ಮೂರೂವರೆ ಶತಮಾನಗಳ ಇತಿಹಾಸ ಹೊಂದಿರುವ ನಾಗ್ಪುರ ಕೇಲಿ ಬಾಘ್ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅತ್ಯಂತ ತುರ್ತಾಗಿ ಆಗಬೇಕಿದೆ

Arun Kumar Belly

|

Updated on:Mar 14, 2023 | 11:59 AM

ದೇವಸ್ಥಾನ ಸಂಕೀರ್ಣವು ಸ್ಥಳೀಯ ಆಡಳಿತ ಮತ್ತು ಸರ್ಕಾರಗಳ ನಿಷ್ಕಾಳಜಿ ಹಾಗೂ ನಿರ್ಲಕ್ಷ್ಯತೆಯಿಂದ ಅನಾಥ ಸ್ಥಿತಿಯಲ್ಲಿದೆ. ದೇವಾಲಯ ಒಂದು ಹಳೆಯ ಗೋದಾಮಿನಂತೆ ಕಾಣುತ್ತಿದೆ.

ನಾಗ್ಪುರ: ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲೊಂದಾಗಿರುವ ಮತ್ತು ಕಿತ್ತಳೆ ಹಣ್ಣುಗಳಿಗೆ ಜಗತ್ಪ್ರಸಿದ್ಧವಾಗಿರುವ ನಾಗ್ಪುರ ನಗರದ ಕೆಲಿ ಬಾಘ್ ರಸ್ತೆಯಲ್ಲಿರುವ ಕೇಲಿ ಬಾಘ್ ದೇವಸ್ಥಾನ (Keli Bagh temple) ಸಂಕೀರ್ಣಕ್ಕೆ 350 ವರ್ಷಗಳ ಇತಿಹಾಸವಿದೆ. ನಿಮಗೆ ವಿಡಿಯೋದಲ್ಲಿ ಕಾಣಿಸುತ್ತಿರುವ ದೇವಾಸ್ಥಾನವವ್ವು ದೇವಾಲಯ ಸಂಕೀರ್ಣ ಅಂತ ಕರೆಯಲು ಕಾರಣವಿದೆ. ಇದರೊಳಗೆ ಗಣೇಶ, ಶಿವ, ರಾಮ ಮತ್ತು ಕಾಲಾ ಹನುಮಾನ ಗುಡಿಗಳಿವೆ. ದೇವಾಲಯದ ಅರ್ಚಕ ಕಿಶೋರ್ ವಾಷ್ಮಿಕರ್ (Kishore Washmikar) ಹೇಳುವ ಪ್ರಕಾರ ಪ್ರತಿದಿನ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ . ಅದರೆ ದೇವಸ್ಥಾನ ಸಂಕೀರ್ಣವು ಸ್ಥಳೀಯ ಆಡಳಿತ ಮತ್ತು ಸರ್ಕಾರಗಳ ನಿಷ್ಕಾಳಜಿ ಹಾಗೂ ನಿರ್ಲಕ್ಷ್ಯತೆಯಿಂದ ಅನಾಥ ಸ್ಥಿತಿಯಲ್ಲಿದೆ (orphan state). ದೇವಾಲಯ ಒಂದು ಹಳೆಯ ಗೋದಾಮಿನಂತೆ ಕಾಣುತ್ತಿದೆ. ‘ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುವುದು ಸಾಧ್ಯವೇ ಇಲ್ಲ ಅಂತ ನನಗನಿಸುತ್ತಿದೆ. ದೇವಸ್ತಾನದ ಹೊರಗೆ ಮತ್ತು ಒಳಗಿನ ಕಲಾತ್ಮಕತೆಯನ್ನು ಸಾರ್ವಜನಿಕರು ಸಹ ಗುರುತಿಸದಿರುವುದು ವಿಷಾದದ ಸಂಗತಿ’, ಎಂದು ವಾಷ್ಮಿಕರ್ ನೋವು ಮತ್ತು ನಿರಾಶೆ ತುಂಬಿದ ಧ್ವನಿಯಲ್ಲಿ ಹೇಳುತ್ತಾರೆ.

