ಬೆಂಗಳೂರು-ಮೈಸೂರು ನೂತನ ಹೆದ್ದಾರಿಯ ಬಿಡದಿ ಟೋಲ್ ಪ್ಲಾಜಾ ಸಿಬ್ಬಂದಿ ಮತ್ತು ವಾಹನ ಚಾಲಕರ ನಡುವೆ ಹೆಚ್ಚುತ್ತಿದೆ ಜಗಳ, ವಾಗ್ವಾದ!
ಬೆಂಗಳೂರು-ಮೈಸೂರು ನಡುವೆ ಓಡುವ ಕೆಎಸ್ ಆರ್ ಟಿಸಿ ಬಸ್ಸಿನ ಚಾಲಕರೊಬ್ಬರು ಸುತಾರಾಂ ಟೋಲ್ ಶುಲ್ಕ ನೀಡುವುದಿಲ್ಲ ಎಂದು ಜಗಳಕ್ಕೆ ಬೀಳುತ್ತಾರೆ.
ಬಿಡದಿ (ರಾಮನಗರ): ಬೆಂಗಳೂರು-ಮೈಸೂರು ನೂತನ ಹೆದ್ದಾರಿಯ ಬಿಡದಿ ಟೋಲ್ ಪ್ಲಾಜಾ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಪ್ರತಿಯೊಬ್ಬ ವಾಹನ ಚಾಲಕ ಟೋಲ್ ಪ್ಲಾಜಾ (toll plaza) ಸಿಬ್ಬಂದಿ ವಿಧಿಸುತ್ತಿರುವ ದುಬಾರಿ ಶುಲ್ಕದಿಂದ ಸಿಟ್ಟಿಗೇಳುತ್ತಿದ್ದಾರೆ. ಬೆಂಗಳೂರು-ಮೈಸೂರು ನಡುವೆ ಓಡುವ ಕೆಎಸ್ ಆರ್ ಟಿಸಿ ಬಸ್ಸಿನ ಚಾಲಕರೊಬ್ಬರು (KSRTC bus driver) ಸುತಾರಾಂ ಟೋಲ್ ಶುಲ್ಕ ನೀಡುವುದಿಲ್ಲ ಎಂದು ಜಗಳಕ್ಕೆ ಬಿದ್ದಿದ್ದಾರೆ. ಟೋಲ್ ಸಿಬ್ಬಂದಿ ಸಾರ್ ‘ನೀವು ಶುಲ್ಕ ಪಾವತಿಸದಿದ್ದರೆ ನಮ್ಮ ಸಂಬಳದಿಂದ ಕಿತ್ತುಕೊಳ್ಳುತ್ತಾರೆ’ ಎಂದು ಹೇಳಿದರೂ ಬಸ್ ಚಾಲಕನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದೇ ಸಮಯಕ್ಕೆ ಬಸ್ಸಿನಲ್ಲಿರುವ ಪ್ರಯಾಣಿಕರು (passengers) ಸಹ ಸಿಬ್ಬಂದಿ ಜೊತೆ ವಾದಕ್ಕೆ ಬೀಳುತ್ತಾರೆ. ಕೊನೆಗೆ ಟೋಲ್ ಪ್ಲಾಜಾ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಬಸ್ ಚಾಲಕನಿಂದ ಟೋಲ್ ಸಂಗ್ರಹಿಸಿದೆ ಕಳಿಸಿಬಿಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Published on: Mar 14, 2023 01:25 PM
Latest Videos