ್ರಾಮದ ರೈತ ದ್ಯಾವಣ್ಣ ಎನ್ನುವವರ ಕಬ್ಬಿನ ಗದ್ದೆಯಲ್ಲಿ (sugarcane field) ಪತ್ತೆಯಾಗಿವೆ. ಕಬ್ಬು ಕಟಾವು ಮಾಡುತ್ತಿದ್ದಾಗ ಮರಿಗಳು ಕಂಡವೆಂದು ದ್ಯಾವಣ್ಣ ಹೇಳಿದ್ದಾರೆ. ಚಿರತೆಗಳ ಬಗ್ಗೆ ಅವರು ಅರಣ್ಯ ಇಲಾಣೆಯ ಅಧಿಕಾರಿಗಳ ತಿಳಿಸಿದಾಕ್ಷಣ ಅವರು ಸ್ಥಳಕ್ಕೆ ಬಂದು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಇದು ಕತೆಯ ಒಂಧು ಭಾಗ ಮಾತ್ರ ಆಯಿತು. ಮರಿಗಳಿಗೆ ಹಾಲುಣಿಸಲು ತಾಯಿ ಚಿರತೆ ಅವುಗಳಿಗೆ ಜನ್ಮ ನೀಡಿದ ಸ್ಥಳಕ್ಕೆ ಬಂದೇ ಬರತ್ತದೆ. ಅವು ಕಾಣದೆ ಹೋದಾಗ ಗಾಬರಿಗೊಳ್ಳುತ್ತದೆ ಮತ್ತು ತೀವ್ರ ಸ್ವರೂಪದ ಆಕ್ರಮಣಕಾರಿ ಪ್ರವೃತ್ತಿ ಪ್ರದರ್ಶಿಸಿದರೂ ಅಚ್ಚರಿಯಿಲ್ಲ. ಅದನ್ನು ಸೆರೆಹಿಡಿದು ಮರಿಗಳೊಂದಿಗೆ ಜೊತೆಗೂಡಿಸಿ ಕಾಡಿಗೆ ಬಿಡುವ ಉಪಾಯವನ್ನು ಅರಣ್ಯಾಧಿಕಾರಿಗಳು ರಚಿಸಿದ್ದಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on