Thunderstorm and rains in Belagavi: ಬೆಳಗಾವಿ ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆ!

Thunderstorm and rains in Belagavi: ಬೆಳಗಾವಿ ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2023 | 6:49 PM

ಹಾಗೆಯೇ, ರಾಯಭಾಗ ತಾಲೂಕಿನ ಕುಡಚಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಮಳೆ ಧಾರಾಕಾರವಾಗಿ ಸುರಿದಿದೆ.       

ಬೆಳಗಾವಿ: ಅಕಾಲಿಕ ಮಳೆ ಕೇವಲ ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲಿ ಮಾತ್ರ ಆಗದೆ ಕಿತ್ತೂರು ಕರ್ನಾಟಕ ಭಾಗದಲ್ಲೂ (Kittur Karnataka region) ಆಗುತ್ತಿದೆ. ಈ ವಿಡಿಯೋ ನೋಡಿ. ಬೆಳಗಾವಿ ಜಿಲ್ಲೆಯ ಕಾಗವಾಡ (Kagwada) ಮತ್ತು ರಾಯಬಾಗ್ (Raibagh) ತಾಲ್ಲೂಕುಗಳಲ್ಲಿ ಇಂದು ಮಧ್ಯಾಹ್ನ ಬಿರುಗಾಳಿ ಸಮೇತ ಜೋರು ಮಳೆಯಾಗಿದೆ. ಎರಡೂ ಕಡೆಗಳಲ್ಲಿ ಆಲಿಕಲ್ಲು (hailstorm) ಸುರಿದ ಮಾಹಿತಿ ನಮಗೆ ಲಭ್ಯವಾಗಿದೆ ಮತ್ತು ಮೊಬೈಲ್ ಕೆಮೆರಾದಲ್ಲಿ ಶೂಟ್ ಮಾಡಿರುವ ವಿಡಿಯೋದಲ್ಲಿ ಆಲಿಕಲ್ಲು ಬೀಳುತ್ತಿರುವುದನ್ನು ನೋಡಬಹುದಾಗಿದೆ. ಕಾಗವಾಡ ತಾಲೂಕಿನ ಮೊಳೆ,‌ ಉಗಾರಖುರ್ದ್ ಮತ್ತು ಕಾಗವಾಡದಲ್ಲಿ ಭಾರಿ ಮಳೆಯಾಗಿದೆ. ಹಾಗೆಯೇ, ರಾಯಭಾಗ ತಾಲೂಕಿನ ಕುಡಚಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಮಳೆ ಧಾರಾಕಾರವಾಗಿ ಸುರಿದಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