‘ದಿಗ್ವಿಜಯ ಸಿನಿಮಾ ಶೂಟ್​ ವೇಳೆ ಬದುಕಿದ್ದೇ ಹೆಚ್ಚು’; ಥ್ರಿಲ್ಲರ್ ಮಂಜು

|

Updated on: Mar 14, 2023 | 10:31 AM

ಶೂಟಿಂಗ್ ವೇಳೆ 12 ಅಡಿಯಿಂದ ಜಿಗಿದೆ. ಆಗ ಎದೆ ಭಾಗಕ್ಕೆ ಏಟು ಬಿತ್ತು. ಕೆಲ ಸಮಯ ಉಸಿರೇ ಆಡಲಿಲ್ಲಎಂದಿದ್ದಾರೆ ಮಂಜು.

ಥ್ರಿಲ್ಲರ್ ಮಂಜು (Thriller Manju) ಅವರು ನಟನಾಗಿ, ಫೈಟ್​ ಮಾಸ್ಟರ್ ಆಗಿ, ಸ್ಟಂಟ್​ಮ್ಯಾನ್​ ಆಗಿ ಗುರುತಿಸಿಕೊಂಡಿದ್ದಾರೆ. ಶಂಕರ್​ನಾಗ್, ಅಂಬರೀಷ್ (Ambareesh) ಮೊದಲಾದವರು ದಿಗ್ವಿಜಯ ಚಿತ್ರದಲ್ಲಿ ನಟಿಸಿದ್ದಾರೆ. ಇದಕ್ಕೆ ಮಂಜು ಸ್ಟಂಟ್​ಮ್ಯಾನ್ ಆಗಿದ್ದರು. ‘ದಿಗ್ವಿಜಯ ಸಿನಿಮಾ ಶೂಟಿಂಗ್ ಮಲ್ಪೆಯಲ್ಲಿ ನಡೆಯುತ್ತಿತ್ತು. ಫೈಟಿಂಗ್ ದೃಶ್ಯ ಇತ್ತು. ಮೇಲಿಂದ ಎಗರುವ ದೃಶ್ಯ ಅದಾಗಿತ್ತು. 12 ಅಡಿಯಿಂದ ಜಿಗಿದೆ. ಆಗ ಎದೆ ಭಾಗಕ್ಕೆ ಏಟು ಬಿತ್ತು. ಕೆಲ ಸಮಯ ಉಸಿರೇ ಆಡಲಿಲ್ಲ’ ಎಂದಿದ್ದಾರೆ ಮಂಜು. ಟಿವಿ9 ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 14, 2023 10:16 AM