ಕೇಲಿ ಬಾಘ್ ದೇವಸ್ಥಾನದ ವಾಸ್ತುಶಿಲ್ಪವನ್ನು ಆಧಾರವಾಗಿಟ್ಟುಕೊಂಡು ಪುರಾತತ್ವ ಇಲಾಖೆಯು ಇದಕ್ಕೆ ಒಂದನೇ ಶ್ರೇಣಿಯ ಮಾನ್ಯತೆ ನೀಡಿದೆ. ದುಃಖಕರ ಸಂಗತಿಯೆಂದರೆ ಖುದ್ದು ಇಲಾಖೆಯೇ ದೇವಸ್ಥಾನವನ್ನು ಕಡೆಗಾಣಿಸಿದೆ.

ಇದನ್ನೂಓದಿ: ಭಾರತದ ಪ್ರಜಾಪ್ರಭುತ್ವದಲ್ಲಿ ವಿದೇಶಿ ಶಕ್ತಿಗಳಿಗೆ ಹಸ್ತಕ್ಷೇಪ ಮಾಡುವ ರೀತಿಯಲ್ಲಿ ರಾಹುಲ್ ಗಾಂಧಿ ಮಾತಾಡಿರುವುದು ಅಕ್ಷಮ್ಯ ಅಪರಾಧ -ಸದನದಲ್ಲಿ ಪ್ರಲ್ಹಾದ್ ಜೋಶಿ ಕಿಡಿ

‘ದೇವಸ್ಥಾನದ ಜಾಗ ಒತ್ತುವರಿಯಾಗಿದ್ದು ನಮಗೆ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರ ಮೂಲಕ ನಮಗೆ ಗೊತ್ತಾಗಿದೆ. ಇದು ನಿಜಕ್ಕೂ ದುರದೃಷ್ಟಕರ, ನಮ್ಮ ಮುಂದಿನ ಸಭೆಯಲ್ಲಿ ನಾವೇ ಖುದ್ದಾಗಿ ವಿಷಯವನ್ನು ಕೈಗೆತ್ತಿಕೊಂಡು ಚರ್ಚಸುತ್ತೇವೆ,’ ಎಂದು ನಾಗ್ಪುರ ಪುರಾತತ್ವ ಇಲಾಖೆಯ ಚೇರ್ಮನ್ ಅಶೋಕ್ ಮೋಖಾ ಹೇಳಿದ್ದಾರೆ.

ದೇವಸ್ಥಾನದ ಸುತ್ತಮುತ್ತ ವಾಸಿಸುವ ಜನ ಮತ್ತು ಅದರ ಅರ್ಚಕರು ಒತ್ತುವರಿ ಆಗಿರುವ ವಿಷಯವನ್ನು ಬಹಳ ಮೊದಲೇ ಇಲಾಖೆಯ ಗಮನಕ್ಕೆ ತರಬಹುದಾಗಿತ್ತು ಅಂತಲೂ ಮೋಖಾ ಹೇಳಿದ್ದಾರೆ.

ಇದನ್ನೂಓದಿ: ಮೂತ್ರವನ್ನು ತಡೆಹಿಡಿಯುವ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆ ಸೃಷ್ಟಿಸಬಹುದು

ಮಾಧ್ಯಮದಲ್ಲಿ ಆಗಿರುವ ವರದಿಗಳು ಕೇಲಿ ಬಾಘ್ ದೇವಸ್ಥಾನದ ಜೀರ್ಣೋದ್ಧಾರ, ಒತ್ತುವರಿ ತೆರವು ಮತ್ತು ಅದರ ಸುತ್ತಲಿನ ಪರಿಸರದ ಸ್ವಚ್ಛತೆಗೆ ಕಾರಣವಾದರೆ, 5 ತಲೆಮಾರುಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಅರ್ಚಕ ಕಿಶೋರ್ ವಾಷ್ಮಿಕರ್ ಕುಟುಂಬಕ್ಕಿಂತ ಹೆಚ್ಚು ಸಂತೋಷಪಡುವ ಕುಟುಂಬ ಮತ್ತೊಂದಿರಲಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on

Click on your DTH Provider to Add TV9 Kannada